Sandalwood : ಬಹುನಿರೀಕ್ಷಿತ SRK ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಶಿವಣ್ಣ

ಬುಧವಾರ ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಬೆಂಗಳೂರಿನ ಮಂತ್ರಿ ಸ್ಕ್ವೇರ್ ಮಾಲ್ ನಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಅವರ ಅಭಿನಯದ SRK ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ನಡೆಯಿತು. ಲಕ್ಕಿ ಗೋಪಾಲ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ SRK ಚಿತ್ರದ ಮೋಷನ್ ಪೋಸ್ಟರ್ ಅನ್ನು ಶಿವರಾಜಕುಮಾರ್ ಬಿಡುಗಡೆ ಮಾಡಿದರು. ಶಿವಣ್ಣ ಕುಟುಂಬದ ಸದಸ್ಯರು ಹಾಗೂ ಕನ್ನಡ ಚಿತ್ರರಂಗದ ಹಲವು ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನಟ ರಾಘವೇಂದ್ರ ರಾಜಕುಮಾರ್ ಹಾಗೂ ವಿನಯ್ ರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬದ ಇನ್ನೂ ಕೆಲವು ಸದಸ್ಯರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಹುನಿರೀಕ್ಷಿತ SRK ಚಿತ್ರದಲ್ಲಿ ಶಿವಣ್ಣ ಮೂರು ವಿಭಿನ್ನವಾದ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಅತ್ಯುತ್ತಮ ಸಾಮಾಜಿಕ ಸಂದೇಶವನ್ನೂ ಒಳಗೊಂಡಿದೆ ಎಂದು ಶಿವಣ್ಣ ಹೇಳಿದರು.

ಮಂತ್ರಿ ಮಾಲ್ ನ ಮುಖ್ಯಸ್ಥ ನಿತಿನ್ ಬೀರ್ ಮಾತನಾಡಿ, ‘ ಶಿವರಾಜಕುಮಾರ್ ಅವರು ಅಭಿನಯಿಸಿರುವ SRK ಚಿತ್ರದ ಟೈಟಲ್ ಲಾಂಚ್ ಗೆ ಆತಿಥ್ಯ ವಹಿಸುತ್ತಿರುವುದು ಅತ್ಯಂತ ಖುಶಿ ನೀಡಿದೆ. ಇಂತಹುದೇ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಸಹಕರಿಸಲಿದ್ದೇವೆ ‘ ಎಂದು ಹೇಳಿದರು.

 

Leave a Reply

Your email address will not be published.

Social Media Auto Publish Powered By : XYZScripts.com