ಸುರೇಶ್ ರೈನಾಗೆ ವೈಫೈ ಪಾಸ್ವರ್ಡ್ ಕೇಳಿದ ಮಯಂತಿ ಲ್ಯಾಂಗರ್ : ಫನ್ನಿ ಉತ್ತರ ನೀಡಿದ ಫ್ಯಾನ್ಸ್

ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೆಯ ಏಕದಿನ ಪಂದ್ಯವನ್ನು 6 ರನ್ ಗಳಿಂದ ಜಯಿಸಿದ ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿತ್ತು. ಅವತ್ತು ಕ್ರಿಕೆಟ್ ನಿರೂಪಕಿಯಾಗಿರುವ ಸ್ಟುವರ್ಟ್ ಬಿನ್ನಿ ಪತ್ನಿ ಮಯಂತಿ ಲ್ಯಾಂಗರ್, ಕ್ರಿಕೆಟ್ ಕವರೇಜ್ ಮಾಡಲು ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿದ್ದರು. ಮಯಂತಿ ತಮ್ಮ ಮೊಬೈಲ್ ನಲ್ಲಿ ವೈಫೈ ನೆಟ್ವರ್ಕ್ ಚೆಕ್ ಮಾಡಿದಾಗ, ಅದರಲ್ಲಿ ಭಾರತದ ಎಡಗೈ ಬ್ಯಾಟ್ಸಮನ್ ‘ಸುರೇಶ್ ರೈನಾ’ ಹೆಸರನ್ನು ಹೊಂದಿದ್ದ ವೈಫೈ ನೆಟ್ವರ್ಕ್ ಕಾಣಿಸಿದೆ. ಕೂಡಲೇ ಅದರ ಸ್ಕ್ರೀನ್ ಶಾಟ್ ತೆಗೆದ ಮಯಂತಿ, ಟ್ವಿಟರಿನಲ್ಲಿ ಸುರೇಶ್ ರೈನಾಗೆ ಅದರ ಪಾಸ್ವರ್ಡ್ ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ವೀಟಿಗರು, ‘ಸುರೇಶ್ ರೈನಾ’ ಹೆಸರಿನ ನೆಟ್ವರ್ಕಿನ ಪಾಸ್ವರ್ಡ್ ಏನಿರಬಹುದೆಂದು ಗೆಸ್ ಮಾಡಿ ಕ್ರಿಯೇಟಿವ್ ಆಗಿ ಟ್ವೀಟ್ ಮಾಡಿದ್ದಾರೆ. ‘MSD’, ‘No short balls please’, ‘bouncers’ ಇರಬಹುದು ಚೆಕ್ ಮಾಡಿ ಅಂತೆಲ್ಲ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com