ವಾಹನ ಮಾಲೀಕರೇ, ನಿಮ್ಮ ವಾಹನದ ನವೀಕರಣ ಮಾಡಿಸಿಲ್ಲವಾದರೆ ಕೂಡಲೆ ಮಾಡಿಸಿ,ಇಲ್ಲವಾದರೆ…

ದೆಹಲಿ : ವಾಹನ ಮಾಲೀಕರೇ, ನೀವು ನಿಮ್ಮ ವಾಹನ ಖರೀದಿಸಿದ ಸಂದರ್ಭದಲ್ಲಿ ವಾಹನ ವಿಮೆ ಮಾಡಿಸಿ ನಂತರ ರಿನೀವಲ್‌ ಮಾಡಿಸದಿದ್ದರೆ ಮುಂದೆ ಪರಿಸ್ಥಿತಿ ಕಠಿಣವಾಗಲಿದೆ.

ವಾಹನ ನೋಂದಣಿ ಮಾಡಿಸಿ, ವಿಮೆ ಮಾಡಿಸಿದ ಬಳಿಕ ನವೀಕರಣ ಮಾಡಲು ಮರೆತರು ಅಥವಾ ಆಲಸ್ಯ ತೋರಿದರೆ ದಂಡ ತೆರಬೇಕಾಗುತ್ತದೆ. ಸದ್ಯ ಕೇಂದ್ರ ಸರ್ಕಾರ ನೋಂದಣಿಯಾಗದ ವಾಹನಗಳು ವಿಮೆ ನವೀಕರಿಮ ಮಾಡಿಸದಿರುವವರ ಮೇಲೆ ಕಣ್ಣಿಟ್ಟಿದೆ. ದೇಶದಲ್ಲಿ 21 ಕೋಟಿ ನೋಂದಣಿಗೊಳಗಾದ ವಾಹನಗಳಿದ್ದು, ಕೇವಲ 6.5 ಕೋಟಿ ವಾಹನಗಳು ಮಾತ್ರ ವಿಮೆ ನವೀಕರಣ ಮಾಡಿಸಿವೆ ಎಂದು ಮೂಲಗಳು ತಿಳಿಸಿವೆ.

ಆದ್ದರಿಂದ ಸರ್ಕಾರ, ವಿಮೆ ಕಂಪನಿಗಳಿಂದ ನೋಂದಣಿಗೊಂಡ ವಾಹನಗಳು ವಿಮೆ ನವೀಕರಿಸದಿರುವ ಕುರಿತು ಮಾಹಿತಿ ಕೇಳಿದೆ. ನಿಯಮ ಪಾಲಿಸದ ವಾಹನ ಮಾಲೀಕರ ವಿರುದ್ಧ ದಂಡ ವಿಧಿಸುವ ಸಾಧ್ಯತೆ ಇರುವುದಾಗಿ ಹೇಳಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com