ಪ್ರತಿಭಟನಾ ನಿರತ ಸಾರಿಗೆ ನೌಕರರ ಮೇಲೆ 31 FIR; 47 ನೌಕರರ ಬಂಧನ!

ಆರನೇ ವೇತನ ಆಯೋಗ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ನೌಕರರ ಬೇಡಿಕೆಯನ್ನು ಈಡೇರಿಸುವ ಬಗ್ಗೆಯಾಗಲೀ, ಮಾತುಕತೆಗೆ ಕರೆಯುವ ಬಗ್ಗೆಯಾಗಲೀ ಸರ್ಕಾರ ಒಲವು ತೋರದ ಹಿನ್ನೆಲೆಯಲ್ಲಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ನಿರ್ಧಾರಿಸಿದ್ದಾರೆ.

ಈ ವೇಳೆ, ಏಪ್ರಿಲ್‌ 15 ರಂದು ಸಾರಿಗೆ ಇಲಾಖೆಯ ಬಸ್‌ಗಳಿಗೆ ಕಲ್ಲು ತೂರಿದ ಆರೋಪದಲ್ಲಿ ನೌಕರರ ವಿರುದ್ಧ 31 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಈ ಪೈಕಿ ಕೆಎಸ್‌ಆರ್‌ಟಿಸಿ 28, ಬಿಎಂಟಿಸಿ 1, ಎನ್‌ಇಕೆಆರ್‌ಟಿಸಿ 2 ಪ್ರಕರಣಗಳನ್ನು ದಾಖಲಿಸಿದೆ. ಎಫ್‌ಐಆರ್‌ ಆಧಾರದ ಮೇಲೆ 47 ನೌಕರರನ್ನು ಕೆಸ್ಮಾ ಅಡಿ ಪೊಲೀಸರು ಬಂಧಿಸಿದ್ದಾರೆ.

ಎ.15ರಂದು 2006 ಕೆಎಸ್‌ಆರ್‌ಟಿಸಿ ಬಸ್‍ಗಳು, 707 ಬಿಎಂಟಿಸಿ, 786 ಎನ್‍ಇಕೆಆರ್‌ಟಿಸಿ, 644 ಎನ್‍ಡಬ್ಲ್ಯೂಕೆಆರ್‌ಟಿಸಿ ಬಸ್‍ಗಳು ರಾಜ್ಯದಲ್ಲಿ ಸಂಚರಿಸಿವೆ. ಈ ವೇಳೆ ಪ್ರತಿಭಟನಾ ನಿರತ ನೌಕರರು ಕಲ್ಲುತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಎಫ್‌ಐಆರ್‌ ದಾಖಲಾಗಿದೆ.

2,237 ನೌಕರರ ಹೆಸರು ಉಲ್ಲೇಖಿಸಿ ಆದೇಶ ಹೊರಡಿಸಿದ ಬಿಎಂಟಿಸಿ, ‘ಮುಷ್ಕರದಲ್ಲಿ ಪಾಲ್ಗೊಂಡಿರುವ ನೌಕರರು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದಾರೆ. ಅಲ್ಲದೇ ಹಿರಿಯ ನೌಕರರಾಗಿ ಸಂಸ್ಥೆಯ ಬಗೆಗೆ ವಿಶ್ವಾಸ ಕಳೆದುಕೊಂಡು ಸಂಸ್ಥೆಯು ಆರ್ಥಿಕವಾಗಿ ನಷ್ಟ ಅನುಭವಿಸುವಂತೆ ಮಾಡಿದ್ದಾರೆ. ಈ ಹಿನ್ನೆಲೆ 2,237 ಸಾರಿಗೆ ನೌಕರರು ಎ.15ರ ಸಂಜೆ 5ರೊಳಗೆ ತಮ್ಮ ಡಿಪೋಗಳಿಗೆ ಹಾಜರಾಗಬೇಕು. ಜೊತೆಗೆ ಯಾವ ಕಾರಣಕ್ಕೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಬಾರದು ಎಂದು ಲಿಖಿತ ಸಮಜಾಯಿಷಿ ನೀಡಬೇಕು’ ಎಂದು ಹೇಳಿದ್ದರೂ ನೌಕರರು ಡಿಪೋಗಳಿಗೆ ಹಾಜರಾಗಿ ಸಮಜಾಯಿಷಿ ನೀಡಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮುಷ್ಕರ ನಿರತ ಸಾರಿಗೆ ನೌಕರರ ಮೇಲೆ ಸರ್ಕಾರದ ದರ್ಪ; 271 ಚಾಲಕ-ನಿರ್ವಾಹಕರ ಅಮಾನತು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights