ನಿಶ್ಚಿತಾರ್ಥದ ಬಳಿಕ ಲೈಂಗಿಕ ಕ್ರಿಯೆ ನಡೆಸಿ ಬಳಿಕ ಮದುವೆಯಾಗಲ್ಲ ಎಂದ ಯುವಕ : ಯುವತಿ ಆತ್ಮಹತ್ಯೆ

ಕೊಪ್ಪಳ : ನಿಶ್ಚಿತಾರ್ಥವಾದ ಬಳಿಕ ಯುವತಿಯನ್ನು ತಾನು ಮದುವೆಯಾಗುವುದಿಲ್ಲ ಎಂದು ಯುವಕ ಹೇಳಿದ್ದಕ್ಕಾಗಿ ಯುವತಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ತಾಲ್ಲೂಕಿನ ಹನಕುಂಟೆ ಗ್ರಾಮದ 23 ವರ್ಷದ ಸುಮಿತ್ರಾ ಎಂಬಾಕೆಗೆ ನಾಲ್ಕು ವರ್ಷದ ಹಿಂದೆ ಸಿದ್ದನಗೌಡ ಎಂಬಾತನ ಜೊತೆ ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥದ ಬಳಿಕ ಆತ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು. ಬಳಿಕ ತಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದಿದ್ದಾನೆ. ಇದರಿಂದ ಮನನೊಂದ ಯುವತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೆ ಆಕೆಯನ್ನು ಕೊಪ್ಪಳ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವಿಗೀಡಾಗಿದ್ದಾಳೆ ಎಂದು ತಿಳಿದಬಂದಿದೆ. ಕೊಪ್ಪಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com