ನೋಟ್‌ ಬ್ಯಾನ್‌ ಬಳಿಕ ಗಗನಕ್ಕೆ ಜಿಗಿದ ಡಿಜಿಟಲ್‌ ವಹಿವಾಟು….!!

ದೆಹಲಿ : ದೇಶದಲ್ಲಿ ನೋಟು ನಿಷೇಧದ ಬಳಿಕ ಡಿಜಿಟಲ್ ವಹಿವಾಟಿನಲ್ಲಿ ಶೇ. 80ರಷ್ಟು ಏರಿಕೆಯಾಗಿರುವುದಾಗಿ ಹೇಳಲಾಗುತ್ತಿದೆ. 2017-18ನೇ ಸಾಲಿನಲ್ಲಿ ಡಿಜಿಟಲ್‌ನ ಒಟ್ಟು ವಹಿವಾಟು 1800 ಕೋಟಿಗೂ ಹೆಚ್ಚಾಗಲಿದೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಪ್ರಸಕ್ತ ಸಾಲಿನ ಅಕ್ಟೋಬರ್‌ವರೆಗೆ 1000ಕೋಟಿಯಷ್ಟು ಡಿಜಿಟಲ್‌ ವಹಿವಾಟು ನಡೆದಿದೆ. ಇದು 2016ರ ವರ್ಷಕ್ಕೆ ಸಮನಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಜೂನ್‌ ಬಳಿಕ ಡಿಜಿಟಲ್‌ ವ್ಯವಹಾರದಲ್ಲಿ ಅಭಿವೃದ್ಧಿ ಕಂಡಿದ್ದು, ಸರಾಸರಿ 136-138 ಕೋಟಿ ವಹಿವಾಟು ನಡೆದಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ.

ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ ನೋಟು ನಿಷೇಧದಿಂದುಂಟಾದ ನಗರದು ಅಭಾವ ಕಡಿಮೆಯಾದ ಬಳಿಕ ಡಿಜಿಟಲ್‌ ವಹಿವಾಟಿನ ಪ್ರಮಾಣ ಅಚ್ಚರಿಯ ರೀತಿಯಲ್ಲಿ ಏರಿಕೆ ಕಂಡಿದೆ. ಅಲ್ಲದೆ ಎಲ್ಲಾ ವಲಯಗಳಲ್ಲೂ ಆನ್‌ಲೈನ್‌ ವ್ಯವಹಾರ ಹೆಚ್ಚುತ್ತಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published.