ಸಿಎಂ ತಲೆ ತಿರುಕ, ಬುರುಡೆ ದಾಸ ಎಂದ ಬಿ.ಎಸ್‌ ಯಡಿಯೂರಪ್ಪ

ತುಮಕೂರು : ತಲೆ ತಿರುಕ, ಬುರುಡೆ ದಾಸ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜ್ಯಕ್ಕೆ ಮೋಸವಾಗುತ್ತಿದೆ ಎಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿಯ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಸರ್ಕಾರದ ಕಜಾನೆ ಲೂಟಿ ಮಾಡುತ್ತಿದ್ದಾರೆ. ಸಿಎಂ ಬುರುಡೆ ದಾಸ. ಸುಳ್ಳು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ತುಮಕೂರನ್ನು ಕೇಂದ್ರ ಸರ್ಕಾರ ಸ್ಮಾರ್ಟ್‌ ಸಿಟಿಯಾಗಿ ಘೋಷಿಸಿದ್ದು, ಹೆದ್ದಾರಿಗಳು ಮೇಲ್ದರ್ಜೆಗೇರಿವೆ. ಜಿಲ್ಲೆಗೆ ಪಾಸ್‌ ಪೋರ್ಟ್‌ ಸೇರಿದಂತೆ ಹಲವು ಸೌಕರ್ಯವನ್ನು ಕೇಂದ್ರ ಸರ್ಕಾರ ಮಾಡಿಕೊಟ್ಟಿದೆ ಎಂದಿದ್ದಾರೆ.

20 ತಿಂಗಳ ಅಧಿಕಾರದ ಬಳಿಕ ದೇವೇಗೌಡರು ಹಾಗೂ ಎಚ್ಡಿಕೆ ಷರತ್ತು ಹಾಕಿದ ಕಾರಣ ರಾಜೀನಾಮೆ ನೀಡಿದೆ. ಈಗ ತುಮಕೂರಿನಲ್ಲಿ ಬಿಜೆಪಿ ಪಿರವರ್ತನೆಯ ಗಾಳಿ ಬೀಸುತ್ತಿದೆ. ಸಿಎ ಸರ್ಕಾರ ದುಡಿಯುವ ಕೈಗಳಿಗೆ ಅವಕಾಶ ನೀಡುತ್ತಿಲ್ಲ. ಸರ್ಕಾರದಲ್ಲಿ ಹಣಕ್ಕಿಂತ ಪ್ರಾಮಾಣಿಕತೆಯ ಕೊರತೆ ಇದೆ ಎಂದು ಆರೋಪಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com