ಜಗತ್ತಿನ ಕೋಟ್ಯಂತರ ಜನರಿಗೆ 40 ನಿಮಿಷಗಳ ಕಾಲ ಶಾಕ್‌ ನೀಡಿದ ವಾಟ್ಸಾಪ್‌ …..!

ಬೆಂಗಳೂರು : ಶುಕ್ರವಾರ ಇದ್ದಕ್ಕಿದ್ದಂತೆ ಜಗತ್ತಿನ ಕೋಟ್ಯಾನುಕೋಟಿ ಮಂದಿಗೆ ವಾಟ್ಸಾಪ್‌ ಶಾಕ್ ನೀಡಿದ ಸಂಗತಿ ನಡೆದಿದೆ. ಸರ್ವರ್‌ ಡೌನ್‌ ಆದ ಹಿನ್ನೆಲೆಯಲ್ಲಿ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಇಂದು 40 ನಿಮಿಷಗಳ ಕಾಲ ವಾಟ್ಸಾಪ್‌ ಕಾರ್ಯ ನಿರ್ವಹಣೆ ಮಾಡುವುದನ್ನು ನಿಲ್ಲಿಸಿತ್ತು.

ಮದ್ಯಾಹ್ನ ಸುಮಾರು 1.45ರ ವೇಳೆ ಸ್ಥಗಿತಗೊಂಡಿದ್ದ ವಾಟ್ಸಾಪ್‌ನಲ್ಲಿ ಯಾವುದೇ ಸಂದೇಶ ಕಳಿಸಿದರೂ ಸೆಂಡ್‌ ಆಗುತ್ತಿರಲಿಲ್ಲ. 2.45ರ ಸುಮಾರಿಗೆ ವಾಟ್ಸಾಪ್‌ ಸೇವೆ ಪುನಃ ಪ್ರಾರಂಭವಾಯಿತು.

ಭಾರತದಲ್ಲಿ ವಾಟ್ಸಾಪ್ ಸಮಸ್ಯೆ ಪರಿಹಾರವಾಗಿದೆ. ಆದರೆ ಇನ್ನೂ ಕೆಲ ದೇಶಗಳಲ್ಲಿ ವಾಟ್ಸಾಪ್‌ ಕ್ರಾಶ್‌ ಆಗಿದೆ ಎನ್ನಲಾಗುತ್ತಿದೆ. 2009ರಲ್ಲಿ ಆರಂಭಗೊಂಡಿದ್ದ ವಾಟ್ಸಾಪನ್ನು ಜಗತ್ತಿನಾದ್ಯಂತ ಕೋಟ್ಯಾನುಕೋಟಿ ಮಂದಿ ಬಳಸುತ್ತಿದ್ದಾರೆ.

ಆದರೆ ವಾಟ್ಸಾಪ್‌ ಕ್ರಾಶ್‌ ಆದ ಹಿನ್ನೆಲೆಯಲ್ಲಿ #whatsappdown ಎಂಬ ಹೆಸರಿನಲ್ಲಿ ಟ್ವಿಟರ್‌ನಲ್ಲಿ ಜನ ಸಕ್ರಿಯರಾಗಿದ್ದು, ಟ್ರೆಂಡ್‌ ಆಗಿದೆ.

ಅಲ್ಲದೆ ಸಾಕಷ್ಟು ಮಂದಿ ಇದಕ್ಕೆ ಫನ್ನಿ ಕಮೆಂಟ್ಗಳನ್ನು ಹಾಕುತ್ತಿದ್ದಾರೆ.

 

 

Leave a Reply

Your email address will not be published.