ಮಾಡೆಲಿಂಗ್ ನಲ್ಲಿ ಮಿಂಚುತ್ತಿರುವ ಚಾಂದಿನಿ ಮುಕುಟಕ್ಕೆ ಮಿಸೆಸ್ ಸೌತ್ ಇಂಡಿಯಾ runner up ಗರಿ

ಕೇರಳದ ಆಲೆಪ್ಪಿಯಲ್ಲಿ ಮಿಸೆಸ್ ಸೌತ್ ಇಂಡಿಯಾ ಸ್ಫರ್ಧೆ ನಡೆಯುತ್ತಿತ್ತು. ಆಕೆ ಬರೋಬ್ಬರಿ ಎರಡು ವರ್ಷದ ಗ್ಯಾಪ್ ನಂತರ ರ್ಯಾಂಪ್ ಮೇಲೆ ವಾಕ್ ಮಾಡುತ್ತಿದ್ದರು. ಸಹಜವಾಗಿಯೇ ಮನಸಿನಲ್ಲಿ ನೂರೆಂಟು ಆಲೋಚನೆ, ಆತಂಕ ಮನೆ ಮಾಡಿತ್ತು. ಮಾಡೆಲ್ ಆಗಿ ಮಿಂಚಬೇಕೆಂಬ ತನ್ನ ಬಾಲ್ಯದ ಕನಸಿನ ಹಾದಿಗೆ ಮರಳಿದ ಸಂತೋಷವೂ ಇತ್ತು. ಅಂದು ಇವರ ಆತ್ಮವಿಶ್ವಾಸ ತುಂಬಿದ ನಡಿಗೆಯಿಂದ ಪ್ರಭಾವಿತರಾದ ಜಡ್ಜಸ್ ‘ಮಿಸೆಸ್ ಸೌತ್ ಇಂಡಿಯಾ’ ದ ಫರ್ಸ್ಟ್ ರನ್ನರ್ ಅಪ್ ಆಗಿ ಆಯ್ಕೆ ಮಾಡಿದರು. ಅಂದು ಬೆಂಗಳೂರಿನ ಚಾಂದಿನಿ ಹುಸ್ಸೇನ್ ರಲ್ಲಿ ತನಗಿಷ್ಟವಾದ ವೃತ್ತಿಗೆ ಮರಳಿದ ಸಂತೃಪ್ತಿ ಒಡಮೂಡಿತ್ತು.

Image may contain: 3 people, people standing

2012 ರಲ್ಲಿ ಮಿಸ್ ಬೆಂಗಳೂರು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಾಂದಿನಿ, ಅದರಲ್ಲಿ ಮಿಸ್ ಪಾಪುಲರ್ ಆಗಿ ಹೊರಹೊಮ್ಮಿದ್ದರು. 2013ರ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಫರ್ಸ್ಟ್ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದರು. ‘ ಇಂಡಿಯನ್ ಪ್ರಿನ್ಸೆಸ್ ‘ ಸ್ಪರ್ಧೆಯಲ್ಲಿ ಫೈನಲಿಸ್ಟ್ ಅಂದರೆ, ಟಾಪ್ – 16 ಹಂತದವರೆಗೆ ತಲುಪಿದ್ದರು.

ಬೆಂಗಳೂರು ನಗರದ ನೆಲಮಂಗಲದ ಚಾಂದಿನಿ, ಬೆಂಗಳೂರಿನ ಜಿಂದಾಲ್ ಪಬ್ಲಿಕ್ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿ, ತುಮಕೂರಿನ ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (SIT) ಬಯೋ ಟೆಕ್ ಪದವಿಯನ್ನು ಪಡೆದಿದ್ದಾರೆ. ವೈಯಕ್ತಿಕ ಕಾರಣಗಳಿಂದ 2013 ರಿಂದ ಎರಡು ವರ್ಷ ಮಾಡೆಲಿಂಗ್ ಕ್ಷೇತ್ರದಿಂದ ದೂರ ಉಳಿದಿದ್ದ ಚಾಂದಿನಿ, ಈ ವಿರಾಮದ ಸಮಯದಲ್ಲಿ ಬೆಂಗಳೂರಿನ ಸಹಕಾರ ನಗರದಲ್ಲಿರುವ ಮೇಪಲ್ ಬಿಯರ್ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.

Image may contain: 4 people

YOLO – You Live Only Once ಎನ್ನುವ ಹಾಗೆ, ನಾವೆಲ್ಲ ಜೀವಿಸುವುದು ಒಂದೇ ಸಲ, ಹಾಗಾಗಿ ನಮ್ಮ ಇಚ್ಛೆಯಂತೆ ಬದುಕಬೇಕು, ನಮಗನಿಸಿದ್ದನ್ನು ಮಾಡಬೇಕು ಎಂಬ ಸ್ವಾತಂತ್ರ್ಯ ಮನೋಭಾವವನ್ನು ಚಾಂದಿನಿ ಹೊಂದಿದ್ದಾರೆ. ಇತ್ತೀಚೆಗೆ ಏನ್ ಸುದ್ದಿ ಕಛೇರಿಗೆ ಆಗಮಿಸಿದ್ದ ಚಾಂದಿನಿ ಹುಸ್ಸೇನ್ ಮಾಡೆಲಿಂಗ್ ಲೋಕದ ತಮ್ಮ ಸಿಹಿ – ಕಹಿ, ಅನುಭವ, ತಮ್ಮ ಗುರಿ, ಕನಸುಗಳ ಬಗ್ಗೆ ಮಾತನಾಡಿದ್ದಾರೆ.

ಮಾಡೆಲಿಂಗ್ ನತ್ತ ಆಕರ್ಷಣೆ ಬೆಳೆದದ್ದು ಹೇಗೆ..?
ಚಿಕ್ಕವಳಿದ್ದಾಗ ಟಿವಿಯಲ್ಲಿ ಮಾಡೆಲ್ಸ್ ರ್ಯಾಂಪ್ ಮೇಲೆ ಕ್ಯಾಟ್ವಾಕ್ ಮಾಡೋದನ್ನ ನೋಡ್ತಿದ್ದೆ. Centre of attraction ಆಗದು, ಅಲ್ಲಿ ಸಿಗುವ attention, ಎಲ್ಲರ ಗಮನ ಅವರ ಮೇಲೆಯೇ ಇರೋದು ರೋಮಾಂಚಕ ಅನುಭವ ಅನಿಸುತ್ತಿತ್ತು. ನನಗೂ ಅದನ್ನು ಫೀಲ್ ಮಾಡಬೇಕು ಅನ್ನುವ ಆಸೆ ಬಾಲ್ಯದಲ್ಲೇ ಚಿಗುರೊಡೆದಿತ್ತು.

Image may contain: 3 people, people smiling, people standing

ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಹೇಗೆ..?
‘ 2012 ರಲ್ಲಿ ಮಿಸ್ ಬ್ಯಾಂಗಲೋರ್ ಸ್ಪರ್ಧೆಗೆ ಆಡಿಶನ್ ಅಟೆಂಡ್ ಮಾಡಿದ್ದೆ. ಅಲ್ಲೇ ನಾನು ಮೊದಲ ಸಲ ರ್ಯಾಂಪ್ ವಾಕ್ ಮಾಡಿದ್ದು. ಅಲ್ಲಿ ಸೆಲೆಕ್ಟ್ ಆದೆ. ಸ್ಟೋರ್ ಗೆ ಭೇಟಿ ನೀಡುವ ಗ್ರಾಹಕರು ತಮ್ಮ ಮೊಬೈಲ್ ಮೆಸೇಜ್ ಮೂಲಕ ವೋಟ್ ಮಾಡಬೇಕಿತ್ತು. ಅತಿ ಹೆಚ್ಚು ವೋಟ್ಸ್ ಗಳಿಸಿದವರಿಗೆ ವಿನ್ನರ್ ಆಗುವ ಅವಕಾಶವಿತ್ತು. ನಂಗೆ ಆ ಕಾಂಪಿಟೇಶನ್ನಿನಲ್ಲಿ ಫರ್ಸ್ಟ್ ಅವಾರ್ಡ್ ಬರಲಿಲ್ಲವಾದರೂ, ‘ ಮಿಸ್ ಪಾಪ್ಯೂಲರ್ ‘ ಟೈಟಲ್ ನನಗೆ ದೊರಕಿತ್ತು.
ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಅದರಲ್ಲಿ ಫರ್ಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಇಂಡಿಯನ್ ಪ್ರಿನ್ಸೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಟಾಪ್ -16 ವರೆಗೂ ಹೋಗಿದ್ದೆ. ಸೌತ್ ಇಂಡಿಯಾದಿಂದ ನಾನೊಬ್ಬಳೇ ಫೈನಲ್ ತಲುಪಿದ್ದೆ ಅನ್ನೋದು ಹೆಮ್ಮೆಯ ವಿಚಾರ. ಇತ್ತೀಚೆಗೆ ಆಗಸ್ಟ್ ನಲ್ಲಿ ಕೇರಳದ ಅಲೆಪ್ಪಿಯಲ್ಲಿ ಮಿಸೆಸ್ ಸೌತ್ ಇಂಡಿಯಾ ಸ್ಪರ್ಧೆ ಇರುವುದು ತಿಳಿದು ಯಾಕೆ ಟ್ರೈ ಮಾಡಬಾರದು ಅನಿಸಿತು ‘

Image may contain: 1 person, close-up

ನಿಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಏನು ಮಾಡ್ತೀರಿ..?

ಬೆಳಿಗ್ಗೆ ಹಾಗೂ ಸಾಯಂಕಾಲ ಒಂದು ಗಂಟೆ ಜಾಗಿಂಗ್ ಮಾಡ್ತೀನಿ. ಜಿಮ್ ಗೆ ಹೋಗಿ ವರ್ಕೌಟ್ ಮಾಡುವುದಿಲ್ಲ. ಬೆಳಿಗ್ಗೆ ಸಾಯಂಕಾಲ ಒಂದು ಗಂಟೆ ವಾಕಿಂಗ್, ಜಾಗಿಂಗ್ ಮಾಡ್ತೀನಿ ಅಷ್ಟೆ. ಜೀರೋ ಸೈಜ್ ನಲ್ಲಿ ನನಗೆ ನಂಬಿಕೆಯಿಲ್ಲ.

ನಿಮ್ಮ ಫೇವರಿಟ್ ಫುಡ್..?

ಫೇವರಿಟ್ ಅಂತ ಯಾವುದೂ ಇಲ್ಲ. ನಾನ್ ತುಂಬ ಫೂಡಿ.. ಎಲ್ಲವನ್ನೂ ತಿಂತೀನಿ.. ಅದು ತಿನ್ನಬಾರದು, ಇದು ತಿನ್ನಬಾರದು ಎಂಬ ನಿಯಮಗಳನ್ನೇನು ಪಾಲಿಸುವುದಿಲ್ಲ.. ಸ್ವೀಟ್ ಡಿಶಸ್ ಅಂದರೆ ಇಷ್ಟ.. ಕೆಲವೊಮ್ಮೆ ಜಾಸ್ತಿ ತಿಂದಾಗ, ಹೆಚ್ಚು ಜಾಗಿಂಗ್, ವಾಕಿಂಗ್ ಮಾಡಿ ಬ್ಯಾಲೆನ್ಸ್ ಮಾಡ್ತೀನಿ

ನಿಮ್ಮ ಮೆಚ್ಚಿನ ಹಾಬೀಸ್..? 

ನನಗೆ ಅಡ್ವೆಂಚರ್ ಟ್ರಾವೆಲಿಂಗ್ ಅಂದರೆ ತುಂಬ ಇಷ್ಟ. ಸ್ಕೂಬಾ ಡೈವಿಂಗ್ ಮಾಡೋದು, ಟ್ರೆಕಿಂಗ್ ಹೋಗೋದು ಅಂದ್ರೆ ಇಷ್ಟ. ಅಂಡಮಾನ್ ನಲ್ಲಿ ಒಮ್ಮೆ ಸ್ಕೂಬಾ ಡೈವಿಂಗ್ ಮಾಡಿದ್ದೆ.

Image may contain: 1 person, smiling, close-up

ನಿಮ್ಮ ಪ್ರಕಾರ ಸದ್ಯ ಸಮಾಜ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಯಾವುದು..? ಅದರ ಪರಿಹಾರಕ್ಕೆ ನಿಮ್ಮ ಯೋಜನೆ, ಸಲಹೆಯೇನು..?

ನನಗೆ ತಿಳಿದಂತೆ ಪರಿಸರ ಮಾಲಿನ್ಯದ ಸಮಸ್ಯೆ ಇವತ್ತು ತುಂಬ ಗಂಭೀರವಾದದ್ದಾಗಿದೆ. ಅದರಲ್ಲೂ ವಾಯು ಮಾಲಿನ್ಯದಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ನಾವೆಲ್ಲರೂ ಹೆಚ್ಚೆಚ್ಚು ಗಿಡಗಳನ್ನು ನೆಡುವ ಅಗತ್ಯವಿದೆ. ಕಳೆದ ಜೂನ್ 5 ಪರಿಸರ ದಿನಾಚರಣೆಯಂದು ನಾನು ಕೆಲಸ ಮಾಡುತ್ತಿದ್ದ ಮೇಪಲ್ ಬಿಯರ್ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿಯವರು ಸೇರಿಕೊಂಡು 200 ಸಸಿಗಳನ್ನು ನೆಟ್ಟಿದ್ದೇವೆ. ನಾನು ವೈಯಕ್ತಿಕವಾಗಿ 100 ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದೇನೆ ‘ ಎನ್ನುತ್ತಾರೆ ಚಾಂದಿನಿ.

Image may contain: 3 people

ಇದುವರೆಗಿನ ಮಾಡೆಲ್ ಲೋಕದ ಅನುಭವ ಹೇಗಿತ್ತು..? ಸಿಹಿ – ಕಹಿ ಅನುಭವಗಳ ಬಗ್ಗೆ ಹೇಳಿ..

‘ Hmm,  ಈ ವಿಷಯದಲ್ಲಿ ನಾನು ತುಂಬಾ ಲಕ್ಕಿ ಅಂತಲೇ ಹೇಳಬೇಕು. ಯಾಕಂದರೆ ‘So far, I have met very beautiful people in this field ‘ ಒಳ್ಳೆಯ ಜನರೇ ಸಿಕ್ಕಿರುವುದರಿಂದ ಕಹಿ ಅನುಭವಗಳೇನು ಆಗಿಲ್ಲ. ನಾವು ಅವಕಾಶಗಳಿಗಾಗಿ ತುಂಬ ಕಾತರರಾಗಿದ್ದಾಗ ಮಾತ್ರ ಜನ ನಮ್ಮನ್ನ ತಮಗೆ ಬೇಕಾದ ಹಾಗೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ನಾನು ನನ್ನ ಪ್ರತಿಭೆಯನ್ನು ಅರಸಿ ಬರುವ ಅವಕಾಶಗಳನ್ನು ಉತ್ತಮ ರಿತಿಯಲ್ಲಿ ಬಳಸಿಕೊಳ್ಳುವತ್ತ ಗಮನ ನೀಡುತ್ತೇನೆ ಹಾಗಾಗಿ ಇಲ್ಲಿಯವರೆಗೆ ಯಾವ ಕೆಟ್ಟ ಅನುಭವವೂ ನನಗಾಗಿಲ್ಲ’ ಎಂದು ಹೇಳುತ್ತಾರೆ.

Image may contain: 3 people

ಜೀವನದಲ್ಲಿ  ನಿಮ್ಮ ಗುರಿ, ಕನಸು..?

ನಿರ್ದಿಷ್ಟವಾಗಿ ಇಂತಹದನ್ನು ಸಾಧಿಸಲೇ ಬೇಕು ಅಂತ ಅನ್ಕೊಂಡಿಲ್ಲ.. ಲೈಫ್ ಏನೇನು ಕೊಡ್ತಾ ಹೋಗುತ್ತೋ, ಅದನ್ನ ಖುಶಿಯಿಂದ ಸ್ವೀಕರಿಸುತ್ತೇನೆ. ನಾನು  ಮಹತ್ವಾಕಾಂಕ್ಷಿ ಅಲ್ಲ.

ಮನೆಯಲ್ಲಿ ಪ್ರೋತ್ಸಾಹ ಹೇಗಿದೆ..?

ಮಾಡೆಲಿಂಗ್ ಕ್ಷೇತ್ರವನ್ನೂ ಆಯ್ಕೆ ಮಾಡಿಕೊಂಡ ಆರಂಭದಿಂದಲೂ ಮನೆಯಲ್ಲಿ ಎಲ್ಲರೂ ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ಕುಟುಂಬದ ಮರ್ಯಾದೆಯನ್ನೂ ಕಾಪಾಡಿಕೊಂಡು ನನ್ನ ಕನಸುಗಳನ್ನೂ ಈಡೇರಿಸಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ.

Leave a Reply

Your email address will not be published.

Social Media Auto Publish Powered By : XYZScripts.com