ದಯಾನಂದ ರಾಸಲೀಲೆ ಪ್ರಕರಣ : ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ನಟಿ

ದಯಾನಂದ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮನನೊಂದಿರುವ ಕಾವ್ಯ ಆಚಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಿಡಿ ರಿಲೀಸ್ ಆದ ಬಳಿಕ ಮನನೊಂದ ಕಾವ್ಯ ಆಚಾರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕಾವ್ಯ ಆಚಾರ್ ಅಣ್ಣಾ ಕೃಷ್ಣ, ಆಕೆಯನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದಾರೆ.

ಹುಶಾರಾದ ಬಳಿಕ ಕಾವ್ಯಾ  ಬಗ್ಗೆ ಮಾತನಾಡುತ್ತಾಳೆ ಎಂದು ಸಹೋದರ ಕೃಷ್ಣ ಹೇಳಿಕೆ ನೀಡಿದ್ದಾರೆ. ಸಿಡಿ ಬಿಡುಗಡೆಯಾದ ಮಾರನೇ ದಿನವೇ ಕಾವ್ಯಾ ಆತ್ಮಹತ್ಯೆ ಗೆ ಯತ್ನಿಸಿದ್ದಳು. ಹುಣಸಮಾರನಹಳ್ಳಿ ಮಠದ ಕೋಣೆಯಲ್ಲಿ ದಯಾನಂದ ಸ್ವಾಮಿ, ನಟಿಯೊಬ್ಬಳ ಜೊತೆಗೆ ನಡೆಸಿದ ರಾಸಲೀಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಸಿಡಿಯಲ್ಲಿರುವ ನಟಿ ತಾನಲ್ಲವೆಂದೂ ಆಕೆ ಹೇಳಿದ್ದಾಳೆ.

Leave a Reply

Your email address will not be published.

Social Media Auto Publish Powered By : XYZScripts.com