ಬೆಂಗಳೂರು : ಗೂಗಲ್ ನಕ್ಷೆಯಲ್ಲೂ ಹರಡಿದ ಕನ್ನಡದ ಕಂಪು
ಬೆಂಗಳೂರು : ಜಗತ್ತಿನ ಅತಿ ದೊಡ್ಡ ಸರ್ಚ್ ಎಂಜಿನ್ ಎಂಬ ಖ್ಯಾತಿ ಪಡೆದಿರುವ ಗೂಗಲ್, ತನ್ನ ನಕ್ಷೆಯಲ್ಲಿ ಸ್ಥಳಗಳ ಹೆಸರನ್ನು ಕನ್ನಡದಲ್ಲಿ ಹಾಕಿದೆ. ಇನ್ನು ಮುಂದೆ ಇಂಗ್ಲಿಷ್ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಸ್ಥಳಗಳ ಹೆಸರು ಕಾಣಿಸಿಕೊಳ್ಳಲಿದೆ.
ಗೂಗಲ್ ಮ್ಯಾಪ್ನಲ್ಲಿ ಸರ್ಚ್ ಮಾಡುವ ಸಂದರ್ಭದಲ್ಲಿ ಸ್ಥಳಗಳ ಹೆಸರು ಕನ್ನಡದಲ್ಲೇ ಕಾಣಿಸಿಕೊಳ್ಳಲಿದೆ. ಗೂಗಲ್ ತನ್ನ ನಕ್ಷೆಯಲ್ಲಿ ಭಾರತದ ವಿವಿಧ ಪ್ರಾದೇಶಿಕ ಭಾಷೆಗಳನ್ನು ಅಳವಡಿಸಿಕೊಂಡಿದೆ. ಈ ಕುರಿತು ಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದು, ಗೂಗಲ್ ಗೆ ಧನ್ಯವಾದ ಹೇಳಿದ್ದಾರೆ.
ಅಲ್ಲದೆ ರಾಜಧಾನಿ ದೆಹಲಿಯಲ್ಲಿ ಹಿಂದಿ ಹಾಗೂ ಇಂಗ್ಲಿಷ್ನಲ್ಲಿ , ತೆಲಂಗಾಣ ಮತ್ತು ಆಂಧ್ರದಲ್ಲಿ ತೆಲುಗು ಹಾಗೂ ತಮಿಳುನಾಡಿನಲ್ಲಿ ತಮಿಳು ಭಾಷೆಯಲ್ಲಿ ಕಾಣಿಸಿಕೊಳ್ಳುತ್ತಿದೆ.
ಕನ್ನಡದಲ್ಲಿ ಹೆಸರು ಸೇರಿಸಿರುವ ಗೂಗಲ್, ಕೆಲ ಸ್ಥಳಗಳ ಹೆಸರನ್ನು ತಪ್ಪಾಗಿ ಬರೆಯಲಾಗಿದೆ. ಎಲ್ಲವನ್ನು ಸಹಿಸಿಕೊಳ್ಳುವ ಕನ್ನಡಿಗರಿಗೆ ಗೂಗಲ್ನಲ್ಲಿ ಕನ್ನಡ ಬಂದಿರುವುದೇ ದೊಡ್ಡ ಸಂತೋಷ. ಚಿಕ್ಕ ಪುಟ್ಟ ತಪ್ಪುಗಳನ್ನು ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.