ಭಿನ್ನಾಭಿಪ್ರಾಯವನ್ನು ತಪ್ಪಿಸಲು ಹಿಂದಿ ಕಲಿಯಿರಿ : ತನ್ನ ಯೋಧರಿಗೆ ಚೀನಾ ಸಲಹೆ

ಬೀಜಿಂಗ್‌ : ಭಾರತ-ಚೀನಾ ಗಡಿಯಲ್ಲಿ ಯೋಧರ ಮಧ್ಯೆ ಯಾವುದೇ ಅನಗತ್ಯ ವಾದ ಅತವಾ ಭಿನ್ನಾಭಿಪ್ರಾಯ ಮೂಡದಿರಲು ಚೀನೀ ಸೈನಿಕರು ಹಿಂದಿ ಭಾಷೆ ಕಲಿಯುವಂತೆ ಚೀನಾ ಸರ್ಕಾರ ಸೂಚಿಸಿದೆ.

ಕಳೆದ ವಾರವಷ್ಟೇ ಗೃಹ ಸಚಿವ ರಾಜನಾಥ್‌ ಸಿಂಗ್‌, ಇಂಡೋ ಟಿಬೆಟಿಯನ್‌ ಗಡಿ ಕಾಯುವ ಯೋಧರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಉಭಯ ದೇಶಗಳ ಸೇನಾ ಪಡೆಗಳ ನಡುವೆ ಸಹಜ ಸಂಭಾಷಣೆಗಾಗಿ ಭಾಷಾ ತರಬೇತಿ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕೆಲ ತಿಂಗಳ ಹಿಂದೆ ಭಾರತ ಹಾಗೂ ಚೀನಾ ಮಧ್ಯೆ ಡೋಕ್ಲಾಂ ವಿಚಾರದಲ್ಲಿ ಯುದ್ಧದ ಸನ್ನಿವೇಶ ನಿರ್ಮಾಣವಾಗಿತ್ತು. ಬಳಿಕ ಯೋಧರ ಮಧ್ಯೆ ಸಂಪರ್ಕ ಸಾಧಿಸಲು ಭಾಷೆ ಕಲಿಕೆ ಅಗತ್ಯ ಎಂದು ಅಂತಾರಾಷ್ಟ್ರೀಯ ಸಂಬಂಧಗಳ ಸಮಾಜ ವಿಜ್ಞಾನ ಶಾಂಘೈ ಅಕಾಡೆಮಿಯ ಸಂಶೋಧಕ ಹು ಜಿಯಾಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಎರಡು ರಾಷ್ಟ್ಪಗಳ ಯೋಧರಿಗೆ ಭಾಷಾ ಸಾಮ್ಯತೆ ಇದ್ದರೆ ಪರಿಸ್ಥಿತಿ ಉದ್ವಿಗ್ನಗೊಳ್ಳುವುದಿಲ್ಲ. ಇದರಿಂದ ಸ್ನೇಹ ಸಂಪಾದಿಸಬಹುದು ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com