ರಾಜಕೀಯ ಬಿಗ್ ಬಾಸ್ ಪಾರ್ಟ್ 2 : ನಕ್ಕೂ ನಕ್ಕೂ ಹೊಟ್ನೋವ್ ಬಂದ್ರೆ ನಾವ್ ಜವಾಬ್ದಾರಿ ಅಲ್ಲ….

ಟಿ.ಕೆ‌.ದಯಾನಂದ್ ಅವರ ಫೇಸ್‌ಬುಕ್‌ ವಾಲ್‌ನಿಂದ

ರೀಕ್ಯಾಪ್
(ಹಿಂದಿನ ಸಂಚಿಕೆಯಲ್ಲಿ ಸಿದ್ರಾಮಯ್ಯ ಮತ್ತು ಬಿಗ್ ಬಾಸ್ ನಡುವೆ ಜಗಳ ಆಗಿ ಸಿದ್ರಾಮಯ್ಯನೋರು ಹೆಗಲ ಮೇಲೆ ಟವೆಲ್ ಎಸ್ಕಂಡು ಬಿಗ್ ಬಾಸ್ ಮನೆಯಿಂದ ತಮ್ಮ ಮಾನಸಪುತ್ರಿ ರಮ್ಯ ಸ್ಪಂದನ ಜೊತೆಗೆ ಹೊರಗೋಗೋಕೆ ಹೊರಟಿದ್ರು. ಇವರಿಬ್ರೂ ತೊಲಗಿದ್ರು ಸಾಕು ಅಂತ ಕಾಯ್ಕೋಂಡು ಕುಂತಿದ್ದ ಬಿಗ್ ಬಾಸ್ ಮನೆಯ ಕಮಲಪಕ್ಷದ ಗಿಣಿ-ಗೊರವಂಕಗಳು ಫುಲ್ ಖುಷಿ ಆಗಿದ್ವು. ಇದ್ರ ನಡುವೆ ಸಿದ್ರಾಮಯ್ಯನೋರ ಕ್ಷಿಪ್ರಕ್ರಾಂತಿಯಿಂದ ಗಾಬರಿಗೊಂಡ ಬಿಗ್ ಬಾಸು, ಫುಲ್ ಕನ್ ಫ್ಯೂಸ್ ಆಗಿ ತಲೆಕೆರಕಂಡು ನಿಂತ ಕಂಡಿದ್ರು. ಎಪಿಸೋಡ್ ಅಲ್ಲಿಗೆ ಮುಗಿದಿತ್ತು, ಇದೀಗ ಹೊಸ ಎಪಿಸೋಡಿನಲ್ಲಿ.. ಬಿಗ್ ಬಾಸ್ ಶೋ ಮನೆಯ ಡೋರ್ ಓಪೆನ್ ಮಾಡದೆ ಇದ್ದುದರಿಂದ ಸಿದ್ರಾಮಯ್ಯ ಮತ್ತು ರಮ್ಯ ಸ್ಪಂದನ ಇಬ್ಬರೂ ಮೈನ್ ಡೋರ್ ತೆಗೀಲಿ ಅಂತ ವೆಯ್ಟ್ ಮಾಡ್ತ ಇದಾರೆ.)

ಸಿದ್ರಾಮಯ್ಯ: ನೋಡ್ರಿ ಬಿಗ್ ಬಾಸು.. ಇದೇ ಕೊನೇ ಸತಿ ಹೇಳ್ತ ಇದೀನಿ. ಡೋರ್ ತೆಗುದ್ರೆ ಸರಿ, ಇಲ್ಲಾಂದ್ರೆ ಮನೆ ಒಳಗಿರೋ ಕಮಲಪಕ್ಷದೋರನ್ನೆಲ್ಲ ಗೋಡೆ ಪಕ್ಕ ಒಬ್ರ ಮೇಲೊಬ್ರು ಮಲಗಿಸಿಬುಟ್ಟು, ಅವ್ರನ್ನ ಹತ್ಕಂಡು ಕಾಂಪೋಂಡ್ ಹಾರಿ ವಂಟೋಯ್ತಿನಿ. ಈ ಗ್ರೇಟ್ ಎಸ್ಕೇಪ್ ಟೈಮಲ್ಲಿ ಯಡ್ಡಪ್ಪನೋರ ತಲೆ ಒಡದೋದ್ರೆ ನಾನ್ ರೆಸ್ಪಾನ್ಸಿಬಲಿಟಿ ತಗಳಕಾಯ್ಕಿಲ್ಲ.. ಅಷ್ಟೇ.

ರಮ್ಯ ಸ್ಪಂದನ: ಸ್ಸರ್, ವೈ ಆರ್ ಯೂ ಟೇಕಿಂಗ್ ರಿಸ್ಕ್ ಇನ್ ದಿಸ್ ಏಜ್.. ಗೋಡೆ ಹತ್ತೋವಾಗ ನೀವೇನಾದ್ರೂ ಜಾರಿ ಬಿದ್ರೆ ಪಾಪ ಒಬ್ರ ಮೇಲೆ ಒಬ್ರು ಉದ್ದುದ್ದ ಮಲಗಿರೋ ಇವ್ರೆಲ್ಲ ಪೂರ್ ಗಯ್ಸ್ ಡೆಡ್ ಆಗೋಗ್ತರೆ. ಮೊದ್ಲೇ ನಿಮ್ದು ಮೀನು-ಕೋಳಿ ಫುಡ್. ಬಟ್ ಇವ್ರು ಹಾಗಲ್ಲ,, ಸೊಪ್ಪುಸೆದೆ-ಮರಗೆಣಸು ಮೂಲಂಗಿ ತಿನ್ನೋರು ಪೂರ್ ಫೆಲೋಸ್ ಅನ್ಯಾಯವಾಗಿ ಡೆಡ್ ಆಗೋಗ್ತಾರೆ ಸ್ಸರ್.. ಪ್ಲೀಸ್ ಡೋಂಟ್ ಡೂ ದಟ್.

ಮುತಾಲಿಕ್ : (ಮೆಲ್ಲಗೆ ಸ್ವಿಮಿಂಗ್ ಫೂಲ್ ಬಳಿ ಇರೋ ಕೆಮೆರಾ ಬಳಿ ಬಂದು ಪಿಸುಗುಡುವರು) ಬಿಗ್ ಬಾಸ್.. ಈ ಸಿದ್ರಾಮಯ್ಯೋರು ಮತ್ತೆ ಆ ತರ್ಲೆಹುಡುಗಿ ಫಸ್ಟು ಇಲ್ಲಿಂದ ಹೋಗ್ಬೇಕು ಬಿಗ್ ಬಾಸ್. ನೀವು ಡೋರ್ ಓಪನ್ ಮಾಡ್ತೀರ, ಇಲ್ಲಾ ನಾನೇ ಮೈನ್ ಡೋರನ್ನ ನನ್ ಬುಲ್ಡೇಲಿ ಗುದ್ದಿ ಗುದ್ದಿ ಗುದ್ದಿ ಓಪೆನ್ ಮಾಡ್ಬೇಕ. ಬೇಗ ಹೇಳಿ.

(ಕಮಲ ಪಕ್ಷದವರೆಲ್ಲರೂ ಒಂದು ಕಡೆಯಲ್ಲಿ ಜಮಾಯಿಸಿ ಇವರಿಬ್ರೂ ಯಾವಾಗ ಹೋಗ್ತಾರೋ ಅವಾಗ್ಲೇ ನಮಗೆ ನೆಮ್ದಿ ಎಂಬಂತೆ ಸಿದ್ರಾಮಯ್ಯ, ರಮ್ಯ ಸ್ಪಂದನ ಹೋಗುವುದನ್ನೇ ಕಾಯುತ್ತಿದ್ದಾರೆ.. ಈ ಉದ್ವೇಗ ತಡೆಯಲಾಗದೆ ಯಡ್ಡಪ್ಪನವರು ಕೋಭಕ್ಕನ ಎಡಗೈ ಬೆರಳುಗಳ ಉಗುರನ್ನು ಕಚ್ಚಿ ಕಚ್ಚಿ ನೆಲಕ್ಕೆ ಉಗುಳುತ್ತಿದ್ದಾರೆ. ಪ್ರಪಾತ ಸಿಂಹನು, ಇದ್ಯಾವುದರ ಪರಿವೆಯೂ ಇಲ್ಲದೆ ಬಿಗ್ ಬಾಸ್ ಈ ಹಿಂದೆ ಕೊಟ್ಟಿದ್ದ ಲಕ್ಷುರಿ ಬಜೆಟ್ ಟಾಸ್ಕ್ “ ಸೆಗಣಿ ಆಟ – ಬಗನಿ ಗೂಟ”ದಲ್ಲಿ ಗೆದ್ದಿದ್ದ ಚಿಕನ್ ಅನ್ನು ಯಾರಿಗೂ ಕಾಣದಂತೆ ಬೇಯಿಸುತ್ತಿದ್ದಾನೆ. ಇದರ ಘಮವು ಸಿದ್ರಾಮಯ್ಯನವರ ಮೂಗಿಗೆ ಬಡಿದಿದೆ.. ವಾಸನೆ ಹಿಡಿಯುತ್ತ ಬಂದ ಅವರು ಪ್ರತಾಪನೆದುರು ನಿಲ್ಲುತ್ತಾರೆ )

ಸಿದ್ರಾಮಯ್ಯ: ಪ್ರಪಾತು..ಯಾಕೋ ಮರಿ ಹಿಂಗೆ ಒಣಗೋಗಿದೀಯ.. ತುಂಬ ಸಣ್ಣ ಆಗೋಗಿದಿಯಲ್ಲೋ.. ಹೋಗಿ ಹೋಗಿ ಆ ಮೂಲಂಗಿ ಪಾರ್ಟಿನೋರ ಜೊತೆ ಸೇರ್ಕಂಡು ಹಿಂಗಾಗೋದಲ್ಲೋ ಕಂದ.. (ಪ್ರಪಾತನ ತಲೆ ನೇವರಿಸುತ್ತಾರೆ)

ಪ್ರಪಾತ ಸಿಂಹ: ಈ ಡವ್ ಎಲ್ಲ ಬ್ಯಾಡ.. ಹೋಗಿ ತಟ್ಟೆ ತಗಬನ್ನಿ ಚಿಕನ್ ಹಾಕ್ತಿನಿ.. ಬೆಂದಿದೆಯಾ ಇಲ್ವಾ, ಉಪ್ಪು ಸರಿಯಾಗ್ ಹಿಡಿದಿದೆಯ ಇಲ್ವಾ ಅಂತ ಸ್ವಲ್ಪ ಹೇಳಿ..
ಸಿದ್ರಾಮಯ್ಯ : (ತಟ್ಟೆ ತೆಗೆದುಕೊಂಡು ಬಂದು ಚಿಕನ್ ಪೀಸ್ ಹಾಕಿಸಿಕೊಂಡು ತಿನ್ನುತ್ತ ಚೀಟಿರವಿಯತ್ತ ಪೀಸ್ ತೋರಿಸಿ) ಬೇಕೇನೋ.. ಲೆಗ್ ಪೀಸ್ ಐತೆ ಬಾರ್ಲ ತಿನ್ನುವಂತೆ..

ಚೀಟಿ ರವಿ : (ಯಡ್ಡಪ್ಪನ ಕಡೆಗೆ ನೋಡುತ್ತ) ಅಣ್ಣಾ ಬಾಯಲ್ಲಿ ಜೊಲ್ ಕಿತ್ಕಂಡ್ ಬತ್ತಾದೆ.. ಹಿಂಗೋಗಿ ಹಂಗ್ ಬತ್ತಿನಿ.. ಒಂದೇ ಒಂದ್ ಪೀಸ್ ತಿಂದು ಅಲ್ಲೇ ಸಿದ್ರಾಮಯ್ಯೋರಿಗೆ ಧಿಕ್ಕಾರ ಕೂಗ್ಬುಟ್ಟು ಬತ್ತಿನಿ..

ಯಡ್ಡಪ್ಪ: ಯೂಸ್ಲೆಸ್ ಫೆಲೋ.. ಒಂದು ಲೆಗ್ ಪೀಸಿಗೆ ನನ್ ಮಾನ ಕಳಿಯೋಕೆ ಹೊರ್ಟಿದ್ದೀಯ.. ಈ ವೀಕ್ ನಾನು ಎಲಿಮಿನೇಟ್ ಆಗಿ ಹೋಗ್ತಿದ್ದಂಗೆ ಡೈರೆಕ್ಟಾಗಿ ಪಾರ್ಟಿ ಆಫೀಸಿಗೆ ಹೋಗಿ ನಿನ್ನ ಪಕ್ಷದಿಂದ ಉಚ್ಚಾಟನೆ ಮಾಡ್ತೀನಿ.. ಏ ಪ್ರಪಾತು.. ನಾವೆಲ್ಲ ಇಲ್ಲಿ ಒಗ್ಗಟ್ಟಾಗಿದ್ರೆ ನೀನು ಹೋಗಿ ಅಲ್ಲಿ ಕೋಳಿ ಬೇಯಿಸ್ಕೊಂಡು ಕುಂತಿದ್ದೀಯ.. ಬಾ ಈ ಕಡೆ ನಾನ್ ಸೆನ್ಸ್ ಫೆಲೋ..
ಪ್ರಪಾತ ಸಿಂಹ: ಕೋಳಿ ಪಾತ್ರೆನೂ ತಕಬರ್ಲ ಸಾರ್..
ಯಡ್ಡಪ್ಪ: ತಗೊಂಡ್ಬಂದು ನನ್ ತಲೇ ಮೇಲೆ, ಮುಖದ್ ಮೇಲೆ ಸುರೀ.

ಸಿದ್ರಾಮಯ್ಯ: ಮೂಳೆ ಕಡಿಯೋವೆಲ್ಲ ಹೋಗಿ ಆ ಮೂಲಂಗಿ ಪಾರ್ಟಿ ಸೇರ್ಕಂಡು ಹಾಳಾಗೋದೊ.. ಪ್ರಪಾತ..ಹೋಗೋ ನಿಮ್ ಬಾಸ್ ಕರೀತಾವ್ನೆ.. ನೀನು ಹೋಗ್ಲಿಲ್ಲ ಅಂದ್ರೆ ನಿನ್ನೂ ಪಾರ್ಟಿಯಿಂದ ಒದ್ದೋಡಿಸ್ತನೆ ಹೋಗೋ.. ಮಕದ್ ಮೇಲೆ ಸುರೀಬೇಕಂತೆ.. ಬರೀ ಗ್ರೇವಿ ತಗಂಡೋಗು, ಪೀಸೆಲ್ಲ ನನ್ ತಟ್ಟೇಗ್ ಹಾಕು.

ಪ್ರಪಾತ್ ಸಿಂಹ: ಹೋಗಿ ಸಾ. ನಿಮ್ಗೆ ಯಾವಾಗ್ಲೂ ತಮಾಸೆನೆ.. ಬೇಯಿಸಿದ್ ಚಿಕನ್ನೆಲ್ಲ ಅನ್ಯಾಯವಾಗಿ ಆಪೊಜಿಷನ್ ಪಾರ್ಟಿ ಪಾಲಾಗೋಯ್ತು. (ಕಣ್ಣೊರೆಸಿಕೊಂಡು ಹೋಗುವನು)

ರಮ್ಯ ಸ್ಪಂದನ: (ಟಂಗುಟಂಗನೆ ನೆಗೆಯುತ್ತ ಬಂದು ಸಿದ್ರಾಮಯ್ಯನೋರ ಪಕ್ಕ ಕುಳಿತು) ವ್ಹಾವ್.. ಗ್ರೇಟ್.. ನಂಗೊಂದ್ ಪ್ಲೇಟ್ ಚಿಕನ್ ಹಾಕಿ ಸ್ಸರ್.. ( ಚಿಕನ್ ಹಾಕಿಸಿಕೊಂಡು ಕೋಭಕ್ಕನ ಕಡೆಗೆ ನೋಡುತ್ತ ಚಿಕನ್ ಬೇಕ ಎಂದು ಸನ್ನೆ ಮಾಡುತ್ತ, ತಿನ್ನುವರು)

ಯಡ್ಡಪ್ಪ: ರೀ ಶೆಟ್ಟರ್.. ಬನ್ರೀ ಇಲ್ಲಿ.. ಆ ಬಿಗ್ ಬಾಸ್ ಎಲ್ ಸತ್ತೋದ್ನೋ ಹೋಗಿ ನೋಡ್ಕ ಬನ್ರಿ.. ಜಲ್ದಿ ಬಂದು ಇವರಿಬ್ರನ್ನೂ ಈಚೆ ಕಳಿಸೋಕೆ ಹೇಳ್ರಿ.. ಮನೆ ಇಡೀ ಚಿಕನ್ ಗಬ್ಬುನಾತ ಹೊಡೆಸಿಕೊಂಡು ಕುಂತಿದಾರೆ. ಹೋಗ್ರಿ ಬೇಗ ಆ ಬಿಗ್ ಬಾಸ್ ಮಕ್ಕುಗುದು ಕರ್ಕೊಂಡು ಬನ್ರಿ.. ಗೆಟೌಟ್.

ಗಗದೀಶ್ ಶೆಟ್ಟರ್ : (ಕೆಮೆರಾ ಬಳಿ ಹೋಗಿ ನಿಂತು ತಲೆ ಕೆರೆದುಕೊಳ್ಳುತ್ತ..) ಬಿಗ್ ಬಾಸ್ ಎಲ್ಲೋಗಿದೀರ.. ಜಲ್ದಿ ಬನ್ನಿ.. ಯಡ್ಡಣ್ಣೋರು ನಂಗ್ ಉಗೀತಾವ್ರೆ.. (ಅಷ್ಟರಲ್ಲಿ ಬಿಗ್ ಬಾಸ್ ಧ್ವನಿ ಕೇಳುವುದು)

ಬಿಗ್ ಬಾಸ್ : ಮನೆಯ ಎಲ್ಲರೂ ಗಮನವಿಟ್ಟು ಕೇಳಿ. ಯಾರನ್ನಾದರೂ ಹೊರ ಹಾಕಬೇಕೆಂದರೆ ಅವರು ಏನಾದರೂ ತಪ್ಪು ಮಾಡಿರಬೇಕು. ಸಿದ್ರಾಮಯ್ಯನವರು ಯಾವ ತಪ್ಪು ಮಾಡದೆ ಇರುವುದರಿಂದ ಅವರನ್ನು ಮನೆಯಿಂದ ಹೊರಗೆ ಕಳಿಸಲು ಬಿಗ್ ಬಾಸ್ ಅನುಮತಿ ಇರುವುದಿಲ್ಲ. ಯಡ್ಡಪ್ಪನವರು ಆ ಥರದ ದುರಾಸೆಗಳನ್ನು ಇಟ್ಟುಕೊಳ್ಳಬಾರದು ಎಂದು ಬಿಗ್ ಬಾಸ್ ತಿಳಿಸಲು ಇಚ್ಚಿಸುತ್ತಾರೆ.

ರಮ್ಯ ಸ್ಪಂದನ: (ಸಿದ್ದರಾಮಯ್ಯನವರಿಗೆ) ಸ್ಸರ್.. ಚಿಕನ್ ಇನ್ನೂ ಇದೆ.. ಇದನ್ನೆಲ್ಲ ಕಾಲಿ ಮಾಡಿದ ಮೇಲೆ ಹೋಗೋಣ ಸ್ಸರ್..

ಸಿದ್ರಾಮಯ್ಯ: ಹಂಗಂತೀಯ ಮಗಳೆ.. ನಂಗೂ ಹಂಗೇ ಅನಿಸ್ತ ಇದೆ. ಇದ್ದುಬುಡನ ಬುಡು. ಈ ಮಸ್ಸೊಪ್ಪು ಗಿರಾಕಿಗಳಿಗೆಲ್ಲ ಒಂದ್ ರವಂಡು ಆಟ ತೋರಿಸ್ತಿನಿ. ಬಿಗ್ ಬಾಸ್ ನಾವ್ ಹೋಗಲ್ಲ ಬಿಗ್ ಬಾಸ್. ಕ್ರಾಂತಿ ಕ್ಯಾನ್ಸಲ್.

ಕೋಭಕ್ಕ: (ಯಡ್ಡಪ್ಪನವರಿಗೆ ) ಏನೂಂದ್ರೆ..

ಮುತಾಲಿಕ್ : ಕರುದ್ರಾ.. ಇಲ್ಲೇ ಇದಿನಿ ಹೇಳಿ..

ಕೋಭಕ್ಕ: ಥೂ.. ಶನಿಮುಂಡೇದೆ ಹೋಗತ್ತಗೆ.. ಇಲ್ಲಾಂದ್ರೆ ಕಿಟಾರ್ ಅಂತ ಕಿರುಚ್ಕೋತೀನಿ..

ಯಡ್ಡಪ್ಪ : ಏ.. ಕೋಭಾ..ಇಷ್ಟೊತ್ತಲ್ಲಿ ಎಂಥದು ನಿಂದು ಗಿಟಾರ್ ನುಡಿಸೋ ಖಾಯಿಲೆ.. ಈ ಸಿದ್ರಾಮಯ್ಯ-ರಮ್ಯ ಸ್ಪಂದನ ಇಬ್ರೂ ತೊಲಗಿದ್ರು ಅಂತ ಖುಷಿಯಾಗಿದ್ದೆ. ಮತ್ತೆ ರಿಟರ್ನ್ ಆಫ್ ದಿ ಡ್ರಾಗನ್ ಆಗೋಗಿದೆ. ನನ್ ಸಂಕಟ ನಾನು ಯಾರಿಗೆ ಹೇಳ್ಳಿ. ಆ ಹರಾಮಿ ಬಿಗ್ ಬಾಸ್ ನೋಡಿದ್ರೆ ಯಾವಾಗ್ಲು ನಮಗೇ ಪನಿಶ್ಮೆಂಟ್ ಕೊಡ್ತಾನೆ. ಯೂಸ್ಲೆಸ್ ಫೆಲೋ.. ಅಂದಂಗೆ ಹೇಳೋದು ಮರ್ತಿದ್ದೆ.. ನನ್ ಪಿಲ್ಲೋ ಹರಿದೋಗಿತ್ತು ಅದನ್ನೊಂಚೂರು ಹೊಲೆದುಕೊಡು.

ಕೋಭಕ್ಕ: ಥೋ ಈ ಕಿವುಡು ಪತ್ಥರ್ ಕಟ್ಕಂಡು ನಂಗ್ ಬಾಳಕ್ಕಾಗಲ್ಲ.. ನಾನೊಂದ್ ಹೇಳಿದ್ರೆ ಇದೊಂದ್ ಹೇಳ್ತದೆ. ನಂಗೆ ಜೀವನದಲ್ಲಿ ಜಿಗುಪ್ಸೆ ಬತ್ತಾ ಇದೆ. ನಂಗ್ ತಲೆಕೆಟ್ಟೋಗಿದೆ. ಯಾವ್ದಾರ ಕೆರೆಗೋ ಬಾವೀಗೋ ಬಿದ್ ಬಿಡ್ತೀನಿ..

ಯಡ್ಡಪ್ಪ: ಹೇ ಅನ್ ಎಜುಕೇಟೆಡ್ ವುಮೆನ್.. ನಿಂಗೋಸ್ಕರ ಅಂತ ಸ್ಪೆಷಲ್ಲಾಗಿ ಕೆರೆ ಬಾವಿ ಕಟ್ಟಿಸಿಕೊಡೋಕೆ ಬಿಗ್ ಬಾಸ್ ಗೇನು ಹುಚ್ಚು ಹಿಡಿದಿದ್ಯಾ..? ಅಲ್ಲಿ ಸ್ವಿಮ್ಮಿಂಗ್ ಫೂಲ್ ಇದೆ, ಬೇಕಿದ್ರೆ ಹೋಗಿ ಬೀಳು. ಒಬ್ಳೇ ಬೀಳು. ಜೊತೆಲಿ ಪ್ರಪಾತನ್ನ ಕರ್ಕೊಂಡ್ ಬಿದ್ರೆ ಪರಿಣಾಮ ನೆಟ್ಟಗಿರಲ್ಲ ಹೇಳಿದೀನಿ. ಅವ್ನು ಮೊದ್ಲೇ ಸರಿ ಇಲ್ಲ. ಅವ್ನ ಜೊತೆ ಹುಷಾರಾಗಿರು. (ಅಷ್ಟರಲ್ಲಿ ಬಿಗ್ ಬಾಸ್ ಧ್ವನಿ ಕೇಳುವುದು)

ಬಿಗ್ ಬಾಸ್ : ಮನೆಯ ಎಲ್ಲ ಸದಸ್ಯರೂ ಲಿವಿಂಗ್ ಏರಿಯಾಗೆ ಬರಬೇಕೆಂದು ಆದೇಶಿಸುತ್ತಾರೆ..

ಗಗದೀಶ್ ಶೆಟ್ಟರ್: ಈ ವಯ್ಯಂಗೇನು ಮಾಡಕ್ ಕೇಮೆ ಇಲ್ಲ.. ಅರ್ಧ ಗಂಟೆಗೊಂದ್ಸಲ ಲಿವಿಂಗ್ ಏರಿಯಾಗ್ ಬಾ, ಲಿವಿಂಗ್ ಏರಿಯಾಗ್ ಬಾ ಅಂತ ಬಡ್ಕೊತ ಇರ್ತನೆ.. ಟಾಸ್ಕ್ ಆಡಿ ಆಡಿ ಸುಸ್ತಾಗಿ ಹಗಲೊತ್ತಲ್ಲಿ ಮುತಾಲಿಕ್ ಸೊಂಟದ ಮೇಲೆ ಕಾಲಾಕ್ಕೆಂಡು ಒಂದೊತ್ತು ಮಲಗಂಗಿಲ್ಲ “ ಚೋಲಿ ಕೇ ಪೀಛೆ ಕ್ಯಾ ಹೈ, ಚೋಲಿ ಕೆ ಪೀಛೆ” ಸಾಂಗ್ ಹಾಕಿ ಪ್ರಾಣ ತಿಂತಾನೆ.

ಬಿಗ್ ಬಾಸ್ : ಗಗದೀಶ್ ಶೆಟ್ಟರ್..ನೀವು ಈ ವಾರ ನೇರವಾಗಿ ನಾಮಿನೇಟ್ ಆಗಿದ್ದೀರಿ.. ಇನ್ನುಮುಂದೆ ನೀವು ಬಿಗ್ ಬಾಸ್ ಗೆ ಮರ್ಯಾದೆ ಕೊಡದೆ ಮಾತನಾಡದೆ ಇದ್ದರೆ, ನೀವು ಸ್ನಾನಕ್ಕೆ ಹೋದಾಗ ಬಾತ್ ರೂಮಿನ ಒಳಗೆ ಒಂದು ರಹಸ್ಯ ಕ್ಯಾಮೆರಾ ಒಂದನ್ನು ಇರಿಸಲಾಗುತ್ತದೆ. ನೀವು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಆ ಅಶ್ಲೀಲ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾಗುತ್ತದೆ ಎಂದು ಬಿಗ್ ಬಾಸ್ ಎಚ್ಚರಿಸುತ್ತಾರೆ.

ಗಗದೀಶ್ ಶೆಟ್ಟರ್: ಅಯ್ಯಯ್ಯೋ ಬ್ಯಾಡ ಬಿಗ್ ಬಾಸ್.. ನಿಮ್ ಕಾಲಿಗ್ ಬೀಳ್ತೀನಿ ಹಂಗೆಲ್ಲ ಮಾಡ್ಬೇಡಿ..

(ಎಲ್ಲರೂ ಬಂದು ಲಿವಿಂಗ್ ಏರಿಯಾ ಸೋಫಾ ಮೇಲೆ ಕುಳಿತಿದ್ದಾರೆ. ಸಿದ್ರಾಮಯ್ಯ ಮತ್ತು ರಮ್ಯ ಸ್ಪಂದನ ಇನ್ನೂ ಚಿಕನ್ ಖಾಲಿ ಮಾಡಿಲ್ಲ. ಸಿದ್ರಾಮಯ್ಯನವರು ತಾವು ತಿಂದ ಚಿಕನ್ ಲೆಗ್ ಪೀಸ್ ಮೂಳೆಯೊಂದನ್ನು ಹಿಂದಿನಿಂದ ಗುರಿಯಿಟ್ಟು ಯಡ್ಡಪ್ಪನವರ ಬುರುಡೆಗೆ ಗುರಿಯಿಟ್ಟು ಹೊಡೆಯುತ್ತಾರೆ. ಅದು ಯಡ್ಡಪ್ಪನವರ ತಲೆಗೆ ಬಿದ್ದು ಅಲ್ಲಿಂದ ಬೌನ್ಸ್ ಆಗಿ ಮುತಾಲಿಕ್ ಶರ್ಟಿನೊಳಗೆ ಬೀಳುತ್ತದೆ.. ಮುತಾಲಿಕ್ ಕೋಳಿಯ ಮೂಳೆಯು ಶರ್ಟಿನೊಳಗೆ ಹೋಗಿದ್ದರಿಂದ ಗಾಬರಿಗೊಂಡು ಶರ್ಟು ಒದರುತ್ತ ಕುಣಿದಾಡತೊಡಗುತ್ತಾರೆ.. ರಮ್ಯ ಸ್ಪಂದನ ಆ ಕುಣಿತಕ್ಕೆ ತಕ್ಕಂತೆ ಒಂದು ಹಾಡು ಹೇಳತೊಡಗುತ್ತಾರೆ, ಪ್ರಪಾತನು ಚಪ್ಪಾಳೆ ಬಡಿಯುತ್ತ ಮ್ಯೂಸಿಕ್ ಕೊಡುತ್ತಿದ್ದಾನೆ)

ರಮ್ಯ ಸ್ಪಂದನ: ಮೈ ನೇಮ್ ಈಸ್ ಶೀಲಾ.. ಶೀಲಾ ಕೀ ಜವಾನಿ, ಆಮ್ ಟೂ ಸೆಕ್ಸಿ ಫಾರ್ ಯೂ, ಮೇ ತೆರೆ ಹಾಥ್ ನಾ ಆನೀ.. ನೊನೊನೊನೊ ಶೀಲಾ, ಶೀಲಾ ಕೀ ಜವಾನಿ, ಆಮ್ ಟೂ ಸೆಕ್ಸಿ ಫಾರ್ ಯೂ, ಮೇ ತೆರೆ ಹಾಥ್ ನಾ ಆನೀ..

ಯಡ್ಡಪ್ಪ (ಬುರುಡೆ ತಡಕಿಕೊಳ್ಳುತ್ತ) ಬಿಗ್ ಬಾಸ್ ಸಿದ್ರಾಮಯ್ಯನವರು ಬೇಕಿದ್ರೆ ಸೈದ್ಧಾಂತಿಕವಾಗಿ ಅಟ್ಯಾಕ್ ಮಾಡಲಿ, ಅದು ಬಿಟ್ಟು ಹೀಗೆಲ್ಲ ಚಿಕನ್ ಲೆಗ್ ಪೀಸ್ನಲ್ಲಿ ಅಟ್ಯಾಕ್ ಮಾಡೋದನ್ನ ನಾನು ಒಪ್ಪೋದಿಲ್ಲ. ಸಿದ್ರಾಮಯ್ಯೋರಿಗೆ ಶಿಕ್ಷೆ ಕೊಡಿ, ಇಲ್ಲಾಂದ್ರೆ ಇವತ್ತಿಂದ ನಾನು ಸ್ನಾನ ಮಾಡಲ್ಲ, ಹಲ್ಲುಜ್ಜಲ್ಲ, ತಲೆ ಬಾಚಲ್ಲ, ಒಂದೇ ಒಂದ್ ತೊಟ್ಟು ಸೆಂಟೂ ಹಾಕ್ಕಳಲ್ಲ.

ಸಿದ್ರಾಮಯ್ಯ : ಅಮ್ಮಿಕಂಡ್ ಕುಂತ್ಕಳಯ್ಯ ಯಡ್ಡಪ್ಪ ಕಂಡಿದೀನಿ, ಒಹೊಹೊಹೊ.. ಏನ್ ಬಿಗ್ ಬಾಸು ಇವ್ರ ಚಿಗಪ್ಪನ ಮಗ ಇವ್ನು ಹೇಳಿದ್ನೆಲ್ಲ ಕೇಳಕೆ.. ಯಾವಾಗ್ ನೋಡಿದ್ರು ವೈಟಂಡ್ ವೈಟ್ ಸಲ್ಟು ಪ್ಯಾಂಟು ಹಾಕ್ಕಂಡ್ ಒಳ್ಳೆ ಮೆಗ್ಗಾನ್ ಆಸ್ಪತ್ರೆ ನರ್ಸ್ ಥರ ಓಡಾಡ್ತ ಇರ್ತೀಯ.. ಬೇರೆ ಬಟ್ಟೆ ಗತಿ ಇಲ್ವೇನ್ರಿ ನಿಮ್ಗೆ? ನೀವು ಹಲ್ಲುಜ್ಜಿದ್ರೆಷ್ಟು ಬಿಟ್ರೆಷ್ಟು, ಅದ್ರಿಂದ ಎಡವಟ್ಟಾಗದು ಕೋಭಕ್ಕಂಗೇ ಹೊರತು ನಂಗಲ್ಲ. ಏನು? ತಲೆ ಬಾಚಲ್ವ.. ಕೂದಲೇ ಇಲ್ವಲ್ರೀ ತಲೇಲಿ.. ಬಾಚಣಿಗೆ ತಗಂಡು ತಲೆ ಬಾಚಕೋದ್ರೆ ಬರೀ ಬುರುಡೆ ಸಿಕ್ಕಿಬಿಟ್ಟು ಬುಲ್ಡೇಲಿ ರಕ್ತ ಬಂದ್ರೆ ಕಷ್ಟ.. ತಲೆ ಬಾಚಕೆಲ್ಲ ಹೋಗ್ಬೇಡಿ. ನನ್ ಹೇರ್ ಸ್ಟೈಲ್ ನೋಡ್ರಿ ಹೆಂಗಿದೆ ಅಂತ.. ಪೆಹ್ಹೆಹ್ಹೆಹ್ಹೆಹ್ಹೆಹ್ಹೇ.. (ಸ್ಟೈಲಾಗಿ ತಲೆಗೂದಲು ಸವರಿಸಿಕೊಳ್ಳುವರು)

ಬಿಗ್ ಬಾಸ್ : ಸದ್ದು. ಈ ವಾರದ ಲಕ್ಷುರಿ ಬಜೆಟ್ ಟಾಸ್ಕ್ ವಿಶೇಷವಾಗಿದೆ. ಎಲ್ಲರೂ ತಮ್ಮ ತಮ್ಮ ಫಸ್ಟ್ ಲವ್ ಸ್ಟೋರಿಯನ್ನು ಬಿಗ್ ಬಾಸ್ ಎದುರು ಹೇಳಬೇಕು.

ಸಿದ್ರಾಮಯ್ಯ : ಮುತಾಲಿಕ್ ಸತ್ತ.. ಹ್ಹಹ್ಹಹ್ಹಹ್ಹಹ್ಹ..

ಬಿಗ್ ಬಾಸ್ : ಸಿದ್ರಾಮಯ್ಯನವರೇ.. ಯಾರನ್ನೂ ಅಂಡರ್ ಎಸ್ಟಿಮೇಟ್ ಮಾಡಬಾರದು. ಇಲ್ಲಿರುವ ಎಲ್ಲರಿಗೂ ಲವ್ ನ ಅನುಭವ ಆಗಿದೆ. ಹಾಗೆಯೇ ಮುತಾಲಿಕ್ ಅವರಿಗೂ ಆಗಿದೆ. ಅದನ್ನು ಅವರು ಬಿಗ್ ಬಾಸ್ ಮನೆಗೆ ಬರುವಾಗಲೇ ನಮಗೆ ತಿಳಿಸಿ ಬಂದಿದ್ದಾರೆ. ಬಾಗಲಕೋಟೆಯ ಹಾಲಿನಡೈರಿಯಲ್ಲಿ ಮುತಾಲಿಕರು ಒಂದು ಲೀಟರ್ ಹಾಲಿಗೆ ಒಂದು ಹಂಡೆ ನೀರು ಬೆರೆಸುವ ಜಾಬ್ ಮಾಡುತ್ತಿದ್ದ ಸಮಯದಲ್ಲಿ ಅವರಿಗೆ ಫಸ್ಟ್ ಲವ್ ಆಗಿದೆ. ಅದನ್ನು ಅವರೇ ಹೇಳಿಕೊಳ್ಳುತ್ತಾರೆ. ನಿಮ್ಮ ನಿಮ್ಮ ಲವ್ ಸ್ಟೋರಿಗಳನ್ನು ನೀವಿನ್ನು ಪ್ರೆಸೆಂಟ್ ಮಾಡಬಹುದು.

(ಪ್ರಪಾತ ಸಿಂಹ ಎರಡೂ ಕೈಯ ಬೆರಳುಗಳನ್ನು ಎಣಿಸಿಕೊಳ್ಳುತ್ತಿದ್ದಾನೆ, ಕೋಭಕ್ಕ ಕೈ ಬೆರಳು ಎಣಿಸಿದ್ದು ಮುಗಿದು ಕಾಲ್ಬೆರಳನ್ನೂ ಎಣಿಸುತ್ತಿರುವುದನ್ನು ನೋಡಿದ ಯಡ್ಡಪ್ಪನವರ ಎದೆಯೊಳಗೆ ಧಸಕ್ ಧಸಕ್ ಎಂಬ ಸೌಂಡು ಕೇಳಿಬರುತ್ತಿದೆ. ಮುತಾಲಿಕ್ ತಮ್ಮ ಕೇಸರಿಶಾಲನ್ನು ತಲೆಯ ಮೇಲೆ ಹಾಕಿಕೊಂಡು ಗಲ್ಲದ ಮೇಲೆ ಎರಡೂ ಕೈಯನ್ನಿಟ್ಟುಕೊಂಡು ಕುಳಿತಿದ್ದಾರೆ, ಸಿದ್ರಾಮಯ್ಯನವರು ನಂಗೆ ಎಲ್ಡಾಗವೆ ಲವ್ವು ಎಂದು ರಮ್ಯ ಸ್ಪಂದನ ಕಡೆಗೆ ಬೆರಳಿನಲ್ಲಿ ವಿಕ್ಟರಿ ಮಾರ್ಕ್ ತೋರಿಸುತ್ತಿದ್ದಾರೆ. ರಮ್ಯ ಸ್ಪಂದನ ನಾನೇಳಲ್ಲ, ಐ ಕಾಂಟ್ ಟೆಲ್ ದಟ್ ಆಲ್ ಇನ್ ಫ್ರಂಟ್ ಆಫ್ ದಿ ಕೆಮರಾ.. ದಟ್ಸ್ ಕೋರ್ ಪರ್ಸನಲ್ ನೋ ಎನ್ನುತ್ತಾರೆ. ಒಬ್ಬೊಬ್ಬರಾಗಿ ಬಂದು ತಮ್ಮ ಲವ್ ಸ್ಟೋರಿಗಳನ್ನು ಹೇಳಲು ಸಿದ್ದವಾಗುತ್ತಾರೆ. ಮೊದಲಿಗೆ ಮುತಾಲಿಕ್ ಎದ್ದು ಬರುತ್ತಾರೆ..)

ಸಿದ್ರಾಮಯ್ಯ : ಹಯ್.. ಮುತಾಲಿಕ್ ಫೇಸಲ್ಲಿ ನಾಚ್ಕೆ ನೋಡ್ರಿ ನಾಚ್ಕೆನ. ಕೆನ್ನೆ ಎಲ್ಲ ರೆಡ್ ರೆಡ್ ಆಗೋಗಿದೆ. ಅಲ್ ಕಣಯ್ಯ, ಲವ್ ಮಾಡಿದಿಯ.. ಹುಡುಗಿನ ಎತ್ತಾಕ್ಕಂಡ್ ಬಂದು ನಮಗೊಂದ್ ಮಾತೇಳಿದ್ರೆ, ನಮ್ ಸಾಂಗ್ಲಿಯಾನಂಗೆ ಒಂದ್ ಮಾತೇಳಿ ಪೊಲೀಸ್ ಪ್ರೊಟೆಕ್ಷನ್ ಕೊಡಿಸಿ ಶ್ರೀರಾಮುಲು ಮಾಡಿಸೋ ಸಾಮೂಹಿಕ ವಿವಾಹದಲ್ಲೇ ತಾಳಿ ಕಟ್ಟುಸ್ತಿದ್ನಲ್ಲ ಗುರುವೇ.

ರಮ್ಯ ಸ್ಪಂದನ: (ಮುತಾಲಿಕ್ ಗೆ) ಅಂಕಲ್.. ನಿಮಗೆ ಲವ್ ಲವ್ ಆಗಿದ್ದು ಹುಡುಗಿ ಜೊತೆನೇ ಅಲ್ವಾ? ಯಾಕ್ ಕೇಳ್ತಿದೀನಿ ಅಂದ್ರೆ ನಿಮ್ ಥರ ಇರೋರು ಗಂಡಸರನ್ನೂ ಬಿಡದಂಗೆ ಲವ್ ಮಾಡ್ತಾರೆ ಅಂತ ಕೇಳಿದ್ದೆ. ದಟ್ಸ್ ವೈ ಆಮ್ ಆಸ್ಕಿಂಗ್..

ಸಿದ್ರಾಮಯ್ಯ : ಓ ಆ ಟ್ರಾಜೆಡಿ ಟೆಕ್ನಾಲಜಿ ಬೇರೆ ಉಂಟೋ.. ನೀವ್ ಬೊಗಳ್ರಿ ನಿಮ್ ಲವ್ ಸ್ಟೋರಿನ ಕೇಳನ..

ಮುತಾಲಿಕ್ : ಅದೊಂದು ಘನಘೋರ ದುರಂತ ಭಗ್ನ ಪ್ರೇಮಕಥೆ.. ನಾನವಾಗ ಹಾಲಿನ ಡೈರೀಲಿ ಮಿಲ್ಕ್ ಕಲೆಕ್ಷನ್ ಮಾಡ್ತ ಇದ್ದೆ. ಡೋಂಟ್ ಮಿಸಂಡ್ರಸ್ಟಾಂಡ್.. ಹಸುಗಳದ್ದು.. ಆವತ್ತೊಂದಿನ ನಮ್ ಡೈರಿ ಉತ್ತರ ದಿಕ್ಕಿನಲ್ಲಿದ್ದ ತೆಂಗಿನಮರದ ತುದೀ ಮೇಲೆ ಕುಳಿತಿದ್ದ ಕಾಗೆ ಒಂದು ಕುಹೂ ಕುಹೂ ಅಂತ ಕೂಗ್ತ ಇತ್ತು, ಇಳಿ ಸಂಜೆ ಹೊತ್ತದು. ಆ ಊರಲ್ಲಿ ಎಲ್ರೂ ನನ್ನ ಲಿಕ್ಕೂ ಲಿಕ್ಕೂ ಅಂತ ಮುದ್ದಾಗಿ ಕರೀತ ಇದ್ರು. ಆವತ್ತು ಮಿಡಲ್ ಏಜ್ ಸುಂದ್ರಿ ಒಬ್ಳು ಮೊದಲ್ನೆ ಸಲ ನನ್ನ “ ಮುತ್ತೂ..” ಅಂತ ಕರೆದ್ಳು.. ಕಣ್ಣೆತ್ತಿ ನೋಡ್ತೀನಿ.. ದೇವತೆಗೆ ವಯಸ್ಸಾದ್ರೆ ಹೇಗಿರ್ತಾರೋ ಅಂಥಾ ಸುಂದ್ರಿ ಆ ಆಂಟಿ. ಹೆಸರು ಬಸಕ್ಕ ಅಂತ.. ನಾನು ಅವ್ಳನ್ನ ನೋಡ್ದೆ. ಅವ್ಳೂ ನನ್ನನ್ನ ನೋಡಿದ್ಳು.. ನಾವಿಬ್ರೂ ಒಬ್ರುನ್ನೊಬ್ರು ನೋಡೋದ್ನ.. ಅವಳ ಗಂಡ ನೋಡ್ಬಿಟ್ಟ.. ಮುಂದೆ ನಡೆದಿದ್ದು.. ಯಾರೂ ಊಹಿಸಲಾಗದಿರೋ ಕಥೆ. ಲವ್ ಸ್ಟೋರಿ ಹೋಗಿ ಕ್ರೈಂ ಸ್ಟೋರಿ ಆಗೋಯ್ತು..
(ಅದೆಲ್ಲವನ್ನೂ ನೋಡೋಣ ಒಂದು ಪುಟ್ಟ ಬ್ರೇಕ್ ನ ನಂತರ)

(ಮುಂದುವರೆಯುವುದು.. )

 

 

Leave a Reply

Your email address will not be published.

Social Media Auto Publish Powered By : XYZScripts.com