ಏರ್ ಇಂಡಿಗೋ ಸಿಬ್ಬಂದಿಯ ಅಸಭ್ಯ ವರ್ತನೆ : ಬೇಸರ ವ್ಯಕ್ತಪಡಿಸಿದ ಪಿ.ವಿ ಸಿಂಧು

ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಟ್ವಿಟರ್ ಖಾತೆಯ ಮೂಲಕ ಏರ್ ಇಂಡಿಗೋ ಸಂಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ನವೆಂಬರ್ 4 ರಂದು ಹೈದರಾಬಾದಿನಿಂದ ಮುಂಬೈಗೆ ವಿಮಾನದಲ್ಲಿ ತೆರಳುವ ಸಂದರ್ಭದಲ್ಲಿ ಏರ್ ಇಂಡಿಗೋ ಸಂಸ್ಥೆಯ ಗ್ರೌಂಡ್ ಸ್ಟಾಫ್ ಸಿಬ್ಬಂದಿಯೊಬ್ಬರ ವರ್ತನೆಗೆ ಸಿಂಧು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ಗಾತ್ರಕ್ಕಿಂತ ದೊಡ್ಡದಾದ ಬ್ಯಾಗನ್ನು ಸಿಂಧು ತಮ್ಮ ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದಾಗ, ‘ ಇಷ್ಟು ದೊಡ್ಡ ಬ್ಯಾಗನ್ನು ಕ್ಯಾಬಿನ್ ಒಳಗೆ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ, ಒಂದು ವೇಳೆ ಹಾಗೆ ಮಾಡಿದ್ದೇ ಆದಲ್ಲಿ ಸಹಪ್ರಯಾಣಿಕರಿಗೆ ತೊಂದರೆಯಾಗುತ್ತದೆಎಂದು ಗ್ರೌಂಡ್ ಸ್ಟಾಫ್ ಸಿಬ್ಬಂದಿ ಅಜಿತೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಏರ್ ಇಂಡಿಗೋ ವಿಮಾನ ಸಂಸ್ಥೆಯ ಗ್ರೌಂಡ್ ಸ್ಟಾಫ್ ಸಿಬ್ಬಂದಿಯ ಅಜಿತೇಶ್ ಎಂಬ ವ್ಯಕ್ತಿ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ‘ ಎಂದು ಸಿಂಧು ತಮ್ಮ ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com