ಪದ್ಮಾವತಿ ಸಿನಿಮಾವನ್ನು ಬ್ಯಾನ್‌ ಮಾಡ್ತಾರಾ… ? ಈ ಬಗ್ಗೆ ಬಿಜಿಪಿ ನಾಯಕ ಹೇಳಿದ್ದೇನು…?

ಮುಂಬೈ : ಬಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾ ಪದ್ಮಾವತಿ ಕುರಿತು ವಿವಾದಗಳು ಮುಂದುವರಿದಿದೆ. ಇತ್ತೀಚಿಗಷ್ಟೇ ಕಾಂಗ್ರೆಸ್ ತೊರೆದಿದ್ದ ಹಿರಿಯ ನಾಯಕ ಶಂಕರ್‌ ಸಿಂಗ್ ವಘೇಲಾ ಸಿನಿಮಾ ಕುರಿತು ವಿವಾದ ಹುಟ್ಟುಹಾಕಿದ್ದಾರೆ. ಚುನಾವಣೆ ಬಳಿಕ ಸಿನಿಮಾ ಮಾಡಬೇಕು ಇಲ್ಲವೇ ಸಿನಿಮಾವನ್ನು ಬ್ಯಾನ್‌ ಮಾಡುವಂತೆ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ.

ಈ ಸಿನಿಮಾ ಬಿಡುಗಡೆಗೂ ಮುನ್ನ ನಮಗೆ ಸಿನಿಮಾವನ್ನು ಮೊದಲು ತೋರಿಸಬೇಕು. ಅಲ್ಲಾವುದ್ದೀನ್ ಖಿಲ್ಜಿ ಹಾಗೂ ಪದ್ಮಾವತಿ ಮಧ್ಯೆ ಯಾವುದೇ ಅಸಭ್ಯ ದೃಶ್ಯಗಳಿಲ್ಲ ಎಂತಾದರೆ ಮಾತ್ರ ಸಿನಿಮಾ ಬಿಡುಗಡೆ ಮಾಡಬಹುದು. ಅಲ್ಲದೆ ರಾಜ್ಯದಲ್ಲಿ ಶಾಂತಿ ನೆಲೆಸುತ್ತದೆ ಎಂದು ಸ್ಥಳೀಯ ರಜಪೂತ ನಾಯಕರು ಚುನಾವಣಾ ಆಯೋಗ ಮತ್ತು ಗುಜರಾತ್‌ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ರಜಪೂತ ಮತ್ತು ಕ್ಷತ್ರಿಯ ಜನಾಂಗದವರು ಸಿನಿಮಾದಲ್ಲಿ ಸತ್ಯವನ್ನು ತಿರುಚಲಾಗಿದೆ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗಿರುವುದರಿಂದ ಚುನಾವಣೆಯ ಬಳಿಕ ಸಿನಿಮಾ ಬಿಡುಗಡೆ ಮಾಡಿದರೆ ಒಳಿತು ಎಂದಿದ್ದಾರೆ. ಅಲ್ಲದೆ ಸಿನಿಮಾದಲ್ಲಿ ಸತ್ಯವನ್ನು ನಿಜವಾಗಿಯೂ ತಿರುಚಿದ್ದರೆ ಗಲಬೆ ನಡೆಯುವ ಸಾಧ್ಯತೆ ಇದೆ. ಇದರಿಂದ ಸಮುದಾಯದವರ ಭಾವನೆಗೆ ಧಕ್ಕೆ ಉಂಟಾಗುತ್ತದೆ. ಚಿತ್ರೀಕರಣದ ಆರಂಭದಲ್ಲಿ ರಜಪೂತ ಕರ್ಣಿ ಸೇನಾದ ಸದಸ್ಯನೊಬ್ಬ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಕಪಾಳಮೋಕ್ಷ ಮಾಡಿದ್ದನು. ಇನ್ನು ಅನೇಕ ಘಟನೆಗಳು ನಡೆದಿದ್ದವು. ಖಿಲ್ಜಿ ಹಾಗೂ ಪದ್ಮಾವತಿ ಮದ್ಯೆ ಯಾವುದೇ ಅಸಭ್ಯ ಸೀನ್‌ಗಳಿಲ್ಲ ಎಂದು ಬನ್ಸಾಲಿ ಸ್ಪಷ್ಟನೆನೀಡಿರುವುದಾಗಿ ಹೇಳಿದ್ದು, ಡಿಸೆಂಬರ್‌ 1ರಂದು ಸಿನಿಮಾ ಬಿಡುಗಡೆಯಾಗಲಿದೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com