ರಣಜಿ ಟ್ರೋಫಿ : ಮಯಂಕ್ ಅಗರವಾಲ್ ದ್ವಿಶತಕ, ಬೃಹತ್ ಮೊತ್ತದತ್ತ ಕರ್ನಾಟಕ

ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ ಪುಣೆಯಲ್ಲಿ ರಣಜಿ ಟ್ರೋಫಿ ಪಂದ್ಯ ನಡೆಯುತ್ತಿದೆ. ಮೊದಲನೇ ದಿನ ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಮಹಾರಾಷ್ಟ್ರ, ವಿನಯ್ ಕುಮಾರ್ ಮಾರಕ ದಾಳಿಗೆ ತುತ್ತಾಗಿ, 245 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು. ಮಹಾರಾಷ್ಟ್ರ ಪರವಾಗಿ ರಾಹುಲ್ ತ್ರಿಪಾಠಿ 120 ಹಾಗೂ ನೌಶಾದ್ ಶೇಕ್ 69 ರನ್ ಗಳಿಸಿದರು. ಕರ್ನಾಟಕದ ಪರವಾಗಿ ನಾಯಕ ವಿನಯ್ ಕುಮಾರ್ 6 ಹಾಗೂ ಪವನ್ ದೇಶಪಾಂಡೆ 2 ವಿಕೆಟ್ ಪಡೆದರು.

ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ, ಆರಂಭಿಕರಾದ ಮಯಂಕ್ ಅಗರವಾಲ್ ದ್ವಿಶತಕ ಹಾಗೂ ಆರ್ ಸಮರ್ಥ್ ಶತಕಗಳ ನೆರವಿನಿಂದ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. 129 ರನ್ ಬಾರಿಸಿದ ಆರ್ ಸಮರ್ಥ್ ಸ್ವಪ್ನಿಲ್ ಗೆ ವಿಕೆಟ್ ಒಪ್ಪಿಸಿದರು.

219 ರನ್ ಬಾರಿಸಿರುವ ಮಯಂಕ್ ಅಗರವಾಲ್ ಹಾಗೂ ಅರ್ಧಶತಕ ಗಳಿಸಿರುವ ಕರುಣ್ ನಾಯರ್ (56*) ನಾಟೌಟ್ ಆಗಿ ಉಳಿದಿದ್ದಾರೆ. ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 461 ರನ್ ಮೊತ್ತ ಸೇರಿಸಿರುವ ಕರ್ನಾಟಕ 216 ರನ್ ಮುನ್ನಡೆ ಸಾಧಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com