ಐಸಿಸ್‌ ದಾಳಿಯಿಂದ ಪಾರಾದ ಪ್ರಿಯಾಂಕಾ ಛೋಪ್ರಾ : ಘಟನೆ ಬಗ್ಗೆ ಹೇಳಿದ್ದೇನು ?

ವಾಷಿಂಗ್ಟನ್‌ : ಗುರುವಾರ ಬೆಳಗ್ಗೆ ಟ್ರಕ್ ಹರಿಸಿ ಎಂಟು ಮಂದಿಯನ್ನು ಹತ್ಯೆಗೈದ ಕೃತ್ಯ ಬಾಲಿವುಡ್‌ ನಟಿ ಪ್ರಿಯಾಂಕಾ ಛೋಪ್ರಾ ಅವರ ಮನೆಯ ಸಮೀಪವೆ ನಡೆದಿದೆ. ಪ್ರಿಯಾಂಕ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಆ್ಯಂಬುಲೆನ್ಸ್‌ ಸೈರನ್ ಕೇಳುತ್ತಿದ್ದು, ಇದರಿಂದಾಗಿ ದಾಳಿ ನಡೆದಿರುವುದು ತಿಳಿಯಿತು. ನಿಜಕ್ಕೂ ಇಂತಹ ದಾಳಿ ಹೇಯ ಕೃತ್ಯ. ಇದನ್ನು ಖಂಡಿಸುತ್ತೇನೆ. ದಾಳಿಯಲ್ಲಿ ಸಾವಿಗೀಡಾದವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಿಯಾಂಕ ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ದುರಂತ ನಡೆದ ಸ್ಥಳದಲ್ಲಿ ನೋಟ್‌ ಮೇಲೆ ಬರೆದ ಬರಹದಿಂದಾಗಿ ಅದು ಐಸಿಸ್‌ನವರ ಕೃತ್ಯ ಎಂದು ತಿಳಿದುಬಂದಿದೆ.

ಪ್ರಿಯಾಂಕಾ ಛೋಪ್ರಾ ಹಾಲಿವುಡ್‌ ಸಿನಿಮಾ ಹಾಗೂ ರಿಯಾಲಿಟಿ ಶೋನಲ್ಲಿ ಭಾಗಿಯಾಗುತ್ತಿರುವ ಕಾರಣ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ. ಹಾಲಿವುಡ್‌ ಸಿನಿಮಾದ ಬಳಿಕ ಅವರು ಪಿ.ಟಿ ಉಷಾ ಅವರ ಜೀವನಾಧಾರಿತ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲು ದೆಹಲಿಗೆ ಮರಳಲಿದ್ದಾರೆ.

 

 

 

 

 

 

Leave a Reply

Your email address will not be published.