ರಣಜಿ ಟ್ರೋಫಿ : ಮಯಂಕ್ ಅಗರವಾಲ್ ಅಮೋಘ ತ್ರಿಶತಕ, ಗೆಲುವಿನ ಕನಸಲ್ಲಿ ಕರ್ನಾಟಕ

ಪುಣೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯುತ್ತಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ ಮಹಾರಾಷ್ಟ್ರ 248 ರನ್ ಹಿನ್ನಡೆಯಲ್ಲಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ ಮಯಂಕ್ ಅಗರವಾಲ್ ಅವರ ತ್ರಿಶತಕ ಹಾಗೂ ಕರುಣ್ ನಾಯರ್ ಶತಕಗಳ ನೆರವಿನಿಂದ 628 ರನ್ ಬೃಹತ್ ಮೊತ್ತ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು.

28 ಬೌಂಡರಿ ಹಾಗೂ 4 ಸಿಕ್ಸರ್ ಬಾರಿಸಿದ ಮಯಂಕ್ ಅಗರವಾಲ್ 304 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ತಾಳ್ಮೆಯ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ ಕರುಣ್ ನಾಯರ್ 116 ರನ್ ಗಳಿಸಿದರು. ಮಹಾರಾಷ್ಟ್ರ ಪರವಾಗಿ ಚಿರಾಗ್ ಖುರಾನಾ 3 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್ ನಲ್ಲಿ 245 ರನ್ ಗಳಿಗೆ ಆಲೌಟ್ ಆಗಿದ್ದ ಮಹಾರಾಷ್ಟ್ರ ಎರಡನೇ ಇನ್ನಿಂಗ್ಸ್ ನಲ್ಲಿಯೂ 135 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ರುತುರಾಜ್ ಗಾಯಕ್ವಾಡ್ 61* ಹಾಗೂ ರಾಹುಲ್ ತ್ರಿಪಾಠಿ 33* ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಕರ್ನಾಟಕದ ಪರವಾಗಿ ಅಭಿಮನ್ಯು ಮಿಥುನ್ 2 ವಿಕೆಟ್ ಪಡೆದಿದ್ದಾರೆ. ಇನ್ನೂ ಒಂದು ದಿನದ ಆಟ ಬಾಕಿಯಿದ್ದು 248 ರನ್ ಹಿನ್ನಡೆಯಲ್ಲಿರುವ ಮಹಾರಾಷ್ಟ್ರ ಸೋಲಿನ ಭೀತಿ ಎದುರಿಸುತ್ತಿದೆ. ಆಡಿರುವ 2 ಮ್ಯಾಚ್ ಗೆದ್ದಿರುವ ಕರ್ನಾಟಕ 13 ಪಾಯಿಂಟ್ ಗಳೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

Leave a Reply

Your email address will not be published.