ಜಿಯೋ DTH ಮುಂದೆ ಮಂಡಿಯೂರಿದ ಅನಿಲ್ ಅಂಬಾನಿ..!! ನ.18ಕ್ಕೆ ರಿಲಯನ್ಸ್ ಡಿಜಿಟಲ್ ಟಿವಿ ಬಂದ್..!

          ಸುಜಿತ್ ಕಳಸ

ಜಿಯೋ ಟೆಲಿಕಾಂ ಮಾರುಕಟ್ಟೆಯಲ್ಲಿ ಮಾಡಿದಂತಹ ಕ್ರಾಂತಿಕಾರಕ ಬದಾವಣೆಯಿಂದಾಗಿ ಭಾರೀ ಪ್ರಮಾಣದ ಲಾಭದಲ್ಲಿದ್ದ ಟೆಲಿಕಾಂ ಕಂಪನಿಗಳು ನಷ್ಟದ ಹಂತಕ್ಕೆ ತಲುಪಿದೆ. ಇದೇ ಮಾದರಿಯಲ್ಲಿ ಜಿಯೋ DTH ಲೋಕಕ್ಕೂ ಎಂಟ್ರಿ ನೀಡಲಿದೆ ಎನ್ನಲಾಗಿದೆ. ಈ ಸುದ್ದಿಯ ಬೆನ್ನ ಹಿಂದೆಯೇ ರಿಲಯನ್ಸ್ ಕಮ್ಯೂನಿಕೇಷನ್ ತನ್ನ DTH ಸೇವೆಯನ್ನು ನಿಲ್ಲಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

2008ರಲ್ಲಿ ಸೇವೆಯನ್ನು ಆರಂಭಿಸಿದ್ದ ರಿಲಯನ್ಸ್ ಡಿಜಿಟಲ್ ಟಿವಿ, DTH ಲೋಕದಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಿತ್ತು. ಬೇರೆಲ್ಲಾ ಕಂಪನಿಗಳ ಲಾಭಕ್ಕೆ ಹೊಡತ ನೀಡಿತ್ತು. ಇಂತಹ ಕಂಪನಿಯೇ ಇಂದು ತನ್ನ ಸೇವೆಯನ್ನು ನಿಲ್ಲುವ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ಈಗಾಗಲೇ DTH ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಪರ್ಧೆ ಏರ್ಪಟಿರುವ ಹಿನ್ನಲೆಯಲ್ಲಿ ಮತ್ತು ಹೊಸ ಹೊಸ ಕಂಪನಿಗಳು ಬರುತ್ತಿರುವ ಕಾರಣ ರಿಲಯನ್ಸ್ ಡಿಜಿಟಲ್ ಟಿವಿ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ. ಸೇವೆಯಿಂದ ಹಿಂದೆ ಸೆರೆಯಲಿದೆ. ಮೂಲಗಳ ಪ್ರಕಾರ ನವೆಂಬರ್ 18ಕ್ಕೆ ಕೊನೆಯಾಗಲಿದೆ.
ರಿಲಯನ್ಸ್ ಡಿಜಿಟಲ್ ಟಿವಿ ದೇಶದಾದ್ಯಂತ ಸೇವೆಯನ್ನು ನೀಡುತ್ತಿದ್ದು, ಮುಂದಿನ ತಿಂಗಳಿನಿಂದ ದೇಶದಾದ್ಯಂತ ತನ್ನ ಸೇವೆಯನ್ನು ಸ್ಥಗಿತಗೊಳ್ಳಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ.


ಸದ್ಯ ರಿಲಯನ್ಸ್ ಡಿಜಿಟಲ್ ಟಿವಿ ಸೇವೆಯನ್ನು ಪಡೆಯುತ್ತಿರುವ ಗ್ರಾಹಕರನ್ನು ಬೇರೆ DTH ಸೇವೆಯನ್ನು ನೀಡುತ್ತಿರುವ ಕಂಪನಿಗಳೊಂದಿಗೆ ಸೇರ್ಪಡೆ ಮಾಡುವ ಕ್ರಮಕ್ಕೆ ರಿಲಯನ್ಸ್ ಮುಂದಾಗಲಿದೆ.

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಜಿ ಒಡೆತದ ಡಿಶ್ ಟಿವಿ, ರಿಲಯನ್ಸ್ ಡಿಜಿಟಲ್ ಟಿವಿ, ಟಾಟಾ ಸ್ಕೈ, ವಿಡಿಯೋಕಾನ್ d2h, ಸನ್ ಡೈರೆಕ್ಟ್, ಏರ್‌ಟೆಲ್ ಡಿಜಿಟಲ್ ಟಿವಿ, ಮತ್ತು ಸರಕಾರಿ ಒಡೆತನದ DD ಡೈರೆಕ್ಟ್ ಪ್ಲಸ್ ಸೇವೆಯನ್ನು ನೀಡುತ್ತಿವೆ.

Leave a Reply

Your email address will not be published.