ನಮ್ಮ ಪುಟ್ಟಗೌರಿ ಮುಂದೆ ಬಿಗ್‌ಬಾಸ್‌ ಕೂಡಾ ಠುಸ್……!!!!?

ಕೆಲ ದಿನಗಳಿಂದ ಕಿರುತೆರೆಯಲ್ಲಿ ಪುಟ್ಟಗೌರಿ ಮದುವೆ ಹಾಗೂ ಬಿಗ್‌ಬಾಸ್‌ನದ್ದೇ ಮಾತು. ಬಿಗ್‌ಬಾಸ್‌ ಸೀಸನ್ 5 ಶುರುವಾದ ಮೇಲೆ ಪುಟ್ಟಗೌರಿ ಮದುವೆ ಧಾರಾವಾಹಿ ಮೂಲೆ ಗುಂಪಾಗುತ್ತದೆ. ಆಮೇಲೆ ಬಿಗ್‌ಬಾಸ್‌ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತದೆ ಎಂಬ ಊಹಾಪೋಹಗಳು ಶುರುವಾಗಿದ್ದವು. ಅದರಲ್ಲೂ ಬಿಗ್‌ಬಾಸ್‌ನ ಕಂಗ್ಲೀಷ್‌ ರಾಣಿ ನಿವೇದಿತಾಗೆ ಪುಟ್ಟಗೌರಿಗೆ ಮಾಡಿದ್ದಕ್ಕಿಂತ ಹೆಚ್ಚಿನ ಮಂದಿ ಟ್ರೋಲ್‌ ಮಾಡಲಾಗಿತ್ತು.

ಇಷ್ಟು ದಿನ ಪುಟ್ಟಗೌರಿ ಮಾತ್ರ ಟ್ರೋಲ್‌ ಪೇಜ್‌ಗಳಿಗೆ ಆಹಾರವಾಗಿದ್ದಳು. ಆದರೆ ಬಿಗ್‌ಬಾಸ್‌ ಬಂದ ಬಳಿಕ ನಿವೇದಿತಾ ಟ್ರೋಲ್‌ ಪೇಜ್‌ಗೆ ಮತ್ತಷ್ಟು ಮಜಾ ನೀಡಿದ್ದಳು. ಇಷ್ಟೆಲ್ಲಾ ಆದರೂ ನಮ್ಮ ಹಳೆಯ ಪುಟ್ಟಗೌರಿಯನ್ನು ಯಾರೂ ಮರೆತಿಲ್ಲ.

ಹೌದು ಬಿಗ್‌ಬಾಸ್‌ ಬಂದರೂ ಪುಟ್ಟಗೌರಿ ಮಾತ್ರ ಎಲ್ಲರ ಮನೆ ಮನಗಳಲ್ಲಿ ಅಚ್ಚಳಿಯದೇ ಉಳಿದಿದ್ದಾಳೆ. ಯಾರೇ ಏನೇ ಮಾಡಿದರೂ ಪುಟ್ಟಗೌರಿಯನ್ನು ಮೀರಿಸಲು ಸಾಧ್ಯವಾಗುತ್ತಿಲ್ಲವಂತೆ. ಟಿಆರ್‌ಪಿಯಲ್ಲೂ ಬಿಗ್‌ಬಾಸ್‌ಗಿಂತ ಪುಟ್ಟಗೌರಿ ಮುಂದಿದ್ದಾಳೆ.

ಈ ವಾರದ ಬಾರ್ಕ್ ಇಂಡಿಯಾದ ರೇಟಿಂಗ್‌ ಬಹಿಂರಗಗೊಂಡಿದ್ದು, ಇದರಲ್ಲಿ ಟಾಪ್‌ 5ರಲ್ಲಿ ಬಿಗ್‌ಬಾಸ್‌ ಹೆಸರೇ ಇಲ್ಲ. ಮೊದಲ ಸ್ಥಾನ ಪುಟ್ಟಗೌರಿಗೆ ಸಿಕ್ಕರೆ ಅಗ್ನಿಸಾಕ್ಷಿ, ಲಕ್ಷ್ಮಿ ಬಾರಮ್ಮ ಸಹ ಟಾಪ್‌ 5 ಲಿಸ್ಟ್‌ನಲ್ಲಿವೆ.

 

Leave a Reply

Your email address will not be published.

Social Media Auto Publish Powered By : XYZScripts.com