ಐಸ್‌ ಮಹಲ್ ಚಿತ್ರದ ಚಿತ್ರೀಕರಣದ ವೇಳೆ ಪಲ್ಟಿಯಾದ ಟ್ರ್ಯಾಕ್ಟರ್‌..!!

ಹೊಸಬರೇ ಸೇರಿಕೊಂಡು ನಿರ್ಮಾಣ ಮಾಡುತ್ತಿರುವ ಐಸ್‌ ಮಹಲ್‌ ಸಿನಿಮಾದ ಚಿತ್ರೀಕರಣದ ವೇಳೆ ದುರಂತ ಸಂಭವಿಸಿದೆ. ಈ ಸಿನಿಮಾದ ನಿರ್ದೇಶನ ಹಾಗೂ ನಾಯಕ ನಟರಾಗಿ ಕಿಶೋರ್ ನಟಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ವೇಳೆ ಕಿಶೋರ್‌ ಸಹೋದರ ಕೃಷ್ಣ ಟ್ರ್ಯಾಕ್ಟರ್‌ ಓಡಿಸುವ ವೇಳೆ ಟ್ರ್ಯಾಕ್ಟರ್‌ ಪಲ್ಟಿಯಾಗಿ ಕೃಷ್ಣ ಅವರ ಕೈ ಮುರಿದಿದೆ.

ಕಡೂರಿನ ವಗರೆಹಳ್ಳಿಯ ಗದ್ದೆಯಲ್ಲಿ ಸಿನಿಮಾದ ಶೂಟಿಂಗ್‌ ನಡೆಸಲಾಗುತ್ತಿತ್ತು. ಸಿನಿಮಾದ ಕೊನೆಯ ದಿನದ ಚಿತ್ರೀಕರಣವದ ವೇಳೆ ಘಟನೆ ಸಂಭವಿಸಿದೆ. ಸದ್ಯ ವಗೆರೆಹಳ್ಳಿ ಬಳಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಕೃಷ್ಣ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com