ರಾಹುಲ್‌ ಗಾಂಧಿ ಪ್ರಧಾನಿಯಾಗಬೇಕು, ಅಲ್ಲಿಯವರೆಗೂ ನಾನು ಮದುವೆಯಾಗಲ್ಲ ಎಂದ ಅಭಿಮಾನಿ…!!!!

ಚಂಡೀಗಢ : ಎಐಸಿಸಿ ಉಪಾಧ್ಯಕ್, ರಾಹುಲ್‌ ಗಾಂಧಿ ಅವರು ನಮ್ಮ ದೇಶದ ಪ್ರಧಾನಿಯಾಗಬೇಕು. ಅವರು ಪ್ರಧಾನಿಯಾಗುವವರೆಗೂ ನಾನು ಮದುವೆಯಾಗುವುದಿಲ್ಲ ಎಂದು ಹರಿಯಾಣ ಯುವಕನೊಬ್ಬ ಪಣ ತೊಟ್ಟಿದ್ದಾನಂತೆ.

ದಿನೇಶ್‌ ಶರ್ಮಾ(23) ಎಂಬಾತ ರಾಹುಲ್‌ ಗಾಂಧಿಯವರ ಅಪ್ಪಟ ಅಭಿಮಾನಿಯಂತೆ. ರಾಹುಲ್‌ ದೇಶದ ಪ್ರಧಾನಿಯಾಗಬೇಕು ಎಂದು ಸಾಕಷ್ಟು ಕನಸು ಕಂಡಿದ್ದೇನೆ. ಅವರು ಪ್ರಧಾನಿಯಾಗುವ ವರೆಗೂ ನಾನು ಮದುವೆಯಾಗುವುದಿಲ್ಲ ಎಂದಿದ್ದಾರೆ. ಅಲ್ಲದೆ ಕಳೆದ ಏಳು ವರ್ಷಗಳಿಂದ ರಾಹುಲ್‌ ಗಾಂಧಿಯವರ ಎಲ್ಲಾ ಕಾರ್ಯಕ್ರಮಕ್ಕೂ ಹಾಜರಾಗುತ್ತಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರತೀ ಬಾರಿ ಕಾಂಗ್ರೆಸ್ ಕಾರ್ಯಕ್ರಮಕ್ಕೆ ತೆರಳಿದಾಗಲೂ ಕಾಂಗ್ರೆಸ್‌ನ ಕೈ ಚಿಹ್ನೆಯ ಬಟ್ಟೆಯನ್ನೇ ಧರಿಸಿ, ಕಾಂಗ್ರೆಸ್‌ ಬಾವುಟ ಹಿಡಿದಿರುತ್ತಾರೆ.

ರಾಹುಲ್‌ ಗಾಂಧಿ ಅವರು ಯಾವ ಕಾರ್ಯಕ್ರಮಕ್ಕೆ ತೆರಳುತ್ತಾರೋ ಆ ಕಾರ್ಯಕ್ರಮದಲ್ಲೆಲ್ಲ ದಿನೇಶ್‌ ಹಾಜರಿರುತ್ತಾರೆ. ಅಲ್ಲದೆ ಪ್ರತೀ ಬಾರಿ ಚಪ್ಪಲಿ ಇಲ್ಲದೆ ಓಡಾಡುತ್ತಾರಂತೆ. ರಾಹುಲ್‌ ಗಾಂಧಿ ಕಾರ್ಯಕ್ರಮ ಎಂದರೆ ಊಟ , ತಿಂಡಿ ಎಲ್ಲವನ್ನೂ ಬಿಟ್ಟು ಬರುತ್ತಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

 

Leave a Reply

Your email address will not be published.

Social Media Auto Publish Powered By : XYZScripts.com