ಚೆನ್ನೈ : ಆಸ್ಪತ್ರೆಗೆ ದಾಖಲಾದ ಬಹುಭಾಷಾ ನಟಿ ಖುಷ್ಬೂ….

ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟಿ ಕಾಂಗ್ರೆಸ್‌ ನಾಯಕಿ ಖುಷ್ಬೂ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಖುಷ್ಬೂ ಅವರ ಹೊಟ್ಟೆಯಲ್ಲಿ ಗಂಟು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಖುಷ್ಬೂ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ಕುರಿತು ಖುಷ್ಬೂ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ನಾನು ನಿಮಗೆ ಸಾಕಷ್ಟು ವಿಷಯ ಹೇಳುವುದಿದೆ. ನಾನು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದೇನೆ. ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಎಲ್ಲರೂ ನಾನು ಶೀಘ್ರ ಗುಣಮುಖಳಾಗಲೆಂದು ಹಾರೈಸಿದ್ದೀರಿ. ನಿಮಗೆಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

Leave a Reply

Your email address will not be published.