ವಿರಾಟ್‌ ಕೊಹ್ಲಿ ಹೀಗೆಲ್ಲ ಆಗಲು ಅನುಷ್ಕಾಳೇ ಕಾರಣವಂತೆ …….!!!

ರಾಜ್‌ಕೋಟ್ : ಟೀಂ ಇಂಡಿಯಾದ ಕ್ಯಾಪ್ಟನ್‌, ದಾಖಲೆಗಳ ಸರದಾರ ವಿರಾಟ್‌ ಕೊಹ್ಲಿ ಬಹಳ ಬದಲಾಗಿದ್ದಾರಂತೆ. ಕಳೆದ ನಾಲ್ಕು ವರ್ಷಗಳಲ್ಲಿ ಕೊಹ್ಲಿ ಪ್ರೇಯಸಿ ಅನುಷ್ಕಾ ಅವರಿಂದ ತಾಳ್ಮೆ ಕಲಿತುಕೊಂಡಿದ್ದಾರಂತೆ. ಹೀಗಂತ ಸ್ವತಃ :ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಇ್ತತೀಚೆಗಷ್ಟೇ ನಡೆದ ಚಾಟ್ ಶೋ ಬ್ರೇಕ್‌ ಫಾಸ್ಟ್‌ ವಿತ್‌ ಚಾಂಪಿಯನ್‌ ಎಂಬ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಕೊಹ್ಲಿ ಹಂಚಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಅನುಷ್ಕಾರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಈಗ ಬಹಳ ವಿವೇಚನೆಯಿಂದ ವರ್ತಿಸುತ್ತಿದ್ದೇನೆ ಎನಿಸುತ್ತಿದೆ. ಮೊದಲು ಬಹಲ ಅಗ್ರೆಸಿವ್‌ ಆಗಿದ್ದ ನಾನು ಅನುಷ್ಕಾ ಜೊತೆ ಸೇರಿದ ಮೇಲೆ ತಾಳ್ಮೆಯಿಂದಿರುವುದು ಹೇಗೆ, ಅದನ್ನು ಯಾವ ಸಂದರ್ಭದಲ್ಲಿ ಬಳಸಿಕೊಳ್ಳಬೇಕು ಎಂಬುದನ್ನು ಅನುಷ್ಕಾ ಹೇಳಿಕೊಟ್ಟಿರುವುದಾಗಿ ಮನದಾಳದ ಮಾತನ್ನು ಹೊರಹಾಕಿದ್ದಾರೆ.

ನನ್ನ ಎಲ್ಲಾ ವಿಚಾರಗಳಲ್ಲೂ ಅನುಷ್ಕಾ ಸಂಪೂರ್ಣ ಬೆಂಬಲ ನೀಡುತ್ತಾರೆ. ಅದೆಷ್ಟೇ ಕೆಟ್ಟ ಪರಿಸ್ಥಿತಿಯಾದರೂ ಸರಿಯೇ ಆಕೆ ನನಗೆ ಬೆಂಬಲ ನೀಡುತ್ತಾರೆ. ಅನುಷ್ಕಾ ಜೊತೆಗಿದ್ದಾಗಲೇ ಆಸ್ಟ್ರೇಲಿಯಾ ವಿರುದ್ದ ಸತತ ನಾಲ್ಕು ಶತಕ ಬಾರಿಸಿದ್ದೆ. ಇದು ನಿಜಕ್ಕೂ ನನಗೆ ವಿಶೇಷ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com