ಲೈಂಗಿಕ ದೌರ್ಜನ್ಯ ನಡೆಸುವವರ ಹೆಸರು ಬಹಿರಂಗಪಡಿಸಿ ಅವಮಾನಿಸಿ : ವಿದ್ಯಾ ಬಾಲನ್

ಮುಂಬೈ  : ಹಿಂದೆಲ್ಲ ಮಹಿಳೆಯರು ಏನೇ ಕಷ್ಟ ಬಂದರೂ ಸಹಿಸಿಕೊಂಡು ಸುಮ್ಮನಿರುತ್ತಿದ್ದರು. ಆದರೆ ವಾಸ್ತವ ಚಿತ್ರಣ ಬದಲಾಗಿದೆ. ಹೆಣ್ಣು ಎಲ್ಲವನ್ನು ಎದುರಿಸುತ್ತಿದ್ದಾಳೆ. ಆದರೆ ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ವಿಷಯ ಬಂದಾಗ ಸುಮ್ಮನೆ ನೋವು ಅನುಭವಿಸುತ್ತಾಳೆ. ಆದರೆ ಹಾಗಾಗಬಾರದು, ಮಹಿಳೆಯರು ಲೈಂಗಿಕ ದೌರ್ಜನ್ಯ ನಡೆಸುವವರ ಹೆಸರನ್ನು ಬಹಿಂರಗಪಡಿಸಿ ಅವಮಾನಿಸಬೇಕು ಎಂದು ನಟಿ ವಿದ್ಯಾ ಬಾಲನ್‌ ಹೇಳಿದ್ದಾರೆ.

ಲೈಂಗಿಕ ಕಿರುಕುಳ ಅನುಭವಿಸಿದವರಿಗಷ್ಚೇ ಅದರ ನೋವು, ಕಿರಿಕಿರಿ ಅರ್ಥವಾಗುತ್ತದೆ. ಕೆಲವೊಮ್ಮೆ ಯಾರಾದರೂ ಮುಟ್ಟಿದರೇ ನನಗೆ ರೇಗಿ ಬಿಡುತ್ತದೆ ಎಂದಿದ್ದಾರೆ.

ಕೆಲ ಮಹಿಳೆಯರು ಲೈಂಗಿಕ ದೌರ್ಜನ್ಯದ ಕುರಿತು ಮಾತನಾಡುತ್ತಿದ್ದಾರೆ. ಇದು ನಿಜಕ್ಕೂ ಸಂತಸದ ವಿಷಯ. ಲೈಂಗಿಕ ಕಿರುಕುಳ ನೀಡುವವರ ಹೆಸರನ್ನು ಬಹಿರಂಗಪಡಿಸಿ ಅವಮಾನಿಸಬೇಕು  ಎಂದು ವಿದ್ಯಾಬಾಲನ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com