ಬ್ಯಾಟಿಂಗ್ ಹೋಗುವ ಮುನ್ನ ಲಕ್ಷ್ಮಣ್ ಏನು ಮಾಡ್ತಿದ್ರು? ಡ್ರೆಸಿಂಗ್ ರೂಮ್ ರಹಸ್ಯ ಬಿಚ್ಚಿಟ್ಟ ಸಚಿನ್..!

ಶೈಲೀಕೃತ ಬ್ಯಾಟ್ಸಮನ್ ಎಂದೇ ಹೆಸರಾಗಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಬುಧವಾರ ನವೆಂಬರ್ 1 ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳು, ಸೇರಿದಂತೆ ಹಲವಾರು ಜನ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಶುಭ ಕೋರಿದ್ದಾರೆ.

ಸಚಿನ್ ತೆಂಡೂಲ್ಕರ್ ಸಹ ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಅವರಿಗೆ ಜನ್ಮ ದಿನ ಶುಭಾಶಯ ಹೇಳಿದ್ದಾರೆ. ಅಷ್ಟು ಮಾತ್ರವಲ್ಲ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಸಹ ಆಟಗಾರ ವಿವಿಎಸ್ ಲಕ್ಷ್ಮಣ್ ಅವರ ಬಗೆಗಿನ ಡ್ರೆಸಿಂಗ್ ರೂಮ್ ಸೀಕ್ರೆಟ್ ಒಂದನ್ನು ಬಹಿರಂಗಗೊಳಿಸಿದ್ದಾರೆ. ಸ್ಟೈಲಿಶ್ ಬ್ಯಾಟಿಂಗ್ ಗೆ ಹೆಸರಾಗಿದ್ದ ಲಕ್ಷ್ಮಣ್ ಬ್ಯಾಟಿಂಗ್ ಗೆ ಹೋಗುವ ಮೊದಲು ಏನು ಮಾಡ್ತಿದ್ರು, ಎನ್ನುವ ರಹಸ್ಯವನ್ನು ಸಚಿನ್ ಟ್ವಿಟರಿನಲ್ಲಿ ಬಹಿರಂಗಗೊಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ‘ಹ್ಯಾಪಿ ಬರ್ತ್ ಡೇ ಲಕ್ಸ್, ನೀನು ಅಷ್ಟೊಂದು ರನ್ ಗಳಿಸುತ್ತಿದ್ದುದರ ಹಿಂದಿನ ಸೀಕ್ರೆಟನ್ನು ಬಹಿರಂಗಗೊಳಿಸಲಾ..? ಬ್ಯಾಟ್ ಮಾಡಲು ಹೋಗುವ ಮುನ್ನ ಷಾವರ್ ನಲ್ಲಿ ಸ್ನಾನ ಮಾಡಿ, ಸೇಬು ಹಣ್ಣನ್ನು ತಿನ್ನವುದು.. ಊಪ್ಸ್..’ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.