ದೇಶದಲ್ಲಿ ಹಿಂದೂ ಉಗ್ರವಾದ ಇಲ್ಲ ಎನ್ನಲು ಸಾಧ್ಯವಿಲ್ಲ : ನಟ ಕಮಲ್ ಹಾಸನ್

ಚೆನ್ನೈ : ಇತ್ತೀಚೆಗಷ್ಟೇ ಮೆರ್ಸಲ್‌ ಸಿನಿಮಾದಲ್ಲಿ ಜಿಎಸ್‌ಟಿ ವಿರುದ್ದ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ಕಕ್ಕಾಗಿ ಚಿತ್ರದ ಬೆಂಬಲಕ್ಕೆ ನಿಂತಿದ್ದ ಕಮಲ್‌ ಹಾಸನ್‌ ಈ ಬಾರಿ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ. ರಾಜಕೀಯಕ್ಕೆ ಸೇರಲು ಸಿದ್ದತೆ ನಡೆಸುತ್ತಿರುವ ಕಮಲ್ ಹಾಸನ್‌, ಹಿಂದೂ ಉಗ್ರವಾದ ಇಲ್ಲ ಎನ್ನುವಂತಿಲ್ಲ. ಹಿಂದೂ ಉಗ್ರವಾದವನ್ನು ತಳ್ಳಿ ಹಾಕುವಂತಿಲ್ಲ ಎಂದಿದ್ದಾರೆ.

ಕಮಲ್ ಹಾಸನ್‌ ತಮಿಳು ವಾರ ಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದು, ಈ ಅಂಕಣದಲ್ಲಿ ಹಿಂದೂ ಉಗ್ರವಾದವನ್ನು ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಿಂದೂ ಉಗ್ರವಾದ ಅಸ್ತಿತ್ವದಲ್ಲಿತ್ತು. ಅವರೇ ಈಗ ಹಿಂಸಾಚಾರ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ನಮ್ಮ ದೇಶದ ಜನತೆ ಸತ್ಯಮೇವ ಜಯತೆ ಎಂಬ ಮಾತಿನಲ್ಲಿ ಭರವಸೆ ಇಟ್ಟಿದ್ದರು. ಆದರೆ ಈಗ ಅದನ್ನು ಕಳೆದುಕೊಳ್ಳುತ್ತಿದ್ದಾರೆ. ವಾಸ್ತವ ಜಗತ್ತಿನಲ್ಲಿ ಸತ್ಯಕ್ಕೆ ಬೆಲೆ ಇಲ್ಲದಂತಾಗಿದೆ ಎಂದಿದ್ದಾರೆ. ಈ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com