ವಿದೇಶಿಗನ ಬಹುಮಾನದಿಂದ 32ಲಕ್ಷ ಕಳೆದುಕೊಂಡ  ಮಂಗಳೂರು ಮಹಿಳೆ..!!

   ಸುಜಿತ್ ಕಳಸ

ನಿಮಗೆ ಬಹುಮಾನ ಬಂದಿದೆ, ಲಾಟರಿ ಹೊಡೆದಿದೆ, ಡಿಸ್ಕೌಂಟ್ಸ್ ನೀಡುತ್ತಿದ್ದೇವೆ ಎಂದೆಲ್ಲಾ ಸುಳ್ಳು ಹೇಳಿಕೊಂಡು ಮುಗ್ದಜನರನ್ನು ಮೋಸ ಮಾಡುವ ದೊಡ್ಡ ಖದೀಮರ ತಂಡ ಆನ್‌ಲೈನ್ ಪ್ರಪಂಚದಲ್ಲಿದೆ.! ಇವರು ವಿವಿಧ ರೀತಿಯಲ್ಲಿ ಜನರನ್ನು ನಂಬಿಸಿ ಅವರಿಂದ ಹಣವನ್ನು ದೋಚುತ್ತಿದ್ದು, ಇದಕ್ಕೆ ಸೂಕ್ತಪರಿಹಾರ ಇನ್ನೂ ದೊರಕಿಲ್ಲ.!!

ಇದೇ ರೀತಿಯ ಮತ್ತೊಂದು ಪ್ರಕರಣ ಮಂಗಳೂರು ನಗರ ಸೈಬರ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರತಿಷ್ಠಿತ ಕಂಪನಿಯಿಂದ ನಿಮಗೆ ಬಹುಮಾನ ಬಂದಿದೆ. ಆ ಬಹುಮಾನ ನಿಮಗೆ ತಲುಪಿಸಬೇಕಾದರೆ ಟ್ಯಾಕ್ಸ್, ಅಕೌಂಟ್ ಫೀ ಎಲ್ಲವನ್ನು ತುಂಬುಬೇಕು ಎಂದು ನಂಬಿಸಿ ಆನ್‌ಲೈನ್‌ ಮುಖಾಂತರ ಮಹಿಳೆಯೋರ್ವರಿಗೆ 32,03,638ಲಕ್ಷ ರೂ. ವಂಚಿಸಿದ್ದಾರೆ.!!

ಮಂಗಳೂರು ನಿವಾಸಿ ಮಹಿಳೆಯೋರ್ವರಿಗೆ appledraw.us@hotmail.com ಮೇಲ್ ಅಡ್ರೆಸ್‌ನಿಂದ ನಿಂದ ಒಂದು ಮೇಲ್‌ ಬಂದಿದ್ದು, ಆ ಮೇಲ್‌ನಲ್ಲಿ ಪ್ರತಿಷ್ಠಿತ ಕಂಪೆನಿಯಿಂದ 3ನೇ ಬಹುಮಾನ 485000.00 ಯುಎಸ್‌ಡಿ ಡಾಲರ್‌ ಬಂದಿದೆ. ನೀವು ಬಹುಮಾನದ ವಿಜೇತರು ಎಂದು ಮೇಲ್‌ನಲ್ಲಿ ತಿಳಿಸಿದ್ದಾರೆ.!! ಕಸ್ಟಮ್ಸ್ ತೆರಿಗೆ ಕಟ್ಟಬೇಕು!! 485000.00 ಯುಎಸ್‌ಡಿ ಡಾಲರ್‌ ನಿಮಗೆ ಬಹುಮಾನವಾಗಿ ಬಂದಿದ್ದು, ಈ ಹಣವನ್ನು ನೀವು ಪಡೆಯಲು ತಗಲುವ ಇಂಡಿಯನ್‌ ಕಸ್ಟಮ್ಸ್ ತೆರಿಗೆ ಕಟ್ಟಬೇಕು ಎಂದು ಮತ್ತೆ ಸಂದೇಶ ಕಳುಹಿಸುಸಿದ್ದಾರೆ. ವಿಳಾಸವನ್ನು ಯುಎಸ್‌ನ ಜಾನ್‌ ಅಂಡ್ರೂ ಎಂಬುವವರ ಅಡ್ರಸ್ ನೀಡಿದ್ದಾರೆ.!!  ಇಂತಹ ವಂಚನೆಗಳ ಬಗ್ಗೆ ಸ್ವಲ್ಪ ಅರಿವಿರುವ ಮಹಿಳೆ ಇವರಾಗಿದ್ದರೂ ಸಹ ಯುಎಸ್‌ನ ಜಾನ್‌ ಅಂಡ್ರೂ ಎಂಬವರ ಅಡ್ರಸ್ ಇದ್ದುದ್ದರಿಂದ ಈ ಬಹುಮಾನ ನಿಜವಾಗಿಯೂ ಬಂದಿರಬಹುದು ಎಂದು ನಂಬಿದ್ದಾರೆ. ಅವರಿಗೆ ಮರು ಸಂದೇಶ ಕಳುಹಿಸಿ ನಾನು ಹಣ ನೀಡಲು ಸಿದ್ಧ ಎಂದು ಹೇಳಿದ್ದಾರೆ.!!

ಈ ಮಹಿಳೆ ನಾನು ಹಣ ನೀಡಲು ಸಿದ್ದವಾದ ನಂತರ, ಹಿರಾ ಗುಪ್ತ ಎಂಬವರ ಖಾತೆಯೊಂದನ್ನು ಅವರಿಗೆ ನೀಡಿ ಮೊದಲು ರೂ.10,500 ನೀಡುವಂತೆ ತಿಳಿಸಿದ್ದಾರೆ. ನಂತರ ಆದಾಯ ತೆರಿಗೆ, ಆಂಟಿ ಟೆರರಿಸ್ಟ್ ಸರ್ಟಿಫಿಕೇಟ್, ಅಕೌಂಟ್ ತೆರಿಗೆ ಎಂಬೆಲ್ಲಾ ಸುಳ್ಳು ಹೇಳಿ, 10 ಸಾವಿರ, 20 ಸಾವಿರ, ಲಕ್ಷಗಳ ಲೆಕ್ಕದಲ್ಲಿ 32 ಲಕ್ಷ ಹಣವನ್ನು ದೋಚಿದ್ದಾರೆ.!!

32,03,638ರೂ. ಹಣವನ್ನು ಖದೀಮರಿಗೆ ತಲುಪಿಸಿದ ನಂತರೂ ಮಹಿಳೆಗೆ ಯಾವುದೇ ಬಹುಮಾನ ಬಾರದಿದ್ದಾಗ, ತಾನು ಮೋಸಹೋಗಿದ್ದೇನೆ ಎಂದು ತಿಳಿದು ನಗರದ ಸೈಬರ್‌ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published.