ಕಿಚ್ಚ ಸುದೀಪ್, ರಾಜ್ಯೋತ್ಸವದಂದು ತಮ್ಮ ಅಭಿಮಾನಿಗಳಿಗೆ ಕ್ಷಮೆ ಕೇಳುವಂತಹ ತಪ್ಪು ಮಾಡಿದ್ದಾದರೂ ಏನು

ಬೆಂಗಳೂರು : ಕಿಚ್ಚ ಸುದೀಪ್ ಅಂದರೆ ಅಭಿಮಾನಿಗಳೆಲ್ಲರು ಹುಚ್ಚೆದ್ದು ಕುಣಿಯುತ್ತಾರೆ. ಸಾಧ್ಯವಾದಷ್ಟು ತಪ್ಪುಗಳನ್ನು ಕಡಿಮೆ ಮಾಡಿ ಎನ್ನುತ್ತಿದ್ದ ಕಿಚ್ಚ ಅದ್ಯಾಕೊ ಕನ್ನಡ ರಾಜ್ಯೋತ್ಸವದ ದಿನವಾದ ಇಂದು ತಪ್ಪು ಮಾಡಿದ್ದಾರೆ. ಅದಕ್ಕೆ ಕ್ಷಮೆಯನ್ನು ಕೋರಿ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ.

ಹೌದು ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಕಿಚ್ಚ ಸುದೀಪ್‌ ತಮ್ಮ ಟ್ವಿಟರ್‌ನಲ್ಲಿ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಷಯಗಳನ್ನು ಕೋರಿದ್ದರು. ಕನ್ನಡವಿಲ್ಲದೆ ನಾವಿಲ್ಲ ಕನ್ನಡವಲ್ಲದೆ ನಾವೇನು ಅಲ್ಲ ಇಂತಿ ನಿಮ್ಮ ಪ್ರೀತಿಯ ಕಿಚ್ಚ ಎಂದು ಟ್ವೀಟ್‌ ಮಾಡಿದ್ದರು.

ಆದರೆ ಅದರಲ್ಲಿ ಕೆಲ ಕಾಗುಣಿತ ತಪ್ಪುಗಳಿದ್ದವು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಕಾಗುಣಿತ ತಪ್ಪಿನ ಬಗ್ಗೆ ಕಿಚ್ಚನ ಗಮನ ಸೆಳೆದಿದ್ದರು. ಇದನ್ನು ಅರಿತುಕೊಂಡ ಕಿಚ್ಚ ಸುದೀಪ್‌ ಬಳಿಕ ಕನ್ನಡಿಗರ ಕ್ಷಮೆ ಕೇಳಿ ತಪ್ಪನ್ನು ತಿದ್ದಿಕೊಂಡಿದ್ದಾರೆ.

 

One thought on “ಕಿಚ್ಚ ಸುದೀಪ್, ರಾಜ್ಯೋತ್ಸವದಂದು ತಮ್ಮ ಅಭಿಮಾನಿಗಳಿಗೆ ಕ್ಷಮೆ ಕೇಳುವಂತಹ ತಪ್ಪು ಮಾಡಿದ್ದಾದರೂ ಏನು

Leave a Reply

Your email address will not be published.

Social Media Auto Publish Powered By : XYZScripts.com