ಸನ್ನಿ ಆ ಪಾಠ ಕಲಿಸೋಕೆ ಬರ್ತಿದ್ದಾಳೆ..ನೋಡಿ, ಜೊತೆಗೆ ಮಾಡಿ, ಖುಷಿ ಪಡಿ ….!!

ಸನ್ನಿ ಲಿಯೋನ್ ಅಂದ್ರೆ ಯಾರಿಗೆ ಗೊತ್ತಿಲ್ಲಾ ಹೇಳಿ. ಈ ಮಾಜಿ ನೀಲಿ ರಾಣಿ ಸೃಷ್ಟಿಸಿರೋ ಸಂಚಲನವೇ ಅಂತದ್ದು. ಪೋರ್ನ್ ಇಂಡಸ್ಟ್ರಿಯಿಂದ ಬಾಲಿವುಡ್ ಪ್ರವೇಶಿಸಿದ ಸನ್ನಿ, ಕನ್ನಡ ಸಿನಿಮಾಗಳಲ್ಲೂ ಮಿಂಚಿ ಕಮಾಲ್ ಮಾಡಿದ್ಲು.
ನೀಲಿ ಚಿತ್ರಗಳ ಮೂಲಕ, ಬಾಲಿವುಡ್ ಸಿನಿಮಾಗಳ ಹಸಿಬಿಸಿ ದೃಶ್ಯಗಳಿಂದ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿರೋ ಸನ್ನಿ, ಇದೀಗ ಮನೆ ಮನೆಗೆ ಬಂದು ಆ ಕಿಚ್ಚನ್ನ ಹೆಚ್ಚಿಸೋಕೆ ಮುಂದಾಗಿದ್ದಾಳೆ‌. ಸನ್ನಿ ಮನೆ ಮನೆಗೂ ಬರ್ತಾಳಾ ಅಂತ ಕನ್ಫ್ಯೂಸ್ ಆಗ್ಬೇಡಿ, ಮುಂದೆ ಓದಿ.
ಹೌದು ಸನ್ನಿ ಲಿಯೋನ್ ಮನೆ ಮನೆಗೆ ಬರ್ತಿರೋದೇನೊ ನಿಜ. ಅದು ಕಿರುತೆರೆ ಕಾರ್ಯಕ್ರಮದ ಮೂಲಕ ಅನ್ನೋದೇ ವಿಶೇಷ. ಎಂ ಟಿವಿಯ ಒಂದು ಫಿಟ್ನೆಸ್ ಶೋ ಮೂಲಕ ಪ್ರತಿದಿನ ಮುಂಜಾನೆ ವೀಕ್ಷಕರಿಗೆ ದರ್ಶನ ಕೊಡಲಿದ್ದಾಳೆ ಸನ್ನಿ. ಈಗಾಗಲೇ ಸನ್ನಿಯ ಹಾಟ್ ಹಾಟ್ ಯೋಗ ಮತ್ತು ವ್ಯಾಯಾಮದ ವೀಡಿಯೋಗಳು ಯೂಟ್ಯೂಬ್ನಲ್ಲಿ ವೈರಲ್ಲಾಗಿದೆ.
ಈಗ ಇಂತದ್ದೇ ವ್ಯಾಯಾಮದ ಪಾಠ ಮಾಡೋಕೆ ಸನ್ನಿ ಕಿರುತೆರೆಯಲ್ಲಿ ಕಾಣಿಸಿಕೊಳ್ತಿದ್ದಾಳೆ. ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಎಷ್ಟು ಅವಶ್ಯಕ ಅನ್ನೋದನ್ನ ಈ ಶೋನಲ್ಲಿ ಸನ್ನಿಯಿಂದ ಹೇಳಿಸೋ ಪ್ರಯತ್ನ ನಡೀತಿದೆ. ಸನ್ನಿ ವ್ಯಾಯಾಮದ ಪಾಠ ಮಾಡ್ತಾಳೆ ಅಂದ್ರೆ ಎಂತಾವ್ರೂ ಒಮ್ಮೆ ಟ್ರೈ ಮಾಡ್ತಾರೆ ಅನ್ನೋದು ಶೋ ನಿರ್ಮಾಪಕರ ಲೆಕ್ಕಾಚಾರ.
ಶೀಘ್ರದಲ್ಲೇ ಎಂ ಟಿವಿಯಲ್ಲಿ ಸನ್ನಿಯ ಫಿಟ್ನೆಸ್ ಶೋ ಸ್ಟಾರ್ಟ್ ಆಗಲಿದೆ. ಸನ್ನಿಯ ವ್ಯಾಯಾಮ ನೋಡ್ತಾ, ಜೊತೆಗೆ ಮಾಡ್ತಾ ದಿನ ಶುರು ಮಾಡಬಹುದು. ಒಂದೆರಡು ದಿನಕ್ಕೆ ಶೋ ಸಪ್ಪೆ ಎನಿಸಿಬಿಡಬಾರದು ಅನ್ನೋ ಒಳ್ಳೆ ಮ್ಯಾಸಿಕ್ ಹಾಕಿ ಶೋನ ತುಂಬಾ ವಿಭಿನ್ನವಾಗಿ ಪ್ರಸಾರ ಮಾಡಲಾಗ್ತಿದೆಯಂತೆ.

Leave a Reply

Your email address will not be published.

Social Media Auto Publish Powered By : XYZScripts.com