ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ ಎಂದಿದ್ದ ಕಮಲ್ ಹಾಸನ್ ವಿರುದ್ದ ದೂರು ದಾಖಲು

ಚೆನ್ನೈ : ದೇಶದಲ್ಲಿ ಹಿಂದೂ ಭಯೋತ್ಪಾದನೆ ಇಲ್ಲ ಎನ್ನಲು ಸಾಧ್ಯವಿಲ್ಲ ಎಂದಿದ್ದ ನಟ ಕಮಲ್ ಹಾಸನ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ದೇಶದಲ್ಲಿ ಹಿಂದೂ ಭಯೋತ್ಪಾದನೆ ಇಲ್ಲ ಎನ್ನಲು ಸಾಧ್ಯವೇ ಇಲ್ಲ. ಹಿಂದೂ ಭಯೋತ್ಪಾದನೆ ದೇಶದಲ್ಲಿ ಇದೆ.

ಇದುವರೆಗೂ ಮಾತಿನಿಂದ ಪರಿಹಾರ ಕಂಡುಕೊಳ್ಳುತ್ತಿದ್ದ ಬಲಪಂಥೀಯರು ಹಿಂಸಾಚಾರಕ್ಕೆ ಮುಂದಾಗಿದ್ದಾರೆ. ಹಿಂದೂ ಸಂಘಟನೆಯೊಳಗೆ ಬಯೋತ್ಪಾದನೆ ನುಸುಳಿದೆ. ಇದರಿಂದ ಒಳ್ಳೆಯದಾಗಲು ಸಾಧ್ಯವಿಲ್ಲ ಎಂದಿದ್ದರು.

ಈ ಹಿನ್ನೆಲೆಯಲ್ಲಿ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಹಾಗೂ ಹಿಂದೂಪರ ಸಂಘಟನೆಗಳ ಮಾನನಷ್ಟವಾಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸೆಕ್ಷನ್‌ 500 (ಮಾನನಷ್ಟ ಮೊಕದ್ದಮೆ), ಸೆಕ್,ನ್‌ 511, 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು), ಸೆಕ್ಷನ್‌ 295, ಸೆಕ್ಷನ್ 505 (ದರ್ಮಗಳ ನಡುವೆ ಸಂಘರ್ಷ ಉಂಟು ಮಾಡುವುದು) ಕೇಸ್‌ ದಾಖಲಾಗಿದೆ.

Leave a Reply

Your email address will not be published.