ಭಯಾನಕ ಕನಸಿಗೆ ಹೆದರಿ ಆತ್ಮಹತ್ಯೆಗೆ ಶರಣಾದ ಪಿಯುಸಿ ವಿದ್ಯಾರ್ಥಿ

ಹೈದರಾಬಾದ್‌ : ಪ್ರತೀ ದಿನ ಭಯಾನಕ ಕನಸು ಬೀಳುತ್ತಿದ್ದ ಹಿನ್ನೆಲೆಯಲ್ಲಿ ಖಿನ್ನತೆಗೊಳಗಾದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಸೈಯದ್‌ ರಹಮತ್‌ ಅಲಿ ಎಂದು ತಿಳಿದುಬಂದಿದೆ. ಹೈದರಾಬಾದ್‌ನ ಚೈತನ್ಯ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಈತ ಆತ್ಮಹತ್ಯೆಗೂ ಮುನ್ನ ಡೆತ್‌ ನೋಟ್‌ ಬರೆದಿಟ್ಟಿದ್ದ.

ಆ ಡೆತ್‌ ನೋಟ್‌ನಲ್ಲಿ ಕೆಲ ದಿನಗಳಿಂದ ತನಗೆ ಭಯಾನಕ ಕನಸುಗಳು ಬೀಳುತ್ತಿದ್ದು, ಸಂಬಂಧಿಕರನ್ನು ಕೊಲ್ಲುವಂತಹ ಅನುಭವವಾಗುತ್ತಿದೆ. ಈ ಕನಸಿನಿಂದಾಗಿ ನಾನು  ವಿಚಲಿತನಾಗಿದ್ದೇನೆ. ಇದರಿಂದ ಆಘಾತಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾನೆ. ಅಲ್ಲದೆ ಆತ್ಮಹತ್ಯೆಗೂ ಮುನ್ನ ಆತ ತನ್ನ ತಂದೆಗೆ ಕರೆ ಮಾಡಿ ತನಗೆ ಆಗುತ್ತಿರುವ ಅನುಬವದ ಬಗ್ಗೆ ಹೇಳಿ ಫೋನ್‌ ಕಟ್ ಮಾಡಿದ್ದಾನೆ. ಬಳಿಕ ತಂದೆ ವಾಪಸ್‌ ಕರೆ ಮಾಡಿದಾಗ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂದು ಬರುತ್ತಿತ್ತು. ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿರುವ ಪೊಲೀಸರು ಆತನನ್ನು ಹುಡುಕುವ ವೇಳೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬಹಿರಂಗಗೊಂಡಿದೆ.

 

Leave a Reply

Your email address will not be published.