Mysore : ಗಂಡನ ಜೊತೆಗೆ ಜಗಳವಾಡಿ ಮನೆಬಿಟ್ಟ ನವವಿವಾಹಿತೆ ಶವವಾಗಿ ಪತ್ತೆ…

ಮೈಸೂರು : ಮೂರು ದಿನಗಳ ಹಿಂದೆ ನಾಪತ್ತೆಯಾದ ನವವಿವಾಹಿತೆ ಶವವಾಗಿ ಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ರುಕ್ಮಿಣಿ (೨೪)ಮೃತಪಟ್ಟ ಮಹಿಳೆ. ಮೂರು ತಿಂಗಳ ಹಿಂದೆ ಶಾದನಹಳ್ಳಿಯ ಪುನೀತ್ ಎಂಬಾತನೊಂದಿಗೆ ರುಕ್ಮಿಣಿಯ ವಿವಾಹವಾಗಿತ್ತು. ಮೊದಲ 3 ತಿಂಗಳಲ್ಲೆ ದಂಪತಿಗಳ ನಡುವೆ ಜಗಳ ಶುರುವಾಗಿದ್ದವು. ಗಂಡನ ಮನೆಯವರ ಬೇಡಿಕೆಗಳನ್ನು ಪುರೈಸಲು ಆಗದ  ವದುವಿನ ಕಡೆಯವರು ಪರದಾಡಿದ್ದರು ಎಂದು ಹೇಳಲಾಗುತ್ತದೆ.   ಈ ನಡುವೆ ಅಕ್ಟೋಬರ್ 27ರಂದು ಗಂಡನ ಜೊತೆಗೆ ಜಗಳವಾಡಿ ರುಕ್ಮಿಣಿ ಮನೆ ಬಿಟ್ಟಿದ್ದ ರು. ಇದೀಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೊರೂರಿನ ವರುಣಾ ನಾಲೆಯಲ್ಲಿ ರುಕ್ಮಿಣಿ ಶವವಾಗಿ ಪತ್ತೆಯಾಗಿದ್ದಾರೆ.

ಗ್ರಾಮಾಂತರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸ ಇಲಾಖೆಯ ಹಿರಿಯ ಅಧಿಕಾರಿಗಳು ತಂಡ ರಚಿಸಿ ತನಿಖೆ ಆರಂಬಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com