Fixed deposit ಹಣ ದುರುಪಯೋಗ : KRIDL ಹಿರಿಯ ಅಧಿಕಾರಿಗಳು ಅಮಾನತು ….
ಬೆಂಗಳೂರು : ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿನಿಯಮಿತ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಡಾ.ವೀರನಗೌಡ ಪಾಟೀಲ ಮತ್ತು ಉಪಹಣಕಾಸು ಅಧಿಕಾರಿ ಪ್ರಶಾಂತ ಮಾಡಾಳ್ ಹಾಗೂ ಹಣಕಾಸು ಅಧೀಕ್ಷಕರು ಶಂಕರಾಚಾರಿ ಈ ಮೂವರು ಅಧಿಕಾರಿಗಳನ್ನ ಇಲಾಖಾ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿರಿಸಲಾಗಿದೆ.
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯ ರೂ. 55 ಕೋಟಿಗಳನ್ನು ಮಂಗಳೂರಿನ ಗೋಕುಲ ನಗರದ ನವನಿಧಿ ಕಾಂಪ್ಲೆಕ್ಸ್ ನಲ್ಲಿರುವ ಕುಳಾಯಿ ಮಂಗಳೂರು ಶಾಖೆಯ ಇಂಡಿಯನ್ ಓವರ್ಸೀಸ್ ಬ್ಯಾಂಕ್ ನಲ್ಲಿ ನಿಗದಿತ ಠೇವಣಿ ಇರಿಸಿರುವ ಹಣ ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ನಿಜ ಎಂದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಮೂರು ಜನ ಅಧಿಕಾರಿಗಳ ಮೇಲೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತ್ತು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣವನ್ನು ಮುಂದಿನ ವಿವರವಾದ ತನಿಖೆಗೆ ಸಿ.ಓ.ಡಿ ಗೆಒಪ್ಪಿಸಲಾಗಿದೆ.
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಏಖIಆಐ ಹಿಂದಿನ ಐಂಓಆಂಖಒಙ) ಸಂಸ್ಥೆಯ ಅಧಿಕಾರಿಗಳು ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರರು ಕೈಗೊಂಡಿರುವ ಪ್ರಾಥಮಿಕ ತನಿಖೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದು ಅಲ್ಲದೇ ಬೆಂಗಳೂರಿನ ಕೋರಮಂಗಲದ ವಿಜಯಾ ಬ್ಯಾಂಕ್ ಶಾಖೆಯಿಂದ ಈ ಪ್ರಕರಣದ ಬೆಳಕಿಗೆ ತರುವ ಮೊದಲ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸೂಕ್ತ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಕ್ರಿಮಿನಲ್ ದೂರು ದಾಖಲು ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಮಂಗಳೂರಿನ ಸೂರತ್ಕಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಕ್ರಮಕೈಗೊಳ್ಳಲಾಗಿದೆ.
ಕರ್ನಾಟಕ ಗ್ರಾಮೀಣಮೂಲಸೌಕರ್ಯ ಅಭಿವೃದ್ಧಿನಿಯಮಿತ(ಏಖIಆಐ ಹಿಂದಿನ ಐಂಓಆಂಖಒಙ)ಸಂಸ್ಥೆಯ ವಿವಿಧ ಬ್ಯಾಂಕ್ ಗಳಲ್ಲಿ ಹೂಡಿಕೆಮಾಡಿರುವ ನಿಗದಿತ ಠೇವಣಿಗಳನ್ನುಕೂಲಂಕುಷವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪ್ರಧಾನಕಾರ್ಯದರ್ಶಿ ಡಾ. ನಾಗಾಂಬಿಕಾದೇವಿಯವರ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿರಚಿಸಲು ಅದೇಶಿಸಲಾಗಿದೆ.