ಮೊಟ್ಟ ಮೊದಲ ಬಾರಿಗೆ ಕ್ಯಾಂಪಸ್‌ ಸೆಲೆಕ್ಷನ್‌ಗಾಗಿ ಭಾರತಕ್ಕೆ ಬರಲಿದೆ ಆ್ಯಪಲ್‌ ಕಂಪನಿ

ಹೈದರಾಬಾದ್‌ : ಮೊಟ್ಟ ಮೊದಲ ಬಾರಿಗೆ ಆ್ಯಪಲ್‌ ಐಫೋನ್‌ ತಯಾರಿಕಾ ಕಂಪನಿ ಭಾರತದಲ್ಲಿ ಕ್ಯಾಂಪಸ್‌ ಸೆಲೆಕ್ಷನ್‌ಗಾಗಿ ಬರುತ್ತಿದೆ. ಈ ವರ್ಷ ಹೈದರಾಬಾದ್‌ನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (IIT)ಯಲ್ಲಿ ಕ್ಯಾಂಪಸ್‌ ಸೆಲೆಕ್ಷನ್ ನಡೆಸಲಿದೆ.

ಸಂಸ್ಥೆಗೆ ಬೇಕಾಗಿರುವ ಅರ್ಹತೆ ಇರುವ ವಿದ್ಯಾರ್ಥಿಗಳು ನಮ್ಮಲ್ಲಿ ಇದ್ದಾರೋ ಇಲ್ಲವೋ ತಿಳಿದಿಲ್ಲ. ಆದರೆ ಅಂತಹ ದೊಡ್ಡ ಕಂಪನಿ ನಮ್ಮಲ್ಲಿಗೆ ಬರುತ್ತಿರುವುದು ಸಂತಸದ ವಿಷಯ ಎಂದು ಹೈದರಾಬಾದ್‌ ಐಐಟಿಯ ಎಂಪ್ಲಾಯ್‌ಮೆಂಟ್‌ ಸೆಲ್‌ನ ಮುಖ್ಯಸ್ಥ ಟಿ. ವಿ ದೇವೀ ಪ್ರಸಾದ್‌ ಹೇಳಿದ್ದಾರೆ.

ಆ್ಯಪಲ್‌ ಕಂಪನಿ ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಕಚೇರಿಗಳನ್ನು ತೆರೆಯುತ್ತಿದೆ. ಅದಕ್ಕಾಗಿ ಕ್ಯಾಂಪಸ್‌ ಸೆಲೆಕ್ಷನ್‌ ನಡೆಸುತ್ತಿದೆ. ಬರೀ ಆ್ಯಪಲ್ ಮಾತ್ರವಲ್ಲದೆ ಮೈಕ್ರೋಸಾಫ್ಟ್‌, ಗೂಗಲ್‌, ಫಿಲಿಫ್‌ ಕಂಪನಿಗಳೂ ಭಾರತಕ್ಕೆ ಬರಲಿವೆ ಎನ್ನಲಾಗುತ್ತಿದೆ.

ಮುಂಬರುವ  ಡಿಸೆಂಬರ್‌ ತಿಂಗಳಲ್ಲಿ ಸಂದರ್ಶನ ನಡೆಯಲಿದ್ದು, ಬಿಇ, ಬಿಟೆಕ್‌, ಎಂಟೆಕ್‌, ಎಂಎಸ್‌ಸಿ ಯಲ್ಲಿ 350 ವಿದ್ಯಾರ್ಥಿಗಳು ಈಗಾಗಲೆ ಹೆಸರು ನೊಂದಾಯಿಸಿದ್ದಾರೆ ಎಂದು ತಿಳಿದುಬಂದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com