ವೈರಲ್ ಆಯ್ತು ಯಶ್ ಫೋಟೋ ತೆಗೆಯುತ್ತಿರುವ ಫೋಟೊ….ಏನಿದರ ಹಿಂದಿನ ರಹಸ್ಯ..?

ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾರೀ ಸುದ್ದಿಯಾಗುತ್ತಿದ್ದಾರೆ. ಯಶ್ ಬಾಲಕಿಯರಿಬ್ಬರ ಫೋಟೋ ತೆಗೆಯುತ್ತಿರುವ ಫೋಟೊ ಯಶ್ ಬಗ್ಗೆ ಅಭಿಮಾನಿಗಳಿಗೆ ಮತ್ತಷ್ಟು ಗೌರವ ಹೆಚ್ಚುವಂತೆ ಮಾಡಿದೆ.


ಯಶ್ ಮತ್ತು ರಾಧಿಕಾ ಭಾನುವಾರ ಹೋಟೆಲ್ಲೊಂದಕ್ಕೆ ಹೋಗಿದ್ದರು. ಈ ವೇಳೆ ಇಬ್ಬರು ಬಾಲಕಿಯರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಬಳಿಕ ಯಶ್ ಅವರನ್ನು ಕರೆದು ಇಬ್ಬರ ಫೋಟೊ ತೆಗೆಯುವಂತೆ ಕೇಳಿದ್ದಾರೆ. ಇದಕ್ಕೆ ಯಶ್ ತಾವು ಸ್ಟಾರ್ ಎಂಬುದನ್ನು ಮರೆತು ಇಬ್ಬರು ಬಾಲಕಿಯರ ಫೋಟೊ ತೆಗೆದಿದ್ದಾರೆ. ಅವರು ಬಾಲಕಿಯರ ಫೋಟೋ ತೆಗೆಯುತ್ತಿದ್ದ ಫೋಟೊವನ್ನು ರಾಧಿಕಾ ಪಂಡಿತ್ ತೆಗೆದಿದ್ದು, ಇದನ್ನು ಫೇಸ್ಬುಕ್ನಲ್ಲಿ ಹಾಕಿದ್ದಾರೆ.
ಹೊರ ರಾಜ್ಯದ ಇಬ್ಬರು ಬಾಲಕಿಯರು ಯಶ್ ಅವರನ್ನು ಕರೆದು ಫೋಟೊ ತೆಗೆಯುವಂತೆ ಕೇಳಿಕೊಂಡಾಗ ತೆಗೆದ ಅಪರೂಪದ ಫೋಟೊ ಇದು. ತಮ್ಮ ಫೋಟೋಗ್ರಾಫರ್ ಯಾರು ಎಂದು ಗೊತ್ತಾದರೆ ಅವರ ಪ್ರತಿಕ್ರಿಯೆ ಹೇಗಿರುತ್ತೋ ಎಂಬ ಶೀರ್ಷಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com