ನಿವೃತ್ತಿಯಾದ ಆಶಿಶ್ ನೆಹ್ರಾಗೆ ಪಾಕ್ ವೇಗಿ ಶೋಯೇಬ್ ಅಖ್ತರ್ ಹೇಳಿದ್ದೇನು..?

ದೆಹಲಿಯಲ್ಲಿ ನವೆಂಬರ್ 1 ರಂದು ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ನಡೆದ ಮೊದಲ ಟಿ-20 ಪಂದ್ಯ, ಎಡಗೈವೇಗಿ ಆಶಿಶ್ ನೆಹ್ರಾ ಪಾಲಿಗೆ ಕೊನೆಯ ಪಂದ್ಯವಾಗಿತ್ತು. 18 ವರ್ಷಗಳ ತಮ್ಮ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಅಂತಿಮ ಪಂದ್ಯದಲ್ಲಿ 4 ಓವರ್ ಎಸೆದ ನೆಹ್ರಾ 29 ರನ್ ನೀಡಿದ್ದರು. ಈ ಪಂದ್ಯವನ್ನು ಭಾರತ 53 ರನ್ ಅಂತರದಿಂದ ಜಯಿಸಿತ್ತು.

ನಾಯಕ ವಿರಾಟ್ ಕೊಹ್ಲಿಯೂ ಸೇರಿದಂತೆ ಟೀಮ್ ಇಂಡಿಯಾದ ಆಟಗಾರರೆಲ್ಲ ಸೇರಿಕೊಂಡು ಮೈದಾನದ ತುಂಬ ಹೊತ್ತು ತಿರುಗಾಡಿ ಎಡಗೈ ವೇಗಿಗೆ ಭಾವಪೂರ್ಣವಾದ ಫೇರ್ವೆಲ್ ನೀಡಿದ್ದರು.

Image result for ashish nehra shoaib akhtar

ಇದೀಗ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್, ಸಾಮಾಜಿಕ ಜಾಲತಾಣವಾದ ಟ್ವಿಟರ್ ಮೂಲಕ 38 ವರ್ಷದ ಆಶಿಶ್ ನೆಹ್ರಾಗೆ ಶುಭ ಹಾರೈಸಿದ್ದಾರೆ. ಆಶಿಶ್ ನೆಹ್ರಾ ಹಾಗೂ ಶೋಯೆಬ್ ಅಖ್ತರ್ ಎದುರಾಳಿಗಳಾಗಿ ಅನೇಕ ಪಂದ್ಯಗಳನ್ನಾಡಿದ್ದಾರೆ.

ವಿಶ್ವದ ಅತ್ಯಂತ ವೇಗದ ಬೌಲರ್ ಎಂದೇ ಹೆಸರಾಗಿದ್ದ ಶೋಯೆಬ್ ಅಖ್ತರ್ ‘ ಒಬ್ಬ ಒಳ್ಳೆಯ ವ್ಯಕ್ತಿ ಹಾಗೂ ಪ್ರಾಮಾಣಿಕ ವೇಗದ ಬೌಲರ್ ಆಗಿದ್ದ ನೆಹ್ರಾ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗಿದ್ದಾರೆ. ಆಶಿಶ್ ನೆಹ್ರಾ, ನಿಮ್ಮೆದುರು ಆಟವಾಡಿದ್ದು ತುಂಬ ಖುಷಿಯನ್ನು ನೀಡಿತ್ತು. ಚಿಯರ್ಸ್ ‘ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.