1 ವರ್ಷದ ಕಂದಮ್ಮನನ್ನೂ ಬಿಡದ ಕಾಮುಕ : ತನ್ನ ಮಕ್ಕಳೆದುರೇ ಪಕ್ಕದ ಮನೆಯ ಮಗು ಮೇಲೆ ಅತ್ಯಾಚಾರ

ದೆಹಲಿ : ಪಕ್ಕದ ಮನೆಗೆ ಆಟವಾಡಲೆಂದು ಹೋಗಿದ್ದ ಒಂದು ವರ್ಷದ ಎಳೆಯ ಕಂದಮ್ಮನ ಮೇಲೆ ಪಕ್ಕದ ಮನೆಯ 33 ವರ್ಷದ ಕಾಮುಕನೊಬ್ಬ ತನ್ನ ಮಕ್ಕಳ  ಮುಂದೆಯೇ ಅತ್ಯಾಚಾರ ಮಾಡಿರುವ ಘೋರ ಗಟನೆ ದೆಹಲಿಯಲ್ಲಿ ನಡೆದಿದೆ.

ಪಕ್ಕದ ಮನೆಯಲ್ಲಿ 4 ವರ್ಷದ ಮಗು ಹಾಗೂ 2 ವರ್ಷದ ಮಗುವಿದ್ದ ಕಾರಣ ಈ ಒಂದು ವರ್ಷದ ಮಗು ಆಟವಾಡಲು ಅವರ ಮನೆಗೆ ಹೋಗಿದೆ. ಆರೋಪಿಯ ಪತ್ನಿ ಮಹಡಿಯ ಮೇಲೆ ಏನೋ ಕೆಲಸದಲ್ಲಿ ತೊಡಗಿದ್ದಳು. ಈ ವೇಳೆ ಮೂವರೂ ಮಕ್ಕಳನ್ನು ರೂಮಿಗೆ ಕರೆದೊಯ್ದ ಕಾಮುಕ ತನ್ನ ಇಬ್ಬರು ಮಕ್ಕಳ ಮುಂದೆಯೇ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಮೂಲಗಳು ಹೇಳಿವೆ.

ಮಗು ಮನೆಗೆ ಮರಳಿದ ಮೇಲೆ ಮಗುವಿನ ಗುಪ್ತಾಂಗದಲ್ಲಿ ರಕ್ತಾಸ್ರಾವವಾಗುತ್ತಿರುವುದನ್ನು ಗಮನಿಸಿದ ತಾಯಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಗುವಿನ ಮೇಲೆ ಅತ್ಯಾಚಾರ ನಡೆದಿರುವ ವಿಚಾರ ಬಹಿರಂಗಗೊಂಡಿದೆ.

ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published.