ಕಮಲ್‌ ಹಾಸನ್‌ರನ್ನು ಗುಂಡು ಹಾರಿಸಿ ಸುಟ್ಟು ಕೊಲ್ಲಬೇಕು : ಹಿಂದೂ ಮಹಾಸಭಾ ಮುಖಂಡ

ಲಖನೌ : ದೇಶದಲ್ಲಿ ಹಿಂದೂ ಭಯೋತ್ಪಾದನೆ ಇಲ್ಲ  ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದ ನಟ ಕಮಲ್‌ ಹಾಸನ್ ವಿರುದ್ದ ಹಿಂದೂಪರ ಸಂಘಟನೆಗಳು ಕಿಡಿ ಕಾರಿದ್ದು, ಕಮಲ್‌ ಹಾಸನ್‌ ಅವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಹಿಂದೂಮಹಾಸಭಾ ಮುಖಂಡರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಮಲ್ ಹಾಸನ್‌ನಂತಹವರು ತಮ್ಮ ಪಕ್ಷಪಾತದ ಕೋಮು ಅಜೆಂಡಾ ತೋರಿಸಲು ಮಾತ್ರ ಇಂತಹ ಆರೋಪ ಮಾಡುತ್ತಾರೆ. ಅಸಲಿಗೆ ಅವರು ಹಿಂದೂ ಭಯೋತ್ಪಾದಕರ ಅನುಯಾಯಿಗಳೇ ಆಗಿದ್ದಾರೆ. ಇಂತಹವರನ್ನು ಗುಂಡಿಟ್ಟು ಹತ್ಯೆ ಮಾಡಬೇಕು ಅಥವಾ ಗಲ್ಲಿಗೇರಿಸಬೇಕು ಎಂದು ಪಂಡಿತ್‌ ಅಶೋಕ್‌ ಶರ್ಮಾ ಹೇಳಿದ್ದಾರೆ.

ಹಿಂದೂ ಧರ್ಮದ ಪಕ್ಷಪಾತ ಮಾಡುವವರಿಗೆ ಬದುಕುವ ಹಕ್ಕಿಲ್ಲ. ಅಲ್ಲದೆ ಕಮಲ್ ಹಾಗೂ ಅವರ ವಂಶಸ್ಥರ ಸಿನಿಮಾಗಳಿಗೆ ಬಹಿಷ್ಕಾರ ಹಾಕಬೇಕು ಎಂದು ಕಿಡಿ ಕಾರಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com