ಮೋದಿ ಕಂಡ್ರೆ ಭಯ ಆಗುತ್ತೆ ಎಂದಿದ್ದ ರಮ್ಯಾಗೆ ತಾಯತ, ಪ್ಯಾಂಪರ್ಸ್‌ ಕಳಿಸಿದ ಬಿಜೆಪಿ ಕಾರ್ಯಕರ್ತ!!

ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೂತಕ್ಕೆ ಹೋಲಿಸಿ, ಮೋದಿ ಅವರನ್ನು ನೋಡಿದರೆ ನನಗೆ ಭಯವಾಗುತ್ತದೆ ಎಂದು ಬಿಜೆಪಿಗರ ಕಾಲೆಳೆದಿದ್ದ ಮಾಜಿ ಸಂಸದೆ ರಮ್ಯಾ ಅವರಿಗೆ ಬಿಜೆಪಿ ಕಾರ್ಯಕರ್ತರೊಬ್ಬರು ತಾಯತ ಹಾಗೂ ಪ್ಯಾಂಪರ್‌ ಕಳಿಸಿ ಕಾಲೆಳೆದಿದ್ದಾರೆ.

ಮೋದಿಯನ್ನು ದೆವ್ವಕ್ಕೆ ಹೋಲಿಸಿದ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಮಂಡ್ಯದ ಶಕ್ತಿ ದೇವತೆ ಕಾಳಮ್ಮನ ದೇವಾಲಯದಲ್ಲಿ ತಾಯತ ಮಾಡಿಸಿಕೊಂಡಿದ್ದಲ್ಲದೆ, ಪ್ಯಾಂಪರನ್ನು ಜಿಲ್ಲಾ ಮುಖ್ಯ ಅಂಚೆ ಕಚೇರಿ ಮೂಲಕ ಮಂಡ್ಯದಲ್ಲಿರುವ ರಮ್ಯಾ ಅವರ ಮನೆ ಹಾಗೂ ಎಐಸಿಸಿ ಕಚೇರಿ ವಿಳಾಸಕ್ಕೆ ಪೋಸ್ಟ್ ಮಾಡಿದ್ದಾರೆ.

Leave a Reply

Your email address will not be published.