ಇದಕ್ಕೆ ಹಳಿ ಬೇಡ, ಕೇವಲ ಬಿಳಿ ಬಣ್ಣದ ಗೆರೆಗಳ ಮೇಲೆ ಚಲಿಸುತ್ತೆ ಚೀನಾದ ಈ ರೈಲು….!

ಬೀಜಿಂಗ್‌ : ಚೀನಾ ತಂತ್ರಜ್ಞಾನದಲ್ಲಿ ಮುಂದುವರಿದ ರಾಷ್ಟ್ರವಾಗಿದ್ದು, ಸದಾ ಒಂದಿಲ್ಲೊಂದು ಅನ್ವೇಷಣೆ ಮಾಡುತ್ತಲೇ ಇರುತ್ತದೆ. ಈ ಬಾರಿಯೂ ಚೀನಾ ಹೊಸ ಅನ್ವೇಷಣೆ ಮಾಡಿದ್ದು, ಜಗತ್ತಿನ ಮೊದಲ ಸ್ಮಾರ್ಟ್‌ ಟ್ರೇನನ್ನು ಅನಾವರಣಗೊಳಿಸಿದೆ.

ಕಳೆದ ಎರಡು ದಿನಗಳ ಹಿಂದೆ ಅನಾವರಣಗೊಳಿಸಿದ ಈ ವಿಶೇಷ ರೈಲಿನ ಪ್ರಾಯೋಗಿಕ  ಸಂಚಾರ ನಡೆದಿದೆ. ಅಟೋನಮಸ್‌ ರೇಲ್ ರ್ಯಾಪಿಡ್‌ ಟ್ರಾನ್ಸಿಟ್‌ ಎಂದು ಈ ಟ್ರೇನಿಗೆ ಹೆಸರಿಡಲಾಗಿದ್ದು, ಇದರಲ್ಲಿ ಮೂರು ಬೋಗಿಗಳಿರುತ್ತದೆ. 300 ಮಂದಿ ಏಕಕಾಲಕ್ಕೆ ಇದರಲ್ಲಿ ಪ್ರಯಾಣಿಸಬಹುದು. ಗಂಟೆಗೆ 70 ಕಿ.ಮೀ ವೇಗದಲ್ಲಿ ಈ ರೈಲು ಸಂಚರಿಸಲಿದೆ.

ಈ ರೈಲನ್ನು 10 ನಿಮಿಷ ಚಾರ್ಜ್ ಮಾಡಿದರೆ 25 ಕಿ.ಮೀ ಚಲಿಸಬಲ್ಲುದಾಗಿದೆ. ಈ ರೈಲಿಗೆ ಹಳಿ ಬೇಕೆಂದೇನಿಲ್ಲ. ರಸ್ತೆಯ ಮೇಲೆ ಎರಡು ಬಿಳಿ ಬಣ್ಣದ ಗೆರೆಗಳನ್ನು ಎಳೆದಿರುತ್ತಾರೆ. ಈ ರೈಲು ಆ ಗೆರೆಗಳ ಮೇಲೆ ಚಲಿಸುತ್ತದೆ.

 

ಈಗಾಗಲೆ ಚೀನಾದಲ್ಲಿ ಇಂತಹ ಮೂರು ರೈಲುಗಳ ಪ್ರಾಯೋಗಿಕ ಪರೀಕ್ಷೆ ಮಾಡಿದ್ದು, ನಾಲ್ಕು ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಮುಂದಿನ ವರ್ಷದಿಂದ ಚೀನಾದಲ್ಲಿ ಈ ರೈಲು ಕಾರ್ಯ ನಿರ್ವಹಿಸಲಿದೆ.

Leave a Reply

Your email address will not be published.

Social Media Auto Publish Powered By : XYZScripts.com