Ola auto : ಆಟೋ ರಿಕ್ಷಾಗಳಲ್ಲಿ ಸವಾರಿ ಮಾಡುವವರಿಗೆ ಉಚಿತ ವೈಫೈ ಸೇವೆ…

ಸುಜಿತ್ ಕಳಸ

ಆಟೋ ಗಾಹಕರನ್ನು ಸೆಳೆಯಲು 4 ಕಿ.ಮಿಗೆ ಕೇವಲ 29 ರೂಪಾಯಿಗಳ ಆಫರ್ ನಿಡಿದ್ದ ಆಪ್‌ ಆಧಾರಿತ ಕ್ಯಾಬ್ ಸೇವಾ ಸಂಸ್ಥೆ ಓಲಾ ಇದೀಗ ಮತ್ತೊಂದು ಹೆಚ್ಚೆ ಮುಂದೆಹೋಗಿದೆ.! ಇದೀಗ ತನ್ನ ಆಟೋ ರಿಕ್ಷಾಗಳಲ್ಲಿ ಸವಾರಿ ಮಾಡುವವರಿಗೆ ಉಚಿತ ವೈ ಪೈ ನೀಡಲು ಓಲಾ ಮುಂದಾಗಿದೆ.!! ‘ಆಟೋ-ಕನೆಕ್ಟ್ ವೈ ಫೈ’ ಎನ್ನುವ ಹೆಸರಿನಲ್ಲಿ ಉಚಿತ ವೈಪೈ ಸೌಲಭ್ಯ ಒದಗಿಸಲು ಓಲಾ ನಿರ್ಧರಿಸಿದ್ದು, ಪಾರದರ್ಶಕ ಬೆಲೆಗಳಂತಹ ಗ್ರಾಹಕ ಸ್ನೇಹಿ ಕೊಡುಗೆಗಳೊಂದಿಗೆ ಇದೀಗ ಉಚಿತ ವೈಫೈ ಅಂತರ್ಜಾಲ ಸಂಪರ್ಕವನ್ನು ಸೇರಿಸುವ ಮೂಲಕ ಓಲಾ ಇನ್ನಷ್ಟು  ಗ್ರಾಹಕರನ್ನು ಸೆಳೆಯುವತ್ತ ಮುಖಮಾಡಿದೆ.!!

ಪ್ರಯಾಣ ಮಾರ್ಗದಲ್ಲಿ ಪ್ರಯಾಣಿಕರು ಮತ್ತು ಚಾಲಕರು ಆನ್‌ಲೈನ್‌ನಲ್ಲಿ ಇರುವ ಮೂಲಕ ನಾವು ಸಾರಿಗೆ ವಲಯದಲ್ಲಿ ಇದಾಗಲೇ ಮುಂಚೂಣಿಯಲ್ಲಿದ್ದೇವೆ, ಇದೀಗ ಆಟೋ-ಕನೆಕ್ಟ್ ವೈಫೈ ನೊಂದಿಗೆ ತ್ರಿಚಕ್ರ ವಾಹನಗಳ ಸಂಚಾರದಲ್ಲಿ ನಮ್ಮ ಗ್ರಾಹಕರಿಗೆ ಇನ್ನಷ್ಟು ಅನುಕೂಲ ಕಲ್ಪಿಸುತ್ತೇವೆ” ಎಂದು ಓಲಾದ ಆಟೋ ವಿಭಾಗದ ಮುಖ್ಯಸ್ಥ, ಸಿದ್ದಾರ್ಥ್ ಅಗರ್ವಾಲ್ ಹೇಳಿದ್ದಾರೆ.!!

ಪ್ರಯಾಣದ ವೇಳೆ ಕಳೆದ ಸಮಯದ ಗುಣಮಟ್ಟವನ್ನು ಸುಧಾರಿಸಲು ನಾವು ಬಯಸುವುದಷ್ಟೇ ಅಲ್ಲದೆ ದೇಶಾದ್ಯಂತ ಲಕ್ಷಾಂತರ ಬಳಕೆದಾರರಿಗೆ ಸುಲಭ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತಿದ್ದೇವೆ. ಸ್ವಯಂ-ಕನೆಚ್ಟ್ ವೈಫೈ ಯೋಜನೆಯನ್ನು  ಡಿಜಿಟಲ್ ಇಂಡಿಯಾದಂತಹಾ ಸರ್ಕಾರದ ಪ್ರಮುಖ ಉಪಕ್ರಮಗಳ ಅಡಿಯಲ್ಲಿ ನಿರ್ಮಿಸಲಾಗಿದೆ ಎಂದು ಅಗರ್ವಾಲ್ ಹೇಳಿದ್ದಾರೆ.!!

Leave a Reply

Your email address will not be published.