ಜಾತಿವಿನಾಶ ವೇದಿಕೆ ರಾಜ್ಯಾಧ್ಯಕ್ಷರಾಗಿದ್ದ, ದಲಿತ ಕವಿ ಲಕ್ಷ್ಮಣ್ ವಿಧಿವಶ

ಸಾಹಿತಿ, ಪ್ರಗತಿಪರ ವ್ಯಕ್ತಿ, ಜಾತಿ ವಿನಾಶ ವೇದಿಕೆಯಲ್ಲಿ ನಾಯಕತ್ವದಲ್ಲಿ ಕಾರ್ಯ ನಿರ್ವಹಿಸಿದ್ದ , ಜಡಿಮಳೆ ಇತ್ಯಾದಿ ಸಾಹಿತ್ಯ ರಚನೆ ಮಾಡಿದ್ದ ಲಕ್ಮಣ್ ನಮ್ಮನ್ನು ಅಗಲಿದ್ದಾರೆ. ಅವರಿಗೆ ವಿಮೋಚನಾ‌ಹೋರಾಟದ ಶ್ರದ್ಧಾಂಜಲಿಗಳು. ದಲಿತ ಸಾಹಿತಿˌ ಹೋರಾಟದ ಒಡನಾಡಿ ಹಾಗೂ ಆತ್ಮೀಯ ಸಂಗಾತಿ ಲಕ್ಷ್ಮಣ್ ರವರು ನಮ್ಮನ್ನು ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ ನಮ್ಮ ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸೋಣಾ.

ದಲಿತ ಕವಿ, ಪ್ರಗತಿಪರ ಹೋರಾಟಗಾರ, ಜಾತಿ ವಿನಾಶ ವೇದಿಕೆಯ ರಾಜ್ಯಾಧ್ಯಕ್ಷರು, ಸಾಹಿತಿ, ಚಿಂತಕ ಲಕ್ಷ್ಮಣ್ ವಿಧಿವಶರಾದರು. ದಲಿತ ಸಂಘಟನೆ ಮೂಲಕ ಜನಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅವರು, ಆನಂತರದ ದಿನಗಳಲ್ಲಿ ನಾಡಿನ ಎಡ ಚಿಂತನೆಯ ಸಂಘಟನೆಗಳತ್ತ ಒಲವು ತೋರಿದ್ದರು. ಕರ್ನಾಟಕದಲ್ಲಿ ಕರ್ನಾಟಕ ವಿಮೋಚನಾ ರಂಗ ಶುರುವಾದ ದಿನಗಳಲ್ಲಿ ಅದರಲ್ಲಿ ತೊಡಗಿಸಿಕೊಂಡು ಕನ್ನಡ ನಾಡಿನ ನೆಲ, ಜಲ,‌ಭಾಷೆ ಉಳಿವಿನ ಅನೇಕ ಹೋರಾಟಗಳಲ್ಲಿ ಕಾಣಿಕೊಂಡರು.

ಭಾಷೆ ಚಳವಳಿ ಒಂದು ಹಂತಕ್ಕೆ ತೀವ್ರತೆ ಪಡೆದ ಸಂದರ್ಭ ದಲ್ಲಿಯೇ ಗೆಳೆಯರ ಜತೆ ಸೇರಿ ಜಾತಿ‌ವಿನಾಶ ಹೋರಾಟಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಸಂಘಟನೆಯ ಅಧ್ಯಕ್ಷ ರಾಗಿದ್ದರೂ ವಿವಿಧ ವೇದಿಕೆಗಳಲ್ಲಿ ಕಾಣಿಕೊಳ್ಳುತ್ತಿದ್ದರು. ಹೋರಾಟ ದ ಜತೆಗೆ ಸಾಹಿತ್ಯ ಕೃಷಿ ಮಾಡಿದ್ದರು. ‘ಸಂಬೋಳಿ’ ಆತ್ಮಕತೆ ಮೂಲಕ ವಿಭಿನ್ನ ಲೇಖಕರಾಗಿ ತೋರಿಸಿಕೊಂಡಿದ್ದರು. ಕಥ‌ಸಂಕಲನ ‘ ಜಡಿಮಳೆ’, ಪ್ರವಾಸ ಕಥನ ಬೆಲೆ ‘ಬಾಳುವ ತಂಗಿಯರು’ ಕೃತಿಗಳನ್ಮು ರಚಿಸಿದ್ದರು. ಅದೆಲ್ಲಕ್ಕಿಂತ ಮುಖ್ಯವಾಗಿ ಅವರು ಸರಳ, ಸಜ್ಜನಿಕೆಯ‌ ಮೂಲಕ ಅಪಾರ ಒಡನಾಡಿಗಳನ್ನು ಹೊಂದಿದ್ದರು.

Leave a Reply

Your email address will not be published.