ಸಿದ್ದರಾಮಯ್ಯ ಅವರ ಸರದಿ ಮುಗಿದ ಮೇಲೆ ನಾನೇ ಸಿಎಂ : ಎಂ.ಬಿ ಪಾಟೀಲ್

ಬೆಂಗಳೂರು : 2018ರ ಚುನಾವಣೆಯನ್ನು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ನಡೆಸುತ್ತೇವೆ. ನನಗೂ ಸಿಎಂ ಆಗುವ ಆಸೆಯಿದೆ. ಆಸೆ ಪಡುವುದರಲ್ಲಿ ತಪ್ಪೇನು ಇಲ್ಲ ಎಂದು ಸಚಿವ ಎಂ.ಬಿ ಪಾಟೀಲ್‌ ಹೇಳಿದ್ದಾರೆ.

ವಿಜಯಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಂ.ಬಿ ಪಾಟೀಲ್, ನನಗೂ ಸಿಎಂ ಆಗುವ ಆಸೆಯಿದೆ. ಮುಂದಿನ ಬಾರಿ ಸಿದ್ದರಾಮಯ್ಯನವರೇ ಸಿಎಂ ಆಗಲಿದ್ದಾರೆ. ಬಳಿಕ ಸಿಎಂ ಆಗುವ ಸರದಿ ನನ್ನದು ಎಂದಿದ್ದಾರೆ.

ಇದೇ ಪ್ರತ್ಯೇಕ ದ್ವಜ ತರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿರುವ ಪಾಟೀಲ್‌, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಆಯಾ ರಾಜ್ಯಗಳಿಗೆ ಪ್ರತ್ಯೇಕ ಧ್ವಜಗಳಿವೆ. ಆದ್ದರಿಂದ ನಮ್ಮ ರಾಜ್ಯದಲ್ಲಿ ಪ್ರತ್ಯೇಕ ದ್ವಜ ತರುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಕನ್ನಡ ನೆಲ, ಜಲ, ರಕ್ಷಣೆಯಲ್ಲಿ ಅನೇಕ ಮಹನೀಯರು ಅಪಾರ ಕೊಡುಗೆ ನೀಡಿದ್ದಾರೆ. ನಮ್ಮದು ಶರಣರ ನಾಡು. ಶರಣರ ಆಶಯದಂತೆ ಜನಸೇವೆ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ನೀರಾವರಿಗೆ ಹೆಚ್ಚಿನ ಮಹತ್ವ ನೀಡಿದೆ. ವಿಜಯಪುರವನ್ನು ಬರಮುಕ್ತ ಜಿಲ್ಲೆಯನ್ನಾಗಿ ಮಾಡಸಲು ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ.

Leave a Reply

Your email address will not be published.