ಹಂಪಿಯ ಬಂಡೆಗಳ ಮಧ್ಯೆ ವಿದೇಶಿ ಯುವತಿ ಜೊತೆ ಲೋಕಲ್‌ ಹುಡುಗನ ರೊಮ್ಯಾನ್ಸ್….

ಹಂಪಿ : ನಮ್ಮ ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಹಂಪಿ ಸಹ ಒಂದು. ಆದರೆ ಇತ್ತೀಚಿಗೆ ನಮ್ಮ ಹಂಪಿ ವಿದೇಶಿಯರ ಮೋಜು, ಮಸ್ತಿಗೆ ಸಿಕ್ಕಿ ಅನೈತಿಕ ಚಟುವಟಿಕೆಗಳ ಆಗರವಾಗಿ ಮಾರ್ಪಡುತ್ತಿದೆ.

ಅಲ್ಲದೆ ಹಂಪಿಯ ದೇವಾಲಯಗಳಲ್ಲಿ ಮದ್ಯಪಾನ ಮಾಡಿ, ಅಲ್ಲೇ ಬಾಟಲಿಗಳನ್ನು ಎಸೆಯುತ್ತ ಅಪವಿತ್ರಗೊಳಿಸುತ್ತಿದ್ದಾರೆ. ಅಲ್ಲದೆ ದೇವಾಲಯದ ಒಳಗೇ ಚಪ್ಪಲಿ ಹಾಕಿಕೊಂಡು ಓಡಾಡಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಇತ್ತೀಚೆಗಷ್ಟೇ ವಿದೇಶಿ ಯುವತಿಯೊಬ್ಬಳು, ಸ್ಥಳೀಯ ಯುವಕನೊಬ್ಬನ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ವಿಡಿಯೊ ಎಲ್ಲೆಡೆ ವೈರಲ್‌ ಆಗಿದೆ. ವಿದೇಶಿ ಯುವತಿಯೊಬ್ಬಳ ಜೊತೆ ಸ್ಥಳೀಯ ಯುವಕನೊಬ್ಬ ಬಂಡೆಯ ಮಧ್ಯೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದ. ಸ್ಥಳೀಯರು ಅಲ್ಲಿಗೆ ಹೋದ ಕೂಡಲೆ ಇಬ್ಬರೂ ಪರಾರಿಯಾಗಿದ್ದಾರೆ. ಇದನ್ನು ನೋಡಿ ಸ್ಥಳೀಯರು ಮುಜುಗರಕ್ಕೀಡಾಗುವ ಪರಿಸ್ಥಿತಿ ಎದುರಾಗಿದೆ.


ಹಂಪಿಯ ವಿರೂಪಾಕ್ಷ ದೇವಾಲಯ ಹಿಂದಿನ ವಾಟರ್‌ ಫಾಲ್ಸ್‌ ಬಳಿ ವಿದೇಶಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದು, ಕ್ಯಾಮರಾ ನೋಡುತ್ತಿದ್ದರಂತೆ ಇಬ್ಬರೂ ಓಟಕ್ಕಿತ್ತಿದ್ದಾರೆ.

Leave a Reply

Your email address will not be published.