ಡಿಜಿ ಲಾಕರ್‌ ಬಳಸಿದ್ದೇ ತಪ್ಪಾ ? ಇದನ್ನು ಹೋಗಿ ಮೋದಿಗೆ ತೋರಿಸು ಅಂದಿದ್ಯಾಕೆ ಪೊಲೀಸರು..?

ಅಲಹಾಬಾದ್ : ಇತ್ತೀಚೆಗಷ್ಟೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ವ್ಯವಹಾರವನ್ನು ಡಿಜಿಟಲ್‌ ರೂಪದಲ್ಲಿ ನಡೆಸುವಂತೆ ಗ್ರಾಹಕರಿಗೆ ಸೂಚನೆ ನೀಡುತ್ತಿದೆ. ಅಲ್ಲದೆ, ಇತ್ತೀಚಿಗೆ ದಾಖಲೆಗಳನ್ನು, ಪ್ರಮಾಣ ಪತ್ರಗಳನ್ನು ಡಿಜಿಟಲ್‌ ರೂಪದಲ್ಲಿ ಮಾರ್ಪಾಟು ಮಾಡಲಾಗಿದ್ದು, ಡಿಜಿ ಲಾಕರ್‌ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಅದರಂತೆ ಬೈಕ್‌ ಸವಾರನೊಬ್ಬ ಡಿಜಿ ಲಾಕರ್‌ನಲ್ಲಿ ತನ್ನ ದಾಖಲೆಗಳನ್ನಿಟ್ಟುಕೊಂಡು ತೆರಳುತ್ತಿದ್ದ ವೇಳೆ ಟ್ರಾಫಿಕ್‌ ಪೊಲೀಸರು ಆತನನ್ನು ಹಿಡಿದಿದ್ದಾರೆ. ಡಿಜಿ ಲಾಕರ್‌ನಲ್ಲಿದ್ದ ದಾಖಲೆಗಳನ್ನು ತೋರಿಸಿದ್ದಕ್ಕೆ ಬೈಕ್‌ ಸವಾರನ ಜೊತೆ ಪೊಲೀಸರು ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ.

ನಿನ್ನೆ ತಡರಾತ್ರಿ ಬೈಕ್‌ ಸವಾರನೊಬ್ಬ ತನ್ನ ದಾಖಲೆಗಳನ್ನು ಡಿಜಿ ಲಾಕರ್‌ನಲ್ಲಿಟ್ಟುಕೊಂಡು ತೆರಳಿದ್ದಾನೆ.ಈ ವೇಳೆ ಟ್ರಾಫಿಕ್‌ ಪೊಲೀಸರು ಆತನನ್ನು ಹಿಡಿದು ದಾಖಲೆಗಳನ್ನು ಕೇಳಿದ್ದಾರೆ. ಡಿಜಿ ಲಾಕರ್‌ನಲ್ಲಿದ್ದ ದಾಖಲೆಗಳನ್ನು ತೋರಿಸಿದ ಬಳಿಕ ಸಿಟ್ಟಿಗೆದ್ದ ಪೊಲೀಸರು ಇದು ನಮ್ಮ ಬಳಿ ನಡೆಯುವುದಿಲ್ಲ. ಮೂಲ ದಾಖಲೆಗಳೇ ಬೇಕು. ಇಲ್ಲವಾದರೆ ದಂಡ ಪಾವತಿಸುವಂತೆ ಆದೇಶಿಸಿದ್ದಾರೆ. ಅದಕ್ಕೆ ಸವಾರ ಹಾಗಾದರೆ ಕೇಂದ್ರ ಸರ್ಕಾರ ಜಾರಿಗೆ ತಂದ ಡಿಜಿ ಲಾಕರ್‌ ವ್ಯವಸ್ಥೆಗೆ ಮಾನ್ಯತೆ ಇಲ್ಲವೆ ಎಂದು ಪ್ರಶ್ನಿಸಿದ್ದಾನೆ.

ಅದಕ್ಕೆ ಪೊಲೀಸರು ಇದನ್ನು ತೆಗೆದುಕೊಂಡು ಹೋಗಿ ಮೋದಿಗೆ ತೋರಿಸು, ನಮ್ಮ ಮುಂದೆ ನಡೆಯೋದಿಲ್ಲ. ಅಲ್ಲದೆ ಸಂಚಾರಿ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಐದು ಸಾವಿರ ದಂಡ ಹಾಕಿದ್ದಾರೆ.

ಇದರಿಂದ ಕಂಗಾಲಾದ ಸವಾರ ಸೋಶಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com