ಎಚ್‌. ಆಂಜನೇಯ ಅಲ್ಲ, ಆತ ಹುಚ್ಚು ಆಂಜನೇಯ : ಶ್ರೀನಿವಾಸ್‌ ಪ್ರಸಾದ್

ಮೈಸೂರು : ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಆಂಜನೇಯ ವಿರುದ್ದ ಬಿಜೆಪಿ ನಾಯಕ ಶ್ರೀನಿವಾಸ್ ಪ್ರಸಾದ್‌ ಕಿಡಿಕಾರಿದ್ದಾರೆ.  ಪರಮೇಶ್ವರ್‌ ದುಡ್ಡುಕೊಟ್ಟು ಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರಿಗೆ ಹೋರಾಟದ ಹಿನ್ನೆಲೆ ಇಲ್ಲ. ಕಾಂಗ್ರೆಸ್‌ ಪಕ್ಷ ಕಟ್ಟಿದ್ದು ಅವರೇನಲ್ಲ. ಅವರು ಯಾರು ಎಂದೇ ಜನರಿಗೆ ತಿಳಿದಿರಲಿಲ್ಲ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿದೆ ಅಧಿಕಾರದ ಅಮಲು ಹತ್ತಿದೆ. ಅಮಲಿನಲ್ಲೇ ಮಾತನಾಡುತ್ತಿದ್ದಾರೆ. ದುಡ್ಡು ಹಂಚುವ ಉದ್ದೇಶಕ್ಕೆ ಮನೆ ಮನೆಗೆ ಕಾಂಗ್ರೆಸ್‌ ಎಂದು ಹುಟ್ಟುಹಾಕಿದ್ದಾರೆ. ಹಣ ಹಂಚುವುದು ಸಿಎಂಗೆ ಕರಗತವಾಗಿ ಬಿಟ್ಟಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ. ಮೋದಿಗೆ ನನ್ನ ಕಂಡರೆ ಭಯ ಎಂದು ಸಿಎಂ ಹೇಳುತ್ತಿದ್ದಾರೆ. ಇದರ ಬಗ್ಗೆ ವಿವರಣೆ ನೀಡಲು ಪದಗಳೇ ಸಿಗುತ್ತಿಲ್ಲ. ಮೋದಿ  ನಾನು ಟೀ ಮಾರುತ್ತಿದ್ದೆ ಎಂದು ವಿಧೇಯತೆಯಿಂದ ಹೇಳುತ್ತಾರೆ. ಆದರೆ ನೀವು ಅಹಂಕಾರದಿಂದ ಮಾತನಾಡುತ್ತೀರ  ಎಂದಿದ್ದಾರೆ.

ಎಚ್‌. ಆಂಜನೇಯ ಎಂದರೆ ಹುಚ್ಚು ಆಂಜನೇಯ ಎಂದರ್ಥ, ಅವರು ಸಿಎಂ ಸೇವೆ ಮಾಡುತ್ತಾರೋ, ಸಮಾಜದ ಸೇವೆ ಮಾಡುತ್ತಾರೋ ಒಂದೂ ತಿಳಿಯಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com