ಇಷ್ಟವಿಲ್ಲದ ಮದುವೆಯಿಂದ ಬೇಸತ್ತ ಯುವತಿ 17 ಜನರ ಸಾವಿಗೆ ಕಾರಣವಾಗಿದ್ದು ಹೇಗೆ..?

ಪೂರ್ವ ಪಾಕಿಸ್ತಾನದ ಅಲಿಪುರ ಎಂಬ ಚಿಕ್ಕ ಹಳ್ಳಿಯಲ್ಲಿ ನವವಿವಾಹಿತೆಯೊಬ್ಬಳು ತನ್ನ ಗಂಡನ ಮನೆಯವರ 17 ಜನರ ಸಾವಿಗೆ ಕಾರಣಳಾಗಿದ್ದಾಳೆ. ಆಸಿಯಾ ಬೀಬಿ ಎಂಬ 21 ವರ್ಷದ ಯುವತಿಗೆ ಆಕೆಯ ತಂದೆ ತಾಯಿ ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ.
ಆಸಿಯಾ ಬೀಬಿ ‘ನಾನು ತುಂಬಾ ಸಲ ತಂದೆ ತಾಯಿಯನ್ನು ನನ್ನಿಷ್ಟದ ವಿರುದ್ಧವಾಗಿ ಮದುವೆ ಮಾಡಬೇಡಿ ಎಂದು ಕೇಳಿಕೊಂಡೆ. ಇಸ್ಲಾಮ್ ಧರ್ಮ ಕೂಡ ನನಗಿಷ್ಟವಾದ ವ್ಯಕ್ತಿಯೊಂದಿಗೆ ವಿವಾಹವಾಗಲು ಅನುಮತಿ ಕೊಡುತ್ತದೆ. ಆದರೆ ನನ್ನ ಪಾಲಕರು ನನ್ನೆಲ್ಲ ವಿನಂತಿಗಳನ್ನೂ ತಿರಸ್ಕರಿಸಿದರು. ಈ ಮದುವೆಯಿಂದ ಹೊರಬರಲು ನಾನು ತುಂಬಾ ಪ್ರಯತ್ನಿಸಿದೆ. ಆದರೆ ವಿಚ್ಛೇದನ ನೀಡಲೂ ಸಹ ಒಪ್ಪಲಿಲ್ಲ ‘ ಎಂದು ಹೇಳಿದ್ದಾಳೆ.
Image result for asia poison husband killed
ಇಷ್ಟವಿಲ್ಲದ ಮದುವೆಯಿಂದ ಬೇಸತ್ತ ಆಸಿಯಾ ಬೀಬಿ, ತನ್ನ ಪ್ರಿಯಕರ ಶಾಹಿದ್ ಲಶರಿ ಬಳಿಗೆ ಹೋಗಿದ್ದಾಳೆ. ಪ್ರಿಯಕರ ಲಷರಿ ಆಸಿಯಾಗೆ ವಿಷ ತಂದುಕೊಟ್ಟು, ಇದನ್ನು ಹಾಲಿನಲ್ಲಿ ಬೆರೆಸಿ ಪತಿಗೆ ಕುಡಿಸಲು ಹೇಳಿದ್ದಾನೆ. ಅದರಂತೆ ವಿಷವನ್ನು ಹಾಲಿನಲ್ಲಿ ಬೆರೆಸಿದ ಆಸಿಯಾ ತನ್ನ ಪತಿಗೆ ಕುಡಿಯಲು ನೀಡಿದ್ದಾಳೆ. ಆದರೆ ಆತ ಕುಡಿಯಲು ನಿರಾಕರಿಸಿದ್ದಾನೆ. ಈ ವಿಷಯ ಗೊತ್ತಿಲ್ಲದ, ಆಸಿಯಾ ಅತ್ತೆ, ವಿಷ ಬೆರೆಸಲಾದ ಹಾಲನ್ನು ಬಳಸಿ ಲಸ್ಸಿಯನ್ನು ತಯಾರಿಸಿ 27 ಜನ ಸಂಬಂಧಿಕರಿಗೆ ನೀಡಿದ್ದಾಳೆ. ಲಸ್ಸಿ ಕುಡಿದ ತಕ್ಷಣ ಸಂಬಂಧಿಕರೆಲ್ಲರೂ ಅಸ್ವಸ್ಥರಾಗಿ ಪ್ರಜ್ಞೆ ತಪ್ಪಿದ್ದಾರೆ.
ಕೂಡಲೇ ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇದುವರೆಗೆ ಒಟ್ಟು 17 ಜನ ಮೃತಪಟ್ಟಿದ್ದು, 10 ಜನ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 17 ಜನರ ಸಾವಿಗೆ ಕಾರಣರಾದ ಆರೋಪದ ಮೇಲೆ ಆಸಿಯಾ ಬೀಬಿ ಹಾಗೂ ಲಷರಿಯನ್ನು ಬಂಧಿಸಿದ ಪೋಲೀಸರು ಕೋರ್ಟಿಗೆ ಹಾಜರು ಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com