ಶೋಯೇಬ್ ಮೇಲೆ ಸಾನಿಯಾ ಮುನಿಸಿಗೆ ಕಾರಣವೇನು..? ಬೈಕ್ ತಂದಿಟ್ಟ ಕಿರಿಕ್..!

ಇತ್ತೀಚೆಗಷ್ಟೆ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ ನಡೆದ ಟಿ-20 ಸರಣಿಯನ್ನು ಜಯಿಸಿತ್ತು. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಪಾಕ್ ಬ್ಯಾಟ್ಸಮನ್ ಶೋಯೇಬ್ ಮಲಿಕ್ ಸರಣಿ ಶ್ರೇಷ್ಟ ಪ್ರಶಸ್ತಿಗೆ ಪಾತ್ರರಾಗಿದ್ದರು. ಮ್ಯಾನ್ ಆಫ್ ದಿ ಸಿರೀಸ್ ಆದ ಶೋಯೆಬ್ ಗೆ ಬಹುಮಾನದ ರೂಪದಲ್ಲಿ ಬೈಕ್ ನೀಡಲಾಗಿತ್ತು.

ಶೋಯೇಬ್ ಬೈಕ್ ಮೇಲೆ ಕುಳಿತಿರುವ ಚಿತ್ರವೊಂದನ್ನು ಟ್ವೀಟ್ ಮಾಡಿರುವ ಪತ್ನಿ ಸಾನಿಯಾ ಮಿರ್ಜಾ ‘ ಚಲೇ..?’ (ರೈಡ್ ಹೋಗೋಣವೇ..?) ಎಂದು ಕೇಳಿದ್ದರು.

ಇದಕ್ಕೆ ರಿಪ್ಲೈ ಮಾಡಿರುವ ಶೋಯೇಬ್ ಮಲಿಕ್, ‘ ಯೆಸ್ ಯೆಸ್, ಬೇಗ ರೆಡಿಯಾಗು ಜಾನ್, ರೈಡ್ ಹೋಗೋಣ, ಬರ್ತಾ ಇದೀನಿ ‘ ಎಂದು ಟ್ವೀಟ್ ಮಾಡಿದರು.

ಕೆಲ ಹೊತ್ತಿನ ಬಳಿಕ ಶೋಯೇಬ್ ಹಿಂದಿನ ಸೀಟಿನಲ್ಲಿ ಸಹ ಆಟಗಾರ ಶಾದಾಬ್ ಖಾನ್ ಕುಳಿತಿರುವ ಚಿತ್ರ ಪೋಸ್ಟ್ ಮಾಡಿದ ಸಾನಿಯಾ ‘ ನೆವರ್ ಮೈಂಡ್, ಆಗಲೇ ಬೇರೆ ಯಾರೋ ಹಿಂಬದಿಯ ಸೀಟಲ್ಲಿ ಕುಳಿತಂತಿದೆ ‘ ಎಂದು ಟ್ವೀಟ್ ಮಾಡಿದರು.

ಸಾನಿಯಾ ಟ್ವೀಟಿಗೆ ಪ್ರತಿಕ್ರಿಯೆ ನೀಡಿದ ಶೊಯೆಬ್ ಮಲಿಕ್, ‘ ನೋ, ನೋ ನಾನು ಅವನನ್ನು ಮೈದಾನದಲ್ಲೇ ಬಿಟ್ಟು ಬಂದಿದೀನಿ, ಏನೂ ತೊಂದರೆಯಿಲ್ಲ ‘ ಎಂದು ರಿಪ್ಲೈ ಮಾಡಿದ್ದಾರೆ.

ಗಂಡ ಹೆಂಡತಿ ರೈಡ್ ಹೋಗೋದಕ್ಕೆ ರೆಡಿಯಾಗಿದ್ದಾಗ, ತಾನು ಸುಮ್ಮನೆ ತೊಂದರೆ ಕೊಡ್ತಾ ಇದೀನಿ ಎಂದು ಭಾವಿಸಿದ ಶಾದಾಬ್ ‘ ಊಪ್ಸ್.. ಸಾರಿ ಭಾಭಿ ‘ ಎಂದು ಕ್ಷಮೆ ಕೇಳಿದ್ದಾರೆ.

Leave a Reply

Your email address will not be published.