ಸೆಕ್ಸ್‌ಗೆ ಬಾ ಎಂದ ಪತಿ, ಬರಲ್ಲ ಎಂದ ಪತ್ನಿ….ಆಮೇಲೇನಾಯ್ತು ಅಂತ ಕೇಳಿದ್ರೆ ಬೆಚ್ಚಿ ಬೇಳ್ತೀರಾ..!!?

ಲಖನೌ : ಪತ್ನಿ ಲೈಂಗಿಕ ಕ್ರಿಯೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಪತಿ ಆಕೆಯ ಗುಪ್ತಾಂಗದ ಮೇಲೆ ಆ್ಯಸಿಡ್ ಹಾಕಿರುವ ಘಟನೆ ಉತ್ತರ ಪ್ರದೇಶದ ಕನೌಜ್‌ ಜಿಲ್ಲೆಯಲ್ಲಿ ನಡೆದಿದೆ.

ಪತಿ ತನ್ನ ಪತ್ನಿಯನ್ನು ಸೆಕ್ಸ್ ನಡೆಸಲು ಕರೆದಿದ್ದಾನೆ. ಆದರೆ ಹೆಂಡತಿ ಇದಕ್ಕೆ ನಿರಾಕರಿಸಿದ್ದಾಳೆ. ಆದರೆ ಹೆಂಡತಿಗೆ ಇಷ್ಟವಿಲ್ಲದಿದ್ದರೂ ಆಕೆಯನ್ನು ಬಲವಂತ ಮಾಡಿದ್ದಾನೆ. ಆದರೆ ಅದಕ್ಕೊಪ್ಪದ ಪತ್ನಿಯ ಗುಪ್ತಾಂಗಕ್ಕೆ ಆ್ಯಸಿಡ್‌ ಹಾಕಿದ್ದಾನೆ. ಬಳಿಕ  ಆಕೆಯ ಕಿರುಚಾಟವನ್ನು ಕೇಳಿದ ನೆರೆ ಹೊರೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಗೆ ಗಂಭೀರ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

ಕಳೆದ 6 ವರ್ಷಗಳ ಹಿಂದೆ ಸಂತ್ರಸ್ತ ಮಹಿಳೆ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಪತಿಯ ವಿರುದ್ದ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಆದರೆ ಆರೋಪಿಯನ್ನು ಇದುವರೆಗೂ ಬಂಧಿಸಿಲ್ಲ.

 

 

Leave a Reply

Your email address will not be published.